ಚಿಕ್ಕಮಗಳೂರು: ಹಿಂದುಳಿದ ಒಕ್ಕಲಿಗರ ಅಭಿವೃದ್ಧಿ ಸಂಘದ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ನಡೆದಿದ್ದು ಒಕ್ಕಲಿಗ ರಾಜ್ಯ ಸಮಿತಿ ಅಧ್ಯಕ್ಷ ಸೋಮಶೇಖರ್ ಅವರು ಜಿಲ್ಲೆಯ ಹಿಂದುಳಿದ ಒಕ್ಕಲಿಗರ ಅಭಿವೃದ್ಧಿ ಉದ್ದೇಶ ಇಟ್ಟುಕೊಂಡು ಕರ್ನಾಟಕ ರಾಜ್ಯದ ಹಿಂದುಳಿದ ಒಕ್ಕಲಿಗರ ಅಭಿವೃದ್ಧಿ ಸಂಘದ ರಾಜ್ಯ ಸಮಿತಿ ವತಿಯಿಂದ ಮಹಿಳಾ ಮತ್ತು ಪುರಷರ ಜಿಲ್ಲಾ ಸಮಿತಿ ಪದಾಧಿಕಾರಿಗಳ ಆಯ್ಕೆ ಮಾಡಿರುವುದಾಗಿ ಪಬ್ಲಿಕ್ ಇಂಪ್ಯಾಕ್ಟ್ ವಾಹಿನಿಗೆ ತಿಳಿಸಿದರು.

ಜಿಲ್ಲೆಯ ಹಿಂದುಳಿದ ಒಕ್ಕಲಿಗರ ಅಭಿವೃದ್ಧಿ ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷರಾಗಿ ಎಂ.ಪಿ.ದೀಪಕ್, ಮಹಿಳಾ ಜಿಲ್ಲಾ ಅಧ್ಯಕ್ಷರಾಗಿ ಎಂ.ಆರ್ ಚೈತ್ರಾ, ಉಪಾಧ್ಯಕ್ಷರಾಗಿ ಧರ್ಮೇಗೌಡ, ಆಲ್ದೂರು ಮತ್ತು ತರೀಕೆರೆ ಹನುಮಂತೇಗೌಡ, ಮಹಿಳಾ ಉಪಾಧ್ಯಕ್ಷರಾಗಿ ಅಮಿತಾ ಎಚ್.ಎ. ಮೂಡಿಗೆರೆ ಮತ್ತು ಲತಾ ತರೀಕೆರೆ, ಪುರುಷರ ಪ್ರಧಾನ ಕಾರ್ಯದರ್ಶಿಯಾಗಿ ಎಚ್.ಸಿ.ಮಂಜುನಾಥ ಅವರನ್ನ ಆಯ್ಕೆ ಮಾಡಲಾಗಿದೆ.
ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿಯಾಗಿ ಚೈತ್ರಾ ಎಂ.ಆರ್., ಪುರುಷರ ಜಿಲ್ಲಾ ಕಾರ್ಯದರ್ಶಿಯಾಗಿ ಚಂದ್ರಶೇಖರ ಎಂ.ಸಿ., ಜಿಲ್ಲಾ ಮಹಿಳಾ ಕಾರ್ಯದರ್ಶಿಯಾಗಿ ಚೈತ್ರಾ ಎಸ್.ಕೆ. ಕೊಪ್ಪ, ಕೋಶಾಧಿಕಾರಿಯಾಗಿ ಶ್ವೇತಾ ಎಂ.ಕೆ. ಕಳಸ ಇವರುಗಳಿಗೆ ಹಿಂದುಳಿದ ಒಕ್ಕಲಿಗ ಅಭಿವೃದ್ಧಿ ಸಂಘದ ಜವಾಬ್ದಾರಿ ವಹಿಸಲಾಗಿದೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಹಿಂದುಳಿದ ಒಕ್ಕಲಿಗ ಅಭಿವೃದ್ಧಿ ಸಂಘದ ರಾಜ್ಯ ಸಮಿತಿ ಪದಾಧಿಕಾರಿಗಳು,ಹಿರಿಯರು ಜಿಲ್ಲಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು
ವರದಿ:ಪುನೀತ್ ಕಡಿದಾಳು
9483811948
