Thursday, July 30, 2026
Homeಕ್ರೈಮ್ಚಿಕ್ಕಮಗಳೂರು: ಮನೆಮುಂದೆ ನಿಲ್ಲಿಸಿದ್ದ ಕಾರಿನ ಟೈರ್ ಪಂಚರ್ ಮಾಡಿ ಪೊಲೀಸಪ್ಪನ ದರ್ಪ: ಪಬ್ಲಿಕ್ ಇಂಪ್ಯಾಕ್ಟ್...

ಚಿಕ್ಕಮಗಳೂರು: ಮನೆಮುಂದೆ ನಿಲ್ಲಿಸಿದ್ದ ಕಾರಿನ ಟೈರ್ ಪಂಚರ್ ಮಾಡಿ ಪೊಲೀಸಪ್ಪನ ದರ್ಪ: ಪಬ್ಲಿಕ್ ಇಂಪ್ಯಾಕ್ಟ್ ಕಂಡು ಖಾಕಿ ಅಲರ್ಟ್!

Telegram Group
Join Now

ಚಿಕ್ಕಮಗಳೂರು: ಪಾರ್ಕಿಂಗ್ ಮಾಡಿದ್ದಕ್ಕೆ ಕೋಪ ಮಾಡಿದ್ದಲ್ಲದೇ ಕಾರಿನ ಮೇಲೆ ದರ್ಪ ತೋರಿಸಿ
ಟೈರ್ ಪಂಚರ್ ಮಾಡಿ ಕಾರಿನ ಬಾನೆಟ್ ಮೇಲೆ ಸಿಗ್ನೇಚರ್ ಇಟ್ಟು ಅವಾಂತರ ಸೃಷ್ಟಿಸಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.

ಹೌದು … ಮನೆಮುಂದೆ ನಿಲ್ಲಿಸಿದ್ದಕ್ಕೆ ಕಾರನ್ನ ಡೋಂಟ್ ಪಾರ್ಕ್ ಅಂತಾ ಕಲ್ಲಿನಿಂದ ಜಜ್ಜಿ ವಿಕೃತಿ ಮೆರೆದಿದ್ದು ಬೇರೆ ಯಾರೋ ಅಲ್ಲ ಚಿಕ್ಕಮಗಳೂರು ಎಸ್ಪಿ ಕಚೇರಿ ಸಿಬ್ಬಂದಿ ಶರತ್ ಎಂದು ಕಾರು ಮಾಲೀಕ ಅರವಿಂದ್ ಎಂಬುವರು ಆರೋಪ ಹೊರಿಸಿದ್ದಾರೆ.

ಕೂದುವಳ್ಳಿ ಅರವಿಂದ್ ಎಂಬುವರಿಗೆ ಸೇರಿದ ಕಾರಾಗಿದ್ದು ಮನೆಮುಂದೆ ನಿಲ್ಲಿಸಿದ್ದಕ್ಕೆ ಕಾರನ್ನ ಕಲ್ಲಿನಿಂದ ಜಜ್ಜಿ ವಿಕೃತಿ ಮೆರೆದ ಪೊಲೀಸ್‌ ಸಿಬ್ಬಂದಿ ಎಂದು ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರಿಂದ ಮೀನಾಮೇಷ ಮಾಡಿದ್ದರು.

ಸ್ಥಳದಲ್ಲಿ ಪಬ್ಲಿಕ್ ಇಂಪ್ಯಾಕ್ಟ್ ಮಾಧ್ಯಮದ ಕ್ಯಾಮರಾ ಕಂಡಕೂಡಲೇ ಖಾಕಿ ಫುಲ್ ಅಲರ್ಟ್ ಆಗಿದ್ದು ಆ ನಂತರ ಎಫ್ ಐ ಆರ್ ದಾಖಲಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ವರದಿಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments