Saturday, July 11, 2026
Homeಜಿಲ್ಲಾಸುದ್ದಿGavi Betta: ಪ್ರವಾಸಿಗರಿಂದ ರೀಲ್ಸ್‌ಗಾಗಿ ಡ್ರಿಫ್ಟಿಂಗ್: ಜಾನುವಾರುಗಳ ಮೇವು & ರಸ್ತೆಗೆ ಹಾನಿ, ಸ್ಥಳೀಯರ ಆಕ್ರೋಶ!

Gavi Betta: ಪ್ರವಾಸಿಗರಿಂದ ರೀಲ್ಸ್‌ಗಾಗಿ ಡ್ರಿಫ್ಟಿಂಗ್: ಜಾನುವಾರುಗಳ ಮೇವು & ರಸ್ತೆಗೆ ಹಾನಿ, ಸ್ಥಳೀಯರ ಆಕ್ರೋಶ!

Telegram Group
Join Now

ಹಾಸನ: ಪ್ರವಾಸಿಗರು ರೀಲ್ಸ್‌ಗಾಗಿ ಥಾರ್‌ ಕಾರನ್ನು ಡ್ರಿಫ್ಟಿಂಗ್ ಮಾಡಿ ಇದರಿಂದ ಜಾನುವಾರುಗಳ ಮೇವು ಹಾಗೂ ರಸ್ತೆಗೆ ಹಾನಿಯಾಗಿರುವ ಘಟನೆ ಸಕಲೇಶಪುರದ ಗವಿಬೆಟ್ಟದಲ್ಲಿ  ಕಂಡುಬಂದಿದೆ.

ಮನಬಂದಂತೆ ಥಾರ್ ಕಾರು ಚಲಾಯಿಸಿರುವ ಕಿಡಿಗೇಡಿಗಳು ಜಾನುವಾರುಗಳು ಹಾಗೂ ವನ್ಯಜೀವಿಗಳ ಮೇವನ್ನು ಮಣ್ಣು ಪಾಲು ಮಾಡಿದ್ದಾರೆ. ಕಾಡೆಮ್ಮೆ, ಮುಳ್ಳುಹಂದಿ, ಕಾಡುಬೆಕ್ಕು, ಕೋತಿ, ನವಿಲು ಸೇರಿದಂತೆ ಹಲವು ಪ್ರಾಣಿ, ಪಕ್ಷಿಗಳು ಈ ಭಾಗದಲ್ಲಿ ನೆಲೆಸಿವೆ. ವನ್ಯಜೀವಿಗಳು ನೀರು ಕುಡಿಯಲು ಈ ಜಾಗಕ್ಕೆ ಬರುತ್ತವೆ. ಪುಂಡಾಟದಿಂದ ಅವುಗಳಿಗೂ ತೊಂದರೆಯಾಗಿದೆ.

ಇಲ್ಲಿ ವಾಹನಗಳ ನಿರ್ಬಂಧವಿದ್ದರು ಅತಿ ಕ್ರಮ ಪ್ರವೇಶ ಮಾಡಿ ಪ್ರವಾಸಿಗರು ಪುಂಡಾಟ ಮೆರೆದಿದ್ದಾರೆ. ಪ್ರವಾಸಿಗರ ಹುಚ್ಚಾಟಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments