ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಇಂದು ಬೆಳಗ್ಗೆ ಕಾಡಾನೆ ದಾಳಿಯಿಂದ ಮಹಿಳೆ ದಾರುಣವಾಗಿ ಸಾವನ್ನಪ್ಪಿದ್ದ ಅರ್ಧ ಗಂಟೆಯಲ್ಲೇ ಒಂಟಿ ಸಲಗವನ್ನು ಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಹೌದು .. ಒಂದೇ ವಾರಕ್ಕೆ ಎರಡು ಅಮಾಯಕ ಜೀವಗಳನ್ನು ಬಲಿ ಪಡೆದಿದ್ದ ಒಂಟಿ ಸಲಗವನ್ನು ಚಿಕ್ಕಮಗಳೂರು ತಾಲೂಕಿನ ಬೆರಣಗೋಡು ಸಮೀಪದ ಕೆರೆಮನೆ ಬಳಿ ಅರಣ್ಯಾ ಇಲಾಕೆ ಅಧಿಕಾರಿಗಳು ಹಾಗೂ ನುರಿತ ವೈದ್ಯಕೀಯ ತಂಡದಿಂದ ಕ್ಷಿಪ್ರ ರೀತಿಯಲ್ಲಿ ಅರವಳಿಕೆ ಮದ್ದು ನೀಡಿ ಕಾಡಾನೆಯನ್ನು ಸೆರೆಹಿಡಿದಿದ್ದಾರೆ.
https://whatsapp.com/channel/0029VaAUBknChq6Ibwwvi12W
ಹಾಗೆ ಕಳೆದ ಸೋಮವಾರವಷ್ಟೇ ನಾಗೇಶ್ ಗೌಡ ಎಂಬುವವರ ತೋಟದಲ್ಲಿ ಕಾಡಾನೆ ತುಳಿದು ಓರ್ವ ಕೂಲಿ ಕಾರ್ಮಿಕ ಸಾವನ್ನಪ್ಪಿದ್ದನು. ಈಗ ಅದೇ ಜಾಗದಲ್ಲಿ ಇಂದು ಕಾಡಾನೆ ಕಾಣಿಸಿಕೊಂಡು ಕೂಲಿ ಕಾರ್ಮಿಕ ಮಹಿಳೆಯನ್ನು ತುಳಿದು ಸಾಯಿಸಿದೆ.
ಏಳು ಕುಮ್ಕಿ ಆನೆಗಳು ಹಾಗೂ ಸುಮಾರು 75 ಸಿಬ್ಬಂದಿಗಳ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಹಿಳೆಗೆ ದಾಳಿ ನಡೆಸಿದ ಸ್ಥಳದಿಂದ ಅಲ್ಪ ದೂರದಲ್ಲಿರುವ ಕಾಫಿ ತೋಟದಲ್ಲಿ ಕಾಡಾನೆಯನ್ನು ಪತ್ತೆ ಮಾಡಲಾಯಿತು. ಸೂಕ್ತ ಸಮಯದಲ್ಲಿ ಅರವಳಿಕೆ ಚುಚ್ಚುಮದ್ದು ನೀಡಿ ಆನೆಯನ್ನು ನಿತ್ರಾಣಗೊಳಿಸಿ, ಬಳಿಕ ಕುಮ್ಕಿ ಆನೆಗಳ ಸಹಾಯದಿಂದ ಕಾಡಾನೆಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ಪಡೆದು ಸೆರೆ ಹಿಡಿಯಲಾಗಿದೆ.
ಇದೀಗ ಕಾಡಾನೆ ಹಿಡಿದರೂ ಜನರಿಗೆ ಸಣ್ಣ ಸಮಧಾನ ತಂದರೂ ಆಕ್ರೋಶ ಮಾತ್ರ ತಣ್ಣಗಾಗಿಲ್ಲ. ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಅರಣ್ಯ ಇಲಾಖೆಗೆ ಸ್ಥಳೀಯರು ಮನವಿ ಮಾಡಿದ್ದಾರೆ
