Thursday, July 30, 2026
Homeಜಿಲ್ಲಾಸುದ್ದಿಎನ್.‌ ಆರ್.‌ ಪುರ: ಕಾಫಿನಾಡಿನ ಮಲೆನಾಡು ಭಾಗದಲ್ಲಿ ನಿಲ್ಲದ ಕಾಡಾನೆಗಳ ಉಪಟಳ: ಕಟಾವಿಗೆ ಬಂದಿದ್ದ ಬಾಳೆ...

ಎನ್.‌ ಆರ್.‌ ಪುರ: ಕಾಫಿನಾಡಿನ ಮಲೆನಾಡು ಭಾಗದಲ್ಲಿ ನಿಲ್ಲದ ಕಾಡಾನೆಗಳ ಉಪಟಳ: ಕಟಾವಿಗೆ ಬಂದಿದ್ದ ಬಾಳೆ ಬೆಳೆ ನಾಶ!

Telegram Group
Join Now

ಎನ್.‌ ಆರ್.‌ ಪುರ: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಕಾಡಾನೆಗಳ ಅಟ್ಟಹಾಸ ಮಿತಿ ಮೀರಿದ್ದು ರೈತರು ಕಷ್ಟಪಟ್ಟು ಬೆಳೆದ ಬೆಳೆಗಳು ನಾಶವಾಗುತ್ತಿವೆ.

ಹೌದು .. ಎನ್.‌ ಆರ್.‌ ಪುರ ತಾಲೂಕಿನ ಹಗಲಮನೆ ಗ್ರಾಮದ ಎಲ್ಡೋಸ್‌ ಎಂಬುವರ ಮನೆಯ ಬಾಳೆ ತೋಟಕ್ಕೆ ಕಾಡಾನೆಗಳು ಲಗ್ಗೆ ಇಟ್ಟಿದ್ದು ಕಟಾವಿಗೆ ಸಿದ್ದವಾಗಿದ್ದ ಬಾಳೆಗೊನೆಗಳನ್ನು ನಾಶಪಡಿಸಿದ್ದು ಅಪಾರ ಪ್ರಮಾಣದ ನಷ್ಟವನ್ನು ಉಂಟುಮಾಡಿದೆ. ಬೆಳೆದ ಬೆಳೆ ಕಣ್ಣೇದುರಲ್ಲೇ ನಾಶವಾಗಿದ್ದು ರೈತರನ್ನು ಇನ್ನಷ್ಟು ಕಂಗಲಾಗಿ ಮಾಡಿದೆ.

ಈ ಭಾಗದಲ್ಲಿ ನಿರಂತರವಾಗಿ ಕಾಡಾನೆಗಳ ಉಪಟಳ ಹೆಚ್ಚಾಗುತ್ತಿದ್ದು ಜನರು ದಿನದಿಂದ ದಿನಕ್ಕೆ ಭೀತಿಯಲ್ಲೇ ಕಾಲ ಕಳೆಯುವ ಸ್ಥಿತಿ ಬಂದೊದಗಿದೆ. ಈ ಭಾಗದಲ್ಲಿ ಕಾಡಾನೆಗಳ ಹಾವಳಿಯನ್ನು ಶಾಶ್ವತವಾಗಿ ನಿಯಂತ್ರಿಸಲು ಹಲವು ಬಾರಿ ಮನವಿ ಮಾಡಿದರೂ ಸರ್ಕಾರ ಅಲ್ಲಿನ ಸ್ಥಳೀಯ ಶಾಸಕರು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ ಎಂದರೆ ತಪ್ಪಾಗಲಾರದು.

ಆದಷ್ಟೂ ಬೇಗ ಆನೆಯನ್ನು ಹಿಡಿಯಬೇಕು ಹಾಗೆ ನಷ್ಟದ ಪರಿಹಾರವನ್ನು ಒದಗಿಸಬೇಕೆಂದೆ ಸ್ಥಳೀಯರು ಗ್ರಾಮಸ್ಥರು ಪಟ್ಟು ಹಿಡಿದು ಕುಳಿತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments