ಬೆಂಗಳೂರು: ಕೆಆರ್ ಪುರಂ ವ್ಯಾಪ್ತಿಯಲ್ಲಿ ಪ್ರಿಯಕರನ ಜೊತೆ ಸೇರಿಕೊಂಡು ಶ್ವೇತಾ ತ್ರಿವಳಿ ಕೊಲೆ ಮಾಡಿ ತಿಂಗಳು ಕಳೆಯುವ ಮುನ್ನವೇ ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ತ್ರಿಬಲ್ ಮರ್ಡರ್ ಕೇಸ್ ಬೆಳಕಿಗೆ ಬಂದಿದೆ.
ಕಾಮಾಕ್ಷಿಪಾಳ್ಯದ ಕೊಟ್ಟಿಗೆ ಪಾಳ್ಯದಲ್ಲಿರುವ ಗಣೇಶ ದೇವಸ್ಥಾನದ ಬಳಿಯ ನಿವಾಸದಲ್ಲಿ ಈ ಘಟನೆ ನಡೆದಿದೆ. ತಾಯಿ ಮಂಗಳಮ್ಮ (55), ಅಜ್ಜಿ ನಂಜಮ್ಮ (65) ಹಾಗೂ ಮಾವ ಸತೀಶ್ (50) ನನ್ನು ಆರೋಪಿ ಪ್ರಶಾಂತ್ (34) ಕೊಲೆ ಮಾಡಿದ್ದಾನೆ.
ಕುಟುಂಬಸ್ಥರೆಲ್ಲರು ಕಳೆದ ಏಳೆಂಟು ವರ್ಷದಿಂದ ಕೊಟ್ಟಿಗೆಪಾಳ್ಯದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆರೋಪಿ ಪ್ರಶಾಂತ್ ಡ್ರೈವಿಂಗ್ ಕೆಲಸ ಮಾಡ್ತಿದ್ದ. ಆದರೆ ಕಳೆದ ಒಂದು ವರ್ಷದಿಂದ ಕೆಲಸಕ್ಕೆ ಹೋಗಿರಲಿಲ್ಲ. ಇಂದು ತಂದೆ ಕೆಲಸಕ್ಕೆ ಹೋಗಿದ್ದಾಗ ಪ್ರಶಾಂತ್ ಮೂವರನ್ನ ಕೊಚ್ಚಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
