Monday, July 27, 2026
Homeಕ್ರೈಮ್ಚಿಕ್ಕಮಗಳೂರು: ಆನ್‌ಲೈನ್ ಟ್ರೇಡಿಂಗ್ ನಲ್ಲಿ ವಂಚನೆ: ವೈದ್ಯರಿಗೆ 21.85 ಲಕ್ಷ ರೂ. ಪಂಗನಾಮ

ಚಿಕ್ಕಮಗಳೂರು: ಆನ್‌ಲೈನ್ ಟ್ರೇಡಿಂಗ್ ನಲ್ಲಿ ವಂಚನೆ: ವೈದ್ಯರಿಗೆ 21.85 ಲಕ್ಷ ರೂ. ಪಂಗನಾಮ

Telegram Group
Join Now

ಚಿಕ್ಕಮಗಳೂರು: ದಿನದಿಂದ ದಿನಕ್ಕೆ ಆನ್‌ಲೈನ್ ವಂಚನೆಗಳು ಹೆಚ್ಚಾಗುತ್ತಿದ್ದು ಹೈ ಟೆಕ್‌ ವಂಚಕರು ತಮ್ಮ ಜಾಲವನ್ನು ವಿಸ್ತರಿಸುತ್ತಲೇ ಇದ್ದಾರೆ. ನಗರದ ಪ್ರತಿಷ್ಠಿತ ಆಸ್ಪತ್ರೆ ವೈದ್ಯರೊಬ್ಬರಿಗೆ ಆನ್ಲೈನ್ ಟ್ರೇಡಿಂಗ್ ಇನ್ವೆಸ್ಟ್ಮೆಂಟ್ ನಲ್ಲಿ ಅಧಿಕ ಲಾಭವಿದೆ ಎಂದು ನಂಬಿಸಿ 21.85 ಲಕ್ಷ ರೂ. ಪಂಗನಾಮ ಹಾಕಿರುವ ಘಟನೆ ನಡೆದಿದೆ.

ಡಾ. ಆದರ್ಶ್ ಸುಂದರ್ ರವರ  ವಾಟ್ಸಪ್ ನಲ್ಲಿ Axis steady Stocks Club-R2  ಗ್ರೂಪ್ ನಿಂದ ಟ್ರೇಡಿಂಗ್ ಮಾಡಲು ನಿಮಗೆ ಆಸಕ್ತಿ ಇದೆಯೇ? ಎಂದು ಮೆಸೇಜ್ ಬಂದಿದೆ .ಟ್ರೇಡಿಂಗ್ ಬಗ್ಗೆ ಆಸಕ್ತಿ ಇದ್ದುದರಿಂದ ಟ್ರೇಡಿಂಗ್ ಮಾಡುವುದಾಗಿ ಇವರು ಮೆಸೇಜ್ ಮೂಲಕ ತಿಳಿಸಿದ ಬಳಿಕ ವಾಟ್ಸಪ್ ಗ್ರೂಪ್ ನಲ್ಲಿ ಮೆಂಬರ್ ಆಗಿ ಸೇರಿಸಿದ್ದಾರೆ.
ಗ್ರೂಪ್ ಅಡ್ಮಿನ್ ನವೀನ್ ಕುಲಕರ್ಣಿ & ಸುರಕ್ಷಾ  ಟ್ರೇಡಿಂಗ್ ಬಗ್ಗೆ ಗೈಡ್ ಮಾಡಿ, ಐಎಂಇಸಿ  ಬ್ಲಾಕ್ ಷೇರಿನಲ್ಲಿ ಹೆಚ್ಚು ಲಾಭ ಇದೇ ಎಂದು ನಂಬಿಸಿ ಹೂಡಿಕೆ ಮಾಡುವಂತೆ ತಿಳಿಸಿದ್ದಾರೆ.

ತನ್ನ ವರ್ಚುವಲ್ ಐಡಿಯಲ್ಲಿ ಹೆಚ್ಚು ಲಾಭವನ್ನು ತೋರಿಸಿದ್ದು  ಅದನ್ನು ಬಿಡಿಸಿಕೊಳ್ಳಲು ಪ್ರಯತ್ನಿಸಿದಾಗ  ನಿಮ್ಮ ಖಾತೆ ಲಾಕ್ ಆಗಿದೆ ಇನ್ನು ಹೆಚ್ಚಿನ ಹೂಡಿಕೆ ಮಾಡಿ ಟ್ಯಾಕ್ಸ್ ಕಟ್ಟಿದ ನಂತರ ಹಣವನ್ನು ಡ್ರಾ ಮಾಡಿಕೊಳ್ಳಬಹುದೆಂದು ಹೇಳಿದ್ದಾರೆ.‌

ಹಂತ ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 21,85,000/- ರೂ ಹಣವನ್ನು ವರ್ಗಾವಣೆ ಮಾಡಿಸಿ ಮೋಸ ಮಾಡಿರುವುದು ಬೆಳಕಿಗೆ ಬಂದಿದ್ದು ಸೈಬರ್‌ ಕ್ರೈಂ ಪೊಲೀಸ್‌ ಠಾನೆಗೆ ದೂರು ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments