Monday, July 27, 2026
Homeಜಿಲ್ಲಾಸುದ್ದಿಕೊಪ್ಪ: ಕಾಡಾನೆಗಳ ಟೆನ್ಷನ್ ನಡುವೆ ಮತ್ತೊಂದೆಡೆ ಹಿಂಡು ಹಿಂಡು ಕಾಡುಕೋಣಗಳು ಪ್ರತ್ಯಕ್ಷ!

ಕೊಪ್ಪ: ಕಾಡಾನೆಗಳ ಟೆನ್ಷನ್ ನಡುವೆ ಮತ್ತೊಂದೆಡೆ ಹಿಂಡು ಹಿಂಡು ಕಾಡುಕೋಣಗಳು ಪ್ರತ್ಯಕ್ಷ!

Telegram Group
Join Now

ಕೊಪ್ಪ: ಈಗಾಗಲೇ ಕಾಡಾನೆಗಳ ಉಪಟಳದಿಂದ ಕಾಫಿನಾಡಿನ ಜನರು ಚೇತರಿಸಿಕೊಳ್ಳೊಕೆ ಆಗ್ತಿಲ್ಲ, ಈ ಮಧ್ಯೆ ಕಾಡುಕೋಣಗಳ ಆರ್ಭಟವೂ ಜೋರಾಗಿದೆ.

ಹೌದು .. ಕೊಪ್ಪ ತಾಲೂಕಿನ ಬಸರಿಕಟ್ಟೆಯ ಎಸ್ಟೇಟ್ ನಲ್ಲಿ ಹಿಂಡು ಹಿಂಡು ಕಾಡುಕೋಣಗಳು ಕಾಣಿಸಿಕೊಂಡಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ಎತ್ತ ಕಣ್ಣು ಹಾಯಿಸಿದ್ರೂ ಕಾಡು ಕೋಣಗಳ ಹಿಂಡೇ ಕಾಣುತ್ತಿರುವುದನ್ನ ನೋಡಿದ ಜನರು ಭಯಬೀತರಾಗಿದ್ದಾರೆ.

ಬುಧವಾರವಷ್ಟೇ ಕಾಡು ಕೋಣಗಳ ಗ್ಯಾಂಗ್ ಬಸರಿಕಟ್ಟೆ ಸಮೀಪದ ಮುಂಡೋಳು ಗ್ರಾಮದಲ್ಲಿ ಶಿವಪ್ಪಗೌಡ ಎಂಬುವರ ಮೇಲೆ ದಾಳಿ ಮಾಡಿದ್ದು, ತೊಡೆ ಹಾಗೂ ಬೆನ್ನಿನ ಭಾಗಕ್ಕೆ ತೀವ್ರ ಪೆಟ್ಟಾಗಿ ಗಂಭೀರವಾಗಿ ಗಾಯಗೊಂಡಿರುವ ಶಿವಪ್ಪಗೌಡರನ್ನ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊಪ್ಪ ಅರಣ್ಯ ವಲಯದ ವ್ಯಾಪ್ತಿಯಲ್ಲಿ ನಡೆದಿದ್ದು, ಕಾಡುಕೋಣಗಳ ಹಿಂಡು ಗ್ರಾಮಾಂತರ ಪ್ರದೇಶಗಳಲ್ಲಿ ನಿರಂತರ ಸಂಚರಿಸುತ್ತಿದೆ. ಹಾಗೆ ಹಿಂಡು ಹಿಂಡು ಕಾಡು ಕೋಣಗಳು ಊರಿಗೆ ಬರುತ್ತಿರುವುದು ಕಾಫಿತೋಟ ಕಾರ್ಮಿಕರು ಹಾಗೂ ಅಲ್ಲಿನ ನಿವಾಸಿಗಳ ಆತಂಕ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments