Wednesday, March 25, 2026
Homeಕ್ರೈಮ್ಮೂಡಿಗೆರೆ: ಲವ್ ಜಿಹಾದ್ ಕೇಸ್ ಸ್ಫೋಟಕ ತಿರುವು: ಮತಾಂತರಕ್ಕೆ ಒತ್ತಾಯಿಸಿ ಅಶ್ಲೀಲ ಫೋಟೋ ಹರಿಬಿಡುವ ಬೆದರಿಕೆ!

ಮೂಡಿಗೆರೆ: ಲವ್ ಜಿಹಾದ್ ಕೇಸ್ ಸ್ಫೋಟಕ ತಿರುವು: ಮತಾಂತರಕ್ಕೆ ಒತ್ತಾಯಿಸಿ ಅಶ್ಲೀಲ ಫೋಟೋ ಹರಿಬಿಡುವ ಬೆದರಿಕೆ!

ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಲವ್ ಜಿಹಾದ್ ಆರೋಪ ಪ್ರಕರಣಕ್ಕೆ ಸ್ಫೋಟಕ ತಿರುವು ಪಡೆದುಕೊಂಡಿದ್ದು ಮತಾಂತರಕ್ಕೆ ಒತ್ತಾಯಿಸಿ ಅಶ್ಲೀಲ ಫೋಟೋ ಹರಿಬಿಡುವ ಬೆದರಿಕೆ ಒಡ್ಡಿದ್ದಾನೆಂದು ಅಪ್ರಾಪ್ತ ವಿದ್ಯಾರ್ಥಿ ಮೇಲೂ ಗಂಭೀರ ಕೇಳಿಬಂದಿದೆ.

ಹೌದು ..ಅಪ್ರಾಪ್ತ ವಿದ್ಯಾರ್ಥಿ ಮತಾಂತರಕ್ಕೆ ಒತ್ತಾಯಿಸಿ ಅಶ್ಲೀಲ ಫೋಟೋ ಹರಿಬಿಟ್ಟ ಆರೋಪ ಕೇಳಿಬರುತ್ತಿದ್ದು ಹಾಗೆ ಮತಾಂತರಗೊಂಡು ಮದುವೆ ಆಗದಿದ್ದರೆ ಕೊಲೆ ಬೆದರಿಕೆ ನಂತರ ಹುಡುಗಿಯ ಅಪ್ಪ-ಅಮ್ಮ‌ನನ್ನ ಕೊಲ್ಲುವುದಾಗಿ ಅಪ್ರಾಪ್ತೆಗೆ ಬೆದರಿಕೆ ಹಾಕಿದ್ದನೆಂದು ಹೇಳಲಾಗುತ್ತಿದೆ.

ಹೀಗಾಗಿ ಹೆತ್ತವರನ್ನ ಕೊಲ್ಲುತ್ತಾನೆಂದು ಹೆದರಿ ಪೋಷಕರಿಗೆ ದೂರು ಬೇಡ ಎಂದಿದ್ದ ಬಾಲಕಿ ಹಾಗೆ ಅಪ್ರಾಪ್ತ ಬಾಲಕ ಹಾಗೂ ಆತನ ಪೋಷಕರು ಹೇಳಿದಂತೆ ಕೇಳುತ್ತೇನೆ, ಇಲ್ಲ ಸಾಯಿಸುತ್ತಾನೆ ಎಂದು ಹೆದರಿದ್ದಳು ಆದರೂ ಅಪ್ರಾಪ್ತ ಬಾಲಕ ಹಾಗೂ ಆತನ ಪೋಷಕರ ವಿರುದ್ಧ ಬಾಲಕಿ ಪೋಷಕರಿಂದ ದೂರು ನೀಡಲಾಗಿತ್ತು.

ಮೂಡಿಗೆರೆ ತಾಲೂಕಿನ ಬಿಳಗುಳ ಗ್ರಾಮದ ಹುಡುಗ ಹಾಗೂ ಹುಡುಗಿ ಮೂಡಿಗೆರೆ ಪಟ್ಟಣಕ್ಕೆ ಓದಲು ಬರುವಾಗ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಈ ಬಗ್ಗೆ ಹಿಂದೂ ಸಂಘಟನೆ ಕಾರ್ಯಕರ್ತರು ಇದು ಲವ್ ಜಿಹಾದ್ ಎಂದು ಆರೋಪಿಸಿ ಅಪ್ರಾಪ್ತ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಈ ಬಗ್ಗೆ ಅಪ್ರಾಪ್ತ ಯುವಕ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಮೂವರು ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ದೂರು ನೀಡಿದ್ದು, ಹಿಂದೂ ಸಂಘಟನೆ ಕಾರ್ಯಕರ್ತ ಸುದೇವ್ ಸೇರಿ ಮೂವರ ವಿರುದ್ಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೋಕ್ಸೋ, ಐಟಿ ಆಕ್ಟ್ ಅಡಿಯಲ್ಲಿ ಬಾಲಕನ ಮೇಲೂ ಪ್ರಕರಣ ದಾಖಲಾಗಿದ್ದು ಬಾಲಕನ ಪೋಷಕರ ಮೇಲೂ ಪ್ರಚೋದನೆ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪ್ರಕರಣ ಕುರಿತು ತೀವ್ರ ಹಾಗೂ ಸಂಕ್ಷಿಪ್ತ ತನಿಖೆ ನಡೆಯುತ್ತಿದೆ ಎಂದು ಚಿಕ್ಕಮಗಳೂರು ಎಸ್ಪಿ ಜಿತೇಂದ್ರ ದಯಾಮ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!