Thursday, October 29, 2026
Homeಜಿಲ್ಲಾಸುದ್ದಿಸರ್ವರ್ ಸಮಸ್ಯೆ, ಪಡಿತರ ಪಡೆಯಲು ಪರದಾಟ : ಶಾಶ್ವತ ಪರಿಹಾರ ಒದಗಿಸಲು ಸಾರ್ವಜನಿಕರ ಆಗ್ರಹ!

ಸರ್ವರ್ ಸಮಸ್ಯೆ, ಪಡಿತರ ಪಡೆಯಲು ಪರದಾಟ : ಶಾಶ್ವತ ಪರಿಹಾರ ಒದಗಿಸಲು ಸಾರ್ವಜನಿಕರ ಆಗ್ರಹ!

Telegram Group
Join Now

ಮೂಡಿಗೆರೆ : ಸರ್ವರ್ ಸಮಸ್ಯೆಯಿಂದ ಪಡಿತರ ಪಡೆಯಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಶಾಶ್ವತ ಪರಿಹಾರ ಒದಗಿಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹೌದು ಅಕ್ಟೊಬರ್ ತಿಂಗಳ ಪಡಿತರ ಆಹಾರಧಾನ್ಯವನ್ನು ಪಡಿತರ ವಿತರಣೆಗೆ ಸರ್ವರ್ ಸಮಸ್ಯೆ ಎದುರಾಗಿರುವುದರಿಂದ ಪಡಿತರದಾರರು ನ್ಯಾಯಬೆಲೆ ಅಂಗಡಿ ಮುಂದೆ ಸಂಜೆ ವೇಳೆವರೆಗೂ ಚಾತಕಪಕ್ಷಿಯಂತೆ ಕಾಯುವಂತಾಗಿದೆ.

ಇಂದು ತಾಲ್ಲೂಕಿನ ಬಹುತೇಕ ಭಾಗಗಳಲ್ಲಿ ಪಡಿತರದಾರರು ಆಹಾರ ಧಾನ್ಯವನ್ನು ಪಡೆದುಕೊಳ್ಳಲು ಸಂಜೆ ಯ ವರೆಗೂ ಸರದಿ ಸಾಲಿನಲ್ಲಿ ನಿಂತು ಎರಡೆರಡು ಬಾರಿ ಬಯೋಮೆಟ್ರಿಕ್ ಬೆರಳಚ್ಚು ನೀಡುತ್ತಿದ್ದಾರೆ.

ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ರಾಜ್ಯಾದ್ಯಂತ ಪಡಿತರ ಚೀಟಿದಾರರಿಗೆ ಪಡಿತರ ಅಕ್ಕಿಯನ್ನು ವಿತರಿಸಲಾಗುತ್ತಿದೆ. ಆದರೆ ಪ್ರತಿ ತಿಂಗಳ ಪಡಿತರ ಪಡೆಯಲು ಪ್ರತ್ಯೇಕವಾಗಿ ಬಯೋಮೆಟ್ರಿಕ್ ಬೆರಳಚ್ಚು ನೀಡಬೇಕಿರುವುದರಿಂದ ಸರ್ವರ್ ಸಮಸ್ಯೆ ಪಡಿತರದಾರರಿಗೆ ಹಾಗೂ ನ್ಯಾಯಬೆಲೆ ಅಂಗಡಿ ನೌಕರರರಿಗೆ ತಲೆ ನೋವಾಗಿ ಪರಿಣಮಿಸಿದೆ.

ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ಕಾಯುವ ಪರಿಸ್ಥಿತಿ ಬಿಪಿಎಲ್ ಹಾಗೂ ಎಎವೈ ಕಾರ್ಡು ದಾರರಿಗೆ ಬಂದಿದೆ.ಪಡಿತರ ಸಿಗಲಿದೆ ಎಂಬ ನಿರೀಕ್ಷೆಯಲ್ಲಿ ನ್ಯಾಯಬೆಲೆ ಅಂಗಡಿಗಳಿಗೆ ತಮ್ಮ ದಿನ ನಿತ್ಯದ ಕೂಲಿ ಕೆಲಸ ಬಿಟ್ಟು ತೆರಳುತ್ತಿದ್ದಾರೆ. ಆದರೆ ಸರ್ವರ್ ನಿಧಾನಗತಿ ಹಾಗೂ ವ್ಯತ್ಯಯದಿಂದ ಪಡಿತರ ಪಡೆಯಲು ಗಂಟೆಗಟ್ಟಲೆ ಕಾಯಬೇಕಾಗಿದೆ. ಸರ್ವರ್ ಸಮಸ್ಯೆ ಕುರಿತು ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಆಹಾರ ಇಲಾಖೆ ಅಧಿಕಾರಿಗಳಿಗೆ ಪಡಿತರದಾರರು ನೀಡಿದ್ದರೂ ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಸಂಬಂಧ ಪಟ್ಟ ಅಧಿಕಾರಿಗಳು ಪಡಿತರ ವಿತರಣೆ ಮಾಡುವ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಸರ್ವರ್ ಸಮಸ್ಯೆ ಆಲಿಸದೆ ಇರುವುದು ಪಡಿತದಾರರನ್ನು ಕೆರಳಿಸಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸದಿದ್ದರೆ ಆಹಾರ ಇಲಾಖೆ ಅಧಿಕಾರಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಡಿತದಾರರು ಒತ್ತಾಯಿಸುತ್ತಿದ್ದಾರೆ. ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಪದೇಪದೇ ಸರ್ವರ್ ಸಮಸ್ಯೆ ಎಂಬ ನೆಪವೊಡ್ಡಲಾಗುತ್ತಿದೆ. ಆದ್ದರಿಂದ ಉಚಿತ ಅಕ್ಕಿ ವಿತರಣೆಯ ಜೊತೆಗೆ ತಾಂತ್ರಿಕ ವ್ಯವಸ್ಥೆಯನ್ನೂ ಸಮರ್ಪಕವಾಗಿ ನಿರ್ವಹಿಸಿ, ಸರ್ವರ್ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕೆಂಬುದು ಪಡಿತರದಾರರು ಒತ್ತಾಯವಾಗಿದೆ.

ನ್ಯಾಯಬೆಲೆ ಅಂಗಡಿಗಳಲ್ಲಿ ಬೆಳಿಗ್ಗೆ ಬನ್ನಿ ಅಥವಾ ಸಂಜೆ ಬನ್ನಿ ಎಂದು ಸಬೂಬು ಹೇಳುತ್ತಾರೆ. ಕಾರಣ ಕೇಳಿದರೆ ಸರ್ವರ್ ಸಮಸ್ಯೆ ಎಂದು ನೆಪ ಹೇಳುತ್ತಾರೆ. ಈ ಸಮಸ್ಯೆ ಸರಿಪಡಿಸು ವವರು ಯಾರು? ಆಹಾರ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುವುದಿಲ್ಲ, ಆಹಾರ ಇಲಾಖೆ ಅಧಿಕಾರಿಗಳ ಅಸಡ್ಡೆ ಕಾಣುತ್ತಿದೆ. ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ

ವರದಿ:ಪುನೀತ್ ಕಡಿದಾಳು
9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!