ಮೂಡಿಗೆರೆ ತಾಲೂಕಿನ ಅಂಚಿನಲ್ಲಿರುವ ಬೆಟ್ಟದ ಬೈರವೇಶ್ವರ ದೇವಾಲಯದ ಆವರಣದಲ್ಲಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್‌ಗೆ ತೆರಳಿದ್ದ ಫೋಟೋಗ್ರಾಫರ್‌ಗಳು ಪಾದರಕ್ಷೆ (ಶೂ) ಧರಿಸಿ ಚಿತ್ರೀಕರಣ ನಡೆಸುತ್ತಿದ್ದರು ಎಂಬ ಆರೋಪ ಮತ್ತು ಚಿತ್ರೀಕರಣಕ್ಕೆ ಅನುಮತಿ ಪಡೆಯದ ವಿಷಯವಾಗಿ ಸ್ಥಳೀಯರೊಂದಿಗೆ ಗಲಾಟೆ ಹಾಗೂ
ಗ್ರಾಮಸ್ಥರ ಮೇಲೆ ಹಲ್ಲೆ ನಡೆಸಿ ಬೈರವೇಶ್ವರನಿಗೆ ಅವಮಾನ ಮಾಡಿದ್ದಾರೆ ಹೀಗಾಗಿ ಅವರ ಮೇಲೆ ಕ್ರಮ ಜರುಗಿಸಿ ಮತ್ತು ಮುಜರಾಯಿ ದೇವಸ್ಥಾನಗಳಲ್ಲಿ ಫ್ರಿವೆಡ್ಡಿಂಗ್ ಶೂಟ್ ನಿರ್ಬಂಧ ಹೇರುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಹಾಗೆ ಪ್ರಕೃತಿ ಪ್ರಿಯರ ನೆಚ್ಚಿನ ತಾಣ ಮೂಡಿಗೆರೆಯ ಅಂಚಿನಲ್ಲಿರುವ ಸಕಲೇಶಪುರ ತಾಲೂಕಿನ ಬೆಟ್ಟದ ಭೈರವೇಶ್ವರ ದೇಗುಲದ ಬಳಿ ಪೋಟೋಗ್ರಾಫರ್ ಗಳು ಅದರಂತೆ ಬೆಟ್ಟದ ಭೈರವೇಶ್ವರ ದೇಗುಲ ಆವರಣಕ್ಕೆ ಹಾಸನದ ಇಬ್ಬರು ಹಾಗೂ ಬೆಂಗಳೂರಿನ ಮೂವರು ಫೋಟೋಗ್ರಾಫರ್ಸ್ಗಳ ತಂಡ ಶುಕ್ರವಾರ ಬೆಳಗ್ಗೆ ಪ್ರೀ ವೆಡ್ಡಿಂಗ್ ಶೂಟ್‌ಗೆ ಆಗಮಿಸಿದ್ದರು. ಆದರೆ ದೇಗುಲದ ಗರ್ಭಗುಡಿ ಹಿಂಭಾಗದ ಗೋಡೆಗೆ ಒಂದು ಕಾಲಿರಿಸಿ ಚಿತ್ರೀಕರಿಸುತ್ತಿದ್ದ ಬಗ್ಗೆ ಅಲ್ಲಿದ್ದ ಮೂಡಿಗೆರೆ ಮೂಲದ ಭಕ್ತರು, ಇದು ಧಾರ್ಮಿಕ ಸ್ಥಳ, ಪಾವಿತ್ರ್ಯತೆ ಕಾಪಾಡಬೇಕು ಎಂದು ಹಿತವಚನ ಹೇಳಿದರು ಎನ್ನಲಾಗಿದೆ. ಈ ವೇಳೆ ಫೋಟೊಗ್ರಾಫರ್ಸ್ ಮತ್ತು ಭಕ್ತರ ನಡುವೆ ವಾಗ್ವಾದ ಶುರುವಾಗಿ, ಪರಸ್ಪರ ಕೈಕೈಮಿಲಾಯಿಸಿದರು.

ಅರ್ಚಕರು ಗರ್ಭಗುಡಿ ಸಾರ್ ಈ ತರ ಚಿತ್ರೀಕರಣ ಮಾಡುವುದು ತಪ್ಪು ಎಂದು ತಿಳಿಸಿ ತಮ್ಮ ಪೂಜಾ ಕೈಂಕರ್ಯಗಳನ್ನು ಮುಗಿಸಿ ಹೋದ ನಂತರ ಅವರು ಹೋದ ನಂತರ ಪೋಟೋಗ್ರಾಫರ್ ಗಳು ವಧುವನ್ನು ಅದೇ ಭಂಗಿಯಲ್ಲಿ ನಿಲ್ಲುವಂತೆ ತಿಳಿಸಿದಾಗ ಸ್ಥಳಿಯರು ಅಲ್ಲಿಗೆ ಬಂದು ಅರ್ಚಕರ ಮಾತಿಗೆ ಬೆಲೆ ಕೊಡಿ ಪುರಾತರನ ಪ್ರಸಿದ್ದಿ ದೇವಸ್ಥಾನ ಎಂದು ತಿಳಿಸಿದಾಗಿ ಸಿಟ್ಟಿಗೆದ್ದ ಪೋಟೋಗ್ರಾಪರ್ ಗಳು ಮಾತಿಗೆ ಮಾತು ಬೆಳೆಸಿದರು ನಂತರ ಪರಿಸ್ಥಿತಿ ವಿಕೋಪಕ್ಕೆ ತೆರಳಿದಾಗ ತಲ್ಲಾಟ ಪ್ರಾರಂಭವಾಯಿತು. ಗ್ರಾಮಸ್ಥರನ್ನು ಅವಮಾನಿಸಲು ಪ್ರಾರಂಬಿಸಿದಾಗ ಸಿಟ್ಟಿಗೆದ್ದ ಗ್ರಾಮಸ್ಥ ದೇವರಿಗೆ ಅವಮಾನ ಮಾಡಬೇಡಿ ಎಂದು ಮನವಿಗೊಂಡರು ಪೋಟೋಗ್ರಾಫರ್ ಗಳು ಗೂಂಡಾಗಳಂತೆ ವರ್ತಿಸಿದ್ದು, ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ
ಇಲ್ಲಿಗೆ ಫೋಟೋ ಶೂಟ್ ಮಾಡಲು ಬರುವ ಬಹುತೇಕರು ದೇಗುಲದ ಪಾವಿತ್ರ್ಯಕ್ಕೆ ಧಕ್ಕೆ ತರುತ್ತಿದ್ದಾರೆ. ಪ್ರವಾಸಿಗರು ಹಾಗೂ ಭಕ್ತರಿಗೆ ಇರಿಸು-ಮುರಿಸು ಉಂಟು ಮಾಡುತ್ತಿದ್ದಾರೆ. ಪ್ರಶ್ನಿಸಿದರೆ ಉಡಾಫೆ ಉತ್ತರ ನೀಡುತ್ತಾರೆ ಎಂಬುದು ಸ್ಥಳೀಯರ ಆರೋಪದ ಜತೆಗೆ ಅಸಮಾಧಾನ ಕೂಡ. ಅದೇನೆ ಇರಲಿ. ಬೆಟ್ಟದ ಭೈರವೇಶ್ವರ ದೇಗುಲದ ಬಳಿ ಶುಕ್ರವಾರ ನಡೆದ ಘಟನೆ ಕುರಿತಂತೆ ಜಾಲತಾಣಗಳಲ್ಲೂ ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಹಲ್ಲೆ ನಡೆಸಿದ ಆರೋಪದಡಿ ಇಬ್ಬರು ಜೈಲು ಸೇರಿದ್ದಾರೆ. ಹೀಗಾಗಿ ಮನಸ್ಸೋ ಇಚ್ಛೆ ಫೋಟೊ ಶೂಟ್ ಮಾಡುತ್ತಿದ್ದವರಿಗೆ ಕಡಿವಾಣ ಹಾಕಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಒತ್ತಾಯಿಸಿದ ಗ್ರಾಮಸ್ಥರು ಘಟನೆ ನಡೆದು ೨-೩ ದಿನ ಕಳೆದರೂ ತಹಶೀಲ್ದಾರ್ ಆಗಲಿ ಎಸಿ ಆಗಲಿ ಆಗಮಿಸದೆ ಇರುವುದು ಒಂದು ದೊಡ್ಡ ದುರಂತವೇ ಆಗಿದೆ ಎಂದು ಜಿಲ್ಲಾಢಳಿತದ ವಿರುದ್ದ ಆಕ್ರೋಷ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಕೀರ್ತಿ ಮಗ್ಗಲಮಕ್ಕಿ, ಪ್ರಧ್ಯಮ್ನ ಕುಂಟಳ್ಳಿ,ಲೋಕೇಶ್ ದೇವಾಲಯದಕೆರೆ, ಬ್ರೀಜೇಶ್ ಕಡಿದಾಳು, ಕಣಚೂರು ವಿನೋದ್, ವಿಕ್ರಂ ಹುರುಡಿ, ಅವರೇಕಾಡು ಪೃಥ್ವಿ, ಹಟ್ಟಿಬೆಟ್ಟ ಪುಣ್ಯಮೂರ್ತಿ,ನೂತನ್ ಬೆಟ್ಟಗೇರೆ ಸುಮಾ,ಮೇಘ, ಅಂಬಿಕಾ, ವಸಂತ್, ಉಮೇಶ್ ಸೇರಿದಂತೆ ಭಕ್ತರು ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ:ಪುನೀತ್ ಕಡಿದಾಳು
9483811948
