Thursday, October 29, 2026
Homeಜಿಲ್ಲಾಸುದ್ದಿಇವಿಎಂ ಆಗಲಿ, ಬ್ಯಾಲೆಟ್ ಆಗಲಿ ಎರಡರಲ್ಲೂ ಬಿಜೆಪಿ-ಜೆಡಿಎಸ್ ಮೇಲುಗೈ: ʼಕೈʼ ಪಡೆಗೆ ಸಿ.ಟಿ.ರವಿ ಟಾಂಗ್!

ಇವಿಎಂ ಆಗಲಿ, ಬ್ಯಾಲೆಟ್ ಆಗಲಿ ಎರಡರಲ್ಲೂ ಬಿಜೆಪಿ-ಜೆಡಿಎಸ್ ಮೇಲುಗೈ: ʼಕೈʼ ಪಡೆಗೆ ಸಿ.ಟಿ.ರವಿ ಟಾಂಗ್!

Telegram Group
Join Now

ಚಿಕ್ಕಮಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ 4 ಕ್ಷೇತ್ರಗಳಲ್ಲೂ ಎನ್‌ಡಿಎ ಭರ್ಜರಿ ಜಯಭೇರಿ ಬಾರಿಸಿದೆ. ಇದರ ಬೆನ್ನಲ್ಲೇ, ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕ ಸಿ.ಟಿ ರವಿ  ವಾಗ್ದಾಳಿ ನಡೆಸಿದ್ದಾರೆ.

ಚಿಕ್ಕಮಗಳೂರಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಡಿ.ಕೆ. ಶಿವಕುಮಾರ್ ಅಧಿಕಾರಕ್ಕೆ ಬಂದು ಕಾಂಗ್ರೆಸ್ ಸರ್ಕಾರದ ಹನಿಮೂನ್ ಅವಧಿ ಕೂಡ ಮುಗಿದಿಲ್ಲ. ಈ ಅವಧಿ ಮುಗಿಯುವ ಮುನ್ನವೇ ಎಂಎಲ್‌ಸಿ ಚುನಾವಣಾ ಫಲಿತಾಂಶ ಕಾಂಗ್ರೆಸ್ ಪಾಳಯಕ್ಕೆ ಆಘಾತ ನೀಡಿದೆ.

ಇದು ಇವಿಎಂ ಮೇಲೆ ನಡೆದ ಚುನಾವಣೆಯಲ್ಲ. ಬದಲಾಗಿ ಬ್ಯಾಲೆಟ್ ಪೇಪರ್‌ನಲ್ಲಿ ನಡೆದ ಚುನಾವಣೆ. ಇವಿಎಂ ಆಗಲಿ, ಬ್ಯಾಲೆಟ್ ಆಗಲಿ ಎರಡರಲ್ಲೂ ಬಿಜೆಪಿ-ಜೆಡಿಎಸ್ ಮೇಲುಗೈ ಸಾಧಿಸಿದೆ. ಈ ಫಲಿತಾಂಶ ಭವಿಷ್ಯದ ರಾಜಕಾರಣದ ಸ್ಪಷ್ಟ ದಿಕ್ಸೂಚಿಯಾಗಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!