Sunday, July 12, 2026
Homeಕ್ರೈಮ್ಕೊಪ್ಪ: ಕಾಫಿನಾಡಲ್ಲಿ ಕಾಡುಕೋಣ ಅಟ್ಟಹಾಸ: ನೀರು ಹಾಯಿಸಲು ಹೋಗಿದ್ದ ರೈತನ ಮೇಲೆ ದಾಳಿ, ಸ್ಥಿತಿ ಗಂಭೀರ!

ಕೊಪ್ಪ: ಕಾಫಿನಾಡಲ್ಲಿ ಕಾಡುಕೋಣ ಅಟ್ಟಹಾಸ: ನೀರು ಹಾಯಿಸಲು ಹೋಗಿದ್ದ ರೈತನ ಮೇಲೆ ದಾಳಿ, ಸ್ಥಿತಿ ಗಂಭೀರ!

Telegram Group
Join Now

ಚಿಕ್ಕಮಗಳೂರು: ಕಾಫಿನಾಡಲ್ಲಿ ಕಾನಾನೆಗಳ ದಾಳಿ ಬೆನ್ನಲ್ಲೇ ಇದೀಗ ಕಾಡುಕೋಣಗಳ ಹಾವಳಿಯೂ ಮಿತಿಮೀರಿದ್ದು ತೋಟಕ್ಕೆ ನೀರು ಹಾಯಿಸಲು ಹೋಗಿದ್ದ ರೈತರೊಬ್ಬರಿಗೆ ಕಾಡುಕೋಣ ದಾಳಿ ನಡೆಸಿರುವ ಘಟನೆ ಕೊಪ್ಪ ತಾಲೂಕಿನ ಜಯಪುರ ಸಮೀಪದ ಮುಂಡೋಳು ಗ್ರಾಮದಲ್ಲಿ ನಡೆದಿದೆ.

ಮುಂಡೋಳು ಗ್ರಾಮದ ಶಿವಪ್ಪಗೌಡ(65) ಎನ್ನುವವರು ಬೆಳಗ್ಗೆ ತೋಟಕ್ಕೆ ನೀರು ಹಾಯಿಸಲು ಮೋಟಾರ್ ಸ್ಟಾರ್ಟ್ ಮಾಡಲು ಹೋದಾಗ ಹಿಂಬದಿಯಿಂದ ಅನೀರಿಕ್ಷಿತವಾಗಿ ಕಾಡುಕೋಣ ದಾಳಿಮಾಡಿದ್ದು ಶಿವಪ್ಪಗೌಡರಿಗೆ ತೊಡೆ ಹಾಗೂ ಬೆನ್ನಿಗೆ ತ್ರೀವ ಪೆಟ್ಟಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಕಾಡುಪ್ರಾಣಿಗಳ ಅಟ್ಟಹಾಸ ವಿರೀತವಾಗಿದ್ದು ರೈತರು ಕಾರ್ಮಿಕರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ತೋಟದ ಕೆಲಸಕ್ಕೆ ಹೋಗುವ ಪರಿಸ್ಥಿತಿ ಬಂದೋದಗಿದೆ. ಾರಣ್ಯ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ಕಾಡುಪ್ರಾಣಿಗಳನ್ನ ತಡೆಗಟ್ಟಲು ಸೂಕ್ತ ಕ್ರಮ ವಹಿಸಬೇಕೆಂದು ಗ್ರಾಂಸ್ಥರು ಮನವಿ ಮಾಡಿಕೊಳ್ಳುತ್ತಿದ್ದಾರೆ.

ಕಾಡು ಪ್ರಾಣಿಗಳು ನಾಡಿಗೆ ಬರಲು ಪ್ರಮುಖ ಕಾರಣ ಅರಣ್ಯ ಇಲಾಖೆಗೆ ತಿಳಿದಿರುವುದು ಬಹಿರಂಗ ಸತ್ಯ. ಇವುಗಳಿಗೆ ತಿನ್ನಲು ಆಹಾರ,ಕುಡಿಯಲು ನೀರು ಸ್ವಚ್ಛಂದ ವಾಗಿ ಸುತ್ತಲೂ ಕಾಡು ಬೇಕು. ಆದರೆ ಇಂದು ಅರಣ್ಯ ಇಲಾಖೆ ರೆಸಾರ್ಟ್, ಹೋಮ್ ಸ್ಟೇ ಹಗಲು ರಾತ್ರಿ ತಿರುಗಾಡಲು ಪ್ರವಾಸಿಗರಿಗೆ ಅನುಮತಿ ಕೊಟ್ಟಿರುವುದರಿಂದ ಕಾಡುಪ್ರಾಣಿಗಳು ಕಾಡು ಬಿಟ್ಟು ನಾಡಿಗೆ ಬರ ತೊಡಗಿವೆ ಹೀಗಾಗಿ ದಿನಕ್ಕೊಂದು ಕ್ಷಣಕ್ಕೊಂದು ಅನಾಹುತಗಳು ನಡೆಯುತ್ತಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments