Saturday, July 11, 2026
Homeಜಿಲ್ಲಾಸುದ್ದಿರಾಜ್ಯ ಮಟ್ಟದ ಮಾಸ್ಟರ್ಸ್ ಬ್ಯಾಡ್ಮಿಂಟನ್‌ನಲ್ಲಿ ಬಣಕಲ್‌ನ ಇದ್ರೀಸ್ ಅಹಮದ್ ರನ್ನರ್-ಅಪ್

ರಾಜ್ಯ ಮಟ್ಟದ ಮಾಸ್ಟರ್ಸ್ ಬ್ಯಾಡ್ಮಿಂಟನ್‌ನಲ್ಲಿ ಬಣಕಲ್‌ನ ಇದ್ರೀಸ್ ಅಹಮದ್ ರನ್ನರ್-ಅಪ್

Telegram Group
Join Now

ಮೂಡಿಗೆರೆ : ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾದ ಯೊನೆಕ್ಸ್–ಸನ್‌ರೈಸ್ ಕರ್ನಾಟಕ ಸ್ಟೇಟ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ 2025-26ರ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಬಣಕಲ್‌ನ ಯುವ ಕ್ರೀಡಾಪಟು ಇದ್ರೀಸ್ ಅಹಮದ್ ಗಮನಾರ್ಹ ಸಾಧನೆ ಮಾಡಿದ್ದಾರೆ.

ಫೆಬ್ರವರಿ 14 ಮತ್ತು 15ರಂದು ನಡೆದ ಈ ಪ್ರತಿಷ್ಠಿತ ಚಾಂಪಿಯನ್‌ಶಿಪ್‌ನ “ಎಂ.ಡಿ. 35” ವಿಭಾಗದಲ್ಲಿ ಇದ್ರೀಸ್ ಅಹಮದ್ ದ್ವಿತೀಯ ಸ್ಥಾನ ಪಡೆದು ರನ್ನರ್-ಅಪ್ ಆಗಿ ಹೊರಹೊಮ್ಮಿದರು.

ಕಠಿಣ ಪೈಪೋಟಿಯ ನಡುವೆಯೂ ಸ್ಥೈರ್ಯ ಮತ್ತು ಕೌಶಲ್ಯ ಪ್ರದರ್ಶಿಸಿದ ಅವರು ಪ್ರಶಂಸೆಗೆ ಪಾತ್ರರಾದರು.ಬಣಕಲ್‌ನ ಕಾಫಿ ಬೆಳೆಗಾರ ಅಸ್ಗರ್ ಅಹಮದ್ ಅವರ ಪುತ್ರರಾದ ಇದ್ರೀಸ್ ಅವರ ಸಾಧನೆಯನ್ನು ಗುರುತಿಸಿ ಆಯೋಜಕರಿಂದ ಮೆರುಗು ಗುರುತಿನ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.

ಗೌರವ ಕಾರ್ಯದರ್ಶಿ ಮುರುಳಿಧರ ವಿ ಹಾಗೂ ರೆಫರಿ ಆರ್. ಸುರೇಶ್ ಕುಮಾರ್ ಅವರ ಸಹಿ ಹೊಂದಿದ ಪ್ರಮಾಣಪತ್ರವನ್ನು ಅವರಿಗೆ ವಿತರಿಸಲಾಯಿತು.

ಇದ್ರೀಸ್ ಅವರ ಸಾಧನೆಗೆ ಕುಟುಂಬದವರು, ಸ್ನೇಹಿತರು ಹಾಗೂ ಕ್ರೀಡಾಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಇನ್ನಷ್ಟು ಸಾಧನೆ ಮಾಡುವಂತೆ ಹಾರೈಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments