Wednesday, September 23, 2026
Homeಶಿಕ್ಷಣʼಮೋಹಕ ಬಲೆʼ ಬಗ್ಗೆ ರೈತರಿಗೆ ತೋಟಗಾರಿಕೆ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಮನವರಿಕೆ..!

ʼಮೋಹಕ ಬಲೆʼ ಬಗ್ಗೆ ರೈತರಿಗೆ ತೋಟಗಾರಿಕೆ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಮನವರಿಕೆ..!

Telegram Group
Join Now

Chikkamagaluru; ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಶಿವಮೊಗ್ಗ ಅಡಿಯಲ್ಲಿ ಬರುವ ಮೂಡಿಗೆರೆ ತೋಟಗಾರಿಕಾ ಮಹಾವಿದ್ಯಾಲಯ ಬಿ ಎಸ್ ಸಿ ಅಂತಿಮ ವರ್ಷದ ವಿದ್ಯಾರ್ಥಿಗಳಿಂದ ಗ್ರಾಮೀಣ ತೋಟಗಾರಿಕೆ ಕಾರ್ಯನುಭವದ ಬಗ್ಗೆ ಲಕ್ಕಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುನ್ನಾಳು ಗ್ರಾಮದಲ್ಲಿ ಮೋಹಕ ಬಲೆಗಳ ಬಳಕೆ ಪ್ರಯೋಗಿಕ ಕಾರ್ಯ ನಡೆಸಲಾಯಿತು.

ಕಾರ್ಯಕ್ರಮದ ನೇತೃತ್ವ ವಹಿಸಿದ ಡಾಕ್ಟರ್ ಸೈಯದ್ ಇಮ್ರಾನ್ ಪಾಷಾ ಗ್ರಾಮದ ಕೃಷಿಕರಿಗೆ ಮೋಹಕ ಬಲೆಗಳ ಬಳಕೆ ಹಾಗೂ ಪ್ರಾಮುಖ್ಯತೆ ಮಹತ್ವ ಉದ್ದೇಶ ಹಾಗೂ ಸದುಪಯೋಗಗಳ ಕುರಿತು ಮಾಹಿತಿ ನೀಡಿದರು. ಅದರ ಜೊತೆಯಲ್ಲೇ ವಿದ್ಯಾರ್ಥಿಗಳು ರೈತರ ಮನಮುಟ್ಟುವ ರೀತಿಯಲ್ಲಿ ಮೋಹಕ ಬಲೆಗಳ ಯಾವ ರೀತಿ ಉಪಯೋಗಕ್ಕೆ ಬರುತ್ತದೆ ಎಂದು ವಿವರಿಸಿದರು. ಬಳಿಕ ಜಗದೀಶ್ ಆರಾಧ್ಯ ಅವರ ತೆಂಗಿನ ತೋಟದಲ್ಲಿ ಮೋಹಕ ಬಲೆಗಳ ಬಲೆಗಳನ್ನು ಬಳಸಬೇಕು ಹಾಗೂ ಯಾವ ಬಲೇ ಯಾವ ಹುಳುವಿಗೆ ಸೂಕ್ತ ಎಂಬುದನ್ನು ಪದ್ಧತಿ ಪ್ರಾತ್ಯಕ್ಷಿತಿ ಮೂಲಕ ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!