Monday, June 22, 2026
Homeಉದ್ಯೋಗAirtel Scholarship 2026: ಏರ್‌ಟೆಲ್‌ ಸ್ಕಾಲರ್‌ಶಿಪ್‌ನಿಂದ ಶುಲ್ಕ, ಲ್ಯಾಪ್‌ಟಾಪ್‌, ಹಾಸ್ಟೆಲ್ ವೆಚ್ಚ ಭರಿಸುವ ಸುವರ್ಣ...

Airtel Scholarship 2026: ಏರ್‌ಟೆಲ್‌ ಸ್ಕಾಲರ್‌ಶಿಪ್‌ನಿಂದ ಶುಲ್ಕ, ಲ್ಯಾಪ್‌ಟಾಪ್‌, ಹಾಸ್ಟೆಲ್ ವೆಚ್ಚ ಭರಿಸುವ ಸುವರ್ಣ ಅವಕಾಶ! 

Airtel Scholarship 2026: ಕಡುಕಷ್ಟದ ಜೀವನದಿಂದ ಕನಸಿನ ಕ್ಯಾಂಪಸ್‌ವರೆಗೆ: ಸಾವಿರಾರು ವಿದ್ಯಾರ್ಥಿಗಳಿಗೆ ಆಶಾಕಿರಣವಾಗುವ ಏರ್‌ಟೆಲ್‌ ಸ್ಕಾಲರ್‌ಶಿಪ್ 2026 ಬಗ್ಗೆ ಸಾದ್ಯಂತವಾಗಿ ತಿಳಿಯೋಣ. ಲೇಖನದ ಮುಂದಿನ ಭಾಗದಲ್ಲಿ ಅಧಿಕೃತ ಅರ್ಜಿ ಲಿಂಕ್ ನೀಡಲಾಗಿದೆ.
ಅದು ಆ ಬಡ ವಿದ್ಯಾರ್ಥಿಯ ದೊಡ್ಡ ಕನಸು. ದೇಶದ ಅತ್ಯುತ್ತಮ ಕಾಲೇಜಿನಲ್ಲಿ ಓದಬೇಕು, ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಸರು ಮಾಡಬೇಕು, ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಬದಲಿಸಬೇಕು ಎಂಬ ಆಸೆ ಅವನಲ್ಲಿ ತುಡಿಯುತ್ತಿತ್ತು. ಆದರೆ ಅವನ ಆ ಮಹದಾಸೆ, ಮಹಾಕನಸಿಗೆ ಅಡ್ಡಿಯಾಗಿರುವುದು ಅವನಲ್ಲಿ ಪ್ರತಿಭೆಯ ಕೊರತೆ ಇದೆ ಎಂದಲ್ಲ, ಬದಲಿಗೆ ಶಾಪವಾಗಿ ಪರಿಣಮಿಸಿರುವ ಹಣಕಾಸು ಕೊರತೆ ಅರ್ಥಾತ್‌ ʼಅರ್ಥʼರಹಿತ ಬಡತನ!
ಇಂದಿನ ದಿನಗಳಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪಡೆಯುವುದು ಸುಲಭದ ಮಾತಲ್ಲ. ಲಕ್ಷಾಂತರ ರೂಪಾಯಿ ಕಾಲೇಜು ಶುಲ್ಕ, ಹಾಸ್ಟೆಲ್ ವೆಚ್ಚ, ಮೆಸ್ ಬಿಲ್, ಪುಸ್ತಕಗಳು, ಪ್ರಾಜೆಕ್ಟ್‌ಗಳು ಹಾಗೂ ಕೋಡಿಂಗ್‌ಗಾಗಿ ಅಗತ್ಯವಿರುವ ಉತ್ತಮ ಲ್ಯಾಪ್‌ಟಾಪ್‌ ಖರೀದಿ – ಇವೆಲ್ಲವೂ ಮಧ್ಯಮ ವರ್ಗ ಮತ್ತು ಬಡ ಕುಟುಂಬಗಳಿಗೆ ದೊಡ್ಡ ಸವಾಲಾಗಿವೆ. ಇದೇ ಕಾರಣಕ್ಕೆ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಮಧ್ಯದಲ್ಲೇ ನಿಲ್ಲಿಸಬೇಕಾಗುತ್ತದೆ.
ಇಂತಹ ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶದಿಂದ ಭಾರತಿ ಏರ್ಟೆಲ್ ಫೌಂಡೇಶನ್ ತನ್ನ 2026-27ನೇ ಸಾಲಿನ ಸ್ಕಾಲರ್‌ಶಿಪ್ ಕಾರ್ಯಕ್ರಮವನ್ನು ಘೋಷಿಸಿದೆ. ಈ ಯೋಜನೆಯ ಮೂಲಕ ಅರ್ಹ ವಿದ್ಯಾರ್ಥಿಗಳಿಗೆ ಕೇವಲ ಹಣಕಾಸಿನ ನೆರವಷ್ಟೇ ಅಲ್ಲ, ಸಂಪೂರ್ಣ ಶೈಕ್ಷಣಿಕ ಬೆಂಬಲ ನೀಡಲಾಗುತ್ತಿದೆ.
ಅಧಿಕೃತ ಅರ್ಜಿ ಲಿಂಕ್: Bharti Airtel Scholarship 2026-27 Application Portal

ಗಮನಿಸಿ: ಅರ್ಜಿ ಸಲ್ಲಿಸುವ ಮೊದಲು ನಿಮ್ಮ ಕಾಲೇಜು NIRF Top-50 Engineering ಸಂಸ್ಥೆಗಳ ಪಟ್ಟಿಯಲ್ಲಿ ಇದೆಯೇ ಎಂದು ಖಚಿತಪಡಿಸಿಕೊಳ್ಳಿ. ಇದುವೇ ಆಯ್ಕೆಗೆ ಪ್ರಮುಖ ಮಾನದಂಡವಾಗಿದೆ.


Airtel Scholarship ಸ್ಕಾಲರ್‌ಶಿಪ್‌ನ ಪ್ರಮುಖ ಸೌಲಭ್ಯಗಳು

ಈ ಯೋಜನೆಯಲ್ಲಿ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಕಾಲೇಜಿನ ವಾರ್ಷಿಕ ಟ್ಯೂಷನ್ ಶುಲ್ಕವನ್ನು ಸಂಪೂರ್ಣವಾಗಿ ಭರಿಸಲಾಗುತ್ತದೆ. ಕ್ಯಾಂಪಸ್ ಹಾಸ್ಟೆಲ್‌ನಲ್ಲಿ ವಾಸಿಸುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಮತ್ತು ಮೆಸ್ ವೆಚ್ಚಕ್ಕೂ ನೆರವು ಸಿಗುತ್ತದೆ. ಅದರ ಜೊತೆಗೆ ಕೋಡಿಂಗ್, ಪ್ರಾಜೆಕ್ಟ್ ಮತ್ತು ತಾಂತ್ರಿಕ ಅಧ್ಯಯನಕ್ಕಾಗಿ ಮೊದಲ ವರ್ಷದಲ್ಲೇ ಉತ್ತಮ ಗುಣಮಟ್ಟದ ಬ್ರಾಂಡೆಡ್ ಲ್ಯಾಪ್‌ಟಾಪ್ ಉಚಿತವಾಗಿ ನೀಡಲಾಗುತ್ತದೆ.
ಇಂಜಿನಿಯರಿಂಗ್‌ನ ನಾಲ್ಕು ವರ್ಷಗಳ ಅವಧಿಯಲ್ಲಿ ವಿದ್ಯಾರ್ಥಿಗಳು ನಿಗದಿತ ಶೈಕ್ಷಣಿಕ ಸಾಧನೆ ಮತ್ತು ಸಿಜಿಪಿಎ ಕಾಪಾಡಿಕೊಂಡರೆ ಈ ನೆರವು ಮುಂದುವರಿಯುತ್ತದೆ.

Airtel Scholarship ಯಾರು ಅರ್ಜಿ ಸಲ್ಲಿಸಬಹುದು?

ಕಂಪ್ಯೂಟರ್ ಸೈನ್ಸ್, ಇನ್ಫರ್ಮೇಶನ್ ಟೆಕ್ನಾಲಜಿ, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್, ಡೇಟಾ ಸೈನ್ಸ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಮಷಿನ್ ಲರ್ನಿಂಗ್, ರೋಬೋಟಿಕ್ಸ್ ಸೇರಿದಂತೆ ತಂತ್ರಜ್ಞಾನ ಆಧಾರಿತ ಇಂಜಿನಿಯರಿಂಗ್ ಕೋರ್ಸ್‌ಗಳಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ರೂಪಾಯಿಗಿಂತ ಕಡಿಮೆ ಇರಬೇಕು. ವಿದ್ಯಾರ್ಥಿನಿಯರು, ವಿಶೇಷಚೇತನರು, ಅನಾಥರು, ಒಂಟಿ ಪೋಷಕರ ಮಕ್ಕಳಿಗೆ ಹಾಗೂ ತೃತೀಯಲಿಂಗ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.

Airtel Scholarship ಅಗತ್ಯ ದಾಖಲೆಗಳು

ಅರ್ಜಿ ಸಲ್ಲಿಸುವಾಗ ಗುರುತಿನ ಚೀಟಿ, ಕಾಲೇಜು ಪ್ರವೇಶ ದಾಖಲೆ, ಶುಲ್ಕ ರಸೀದಿ, ಪಿಯುಸಿ ಅಂಕಪಟ್ಟಿ, ಪ್ರವೇಶ ಪರೀಕ್ಷೆಯ ಸ್ಕೋರ್ ಕಾರ್ಡ್, ಆದಾಯ ಪ್ರಮಾಣಪತ್ರ, ಬ್ಯಾಂಕ್ ವಿವರಗಳು ಹಾಗೂ Statement of Purpose (SOP) ಸಲ್ಲಿಸಬೇಕು.

Airtel Scholarship ಸಮಾಜಕ್ಕೆ ಮರಳಿ ಕೊಡುವ ಜವಾಬ್ದಾರಿ

ಈ ಸ್ಕಾಲರ್‌ಶಿಪ್ ಕೇವಲ ಆರ್ಥಿಕ ನೆರವಿನ ಯೋಜನೆಯಲ್ಲ. ಇದರಡಿ ಆಯ್ಕೆಯಾದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಯಶಸ್ಸು ಸಾಧಿಸಿದ ಬಳಿಕ ತಮ್ಮಂತೆಯೇ ಆರ್ಥಿಕ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ನೆರವಾಗಬೇಕು ಎಂಬ ಸಾಮಾಜಿಕ ಬದ್ಧತೆಯೂ ಇದೆ. ಜೊತೆಗೆ ಪರಿಸರ ಸಂರಕ್ಷಣೆಯ ಭಾಗವಾಗಿ ಗಿಡ ನೆಟ್ಟು ಪೋಷಿಸುವ ಜವಾಬ್ದಾರಿಯನ್ನೂ ವಿದ್ಯಾರ್ಥಿಗಳು ವಹಿಸಬೇಕು.
ಪ್ರತಿಭೆ ಇದ್ದು ಹಣಕಾಸಿನ ಕೊರತೆಯಿಂದ ಹಿಂದುಳಿಯುತ್ತಿರುವ ಸಾವಿರಾರು ವಿದ್ಯಾರ್ಥಿಗಳಿಗೆ ಏರ್ಟೆಲ್ ಸ್ಕಾಲರ್‌ಶಿಪ್ 2026 ನಿಜಕ್ಕೂ ಹೊಸ ಭರವಸೆಯ ಬಾಗಿಲು ತೆರೆದಿದೆ.

Airtel Scholarship – FAQ

1. ಏರ್ಟೆಲ್ ಸ್ಕಾಲರ್‌ಶಿಪ್ 2026 ಯಾರು ಪಡೆಯಬಹುದು?
ತಂತ್ರಜ್ಞಾನ ಮತ್ತು ಇಂಜಿನಿಯರಿಂಗ್ ಕೋರ್ಸ್‌ಗಳಲ್ಲಿ ಪ್ರವೇಶ ಪಡೆದಿರುವ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
2. ಕುಟುಂಬದ ಆದಾಯ ಮಿತಿ ಎಷ್ಟು?
ಒಟ್ಟು ವಾರ್ಷಿಕ ಕುಟುಂಬ ಆದಾಯ 8 ಲಕ್ಷ ರೂಪಾಯಿಗಿಂತ ಕಡಿಮೆ ಇರಬೇಕು.
3. ಉಚಿತ ಲ್ಯಾಪ್‌ಟಾಪ್ ಸಿಗುತ್ತದೆಯೇ?
ಹೌದು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮೊದಲ ವರ್ಷದಲ್ಲೇ ಲ್ಯಾಪ್‌ಟಾಪ್ ಒದಗಿಸಲಾಗುತ್ತದೆ.
4. ಹಾಸ್ಟೆಲ್ ಮತ್ತು ಮೆಸ್ ವೆಚ್ಚಕ್ಕೂ ನೆರವು ಸಿಗುತ್ತದೆಯೇ?
ಹೌದು. ಅರ್ಹ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಹಾಗೂ ಮೆಸ್ ವೆಚ್ಚದ ಸಹಾಯವೂ ದೊರೆಯುತ್ತದೆ.
5. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವುದು?
ಅಧಿಕೃತ ಪ್ರಕಟಣೆಯ ಪ್ರಕಾರ ಜುಲೈ 31 ಕೊನೆಯ ದಿನಾಂಕವಾಗಿರಬಹುದು. ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸುವುದು ಸೂಕ್ತ.
Disclaimer: 
ಈ ಲೇಖನವು ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿ ಮತ್ತು ಸ್ಕಾಲರ್‌ಶಿಪ್ ವಿವರಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಅರ್ಹತಾ ಮಾನದಂಡಗಳು, ಸೌಲಭ್ಯಗಳು, ದಾಖಲೆಗಳು ಹಾಗೂ ಕೊನೆಯ ದಿನಾಂಕಗಳಲ್ಲಿ ಬದಲಾವಣೆಗಳಿರಬಹುದು. ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಸಂಬಂಧಿತ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿಯನ್ನು ಪರಿಶೀಲಿಸಿಕೊಳ್ಳುವುದು ಅಗತ್ಯ. 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments