ಶಿವಮೊಗ್ಗ: ಲಾರಿಗೆ ಬೈಕ್ ಡಿಕ್ಕಿಯಾಗಿ ನವ ದಂಪತಿ ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಶಂಕರಘಟ್ಟ ಗ್ರಾಮದ ಬಿಆರ್ಪಿ ಬಳಿ ನಡೆದಿದೆ.
WhatsApp Group
Join Now

ಹೌದು .. ಬೈಕ್ನಲ್ಲಿದ್ದ ಬಾಬು(30), ಸಾವಿತ್ರಿ(26) ಮೃತ ದುರ್ದೈವಿಗಳಾಗಿದ್ದು, ಹೋಟೆಲ್ ಕೆಲಸ ಮುಗಿಸಿ ಊರಿಗೆ ಹೋಗ್ತಿದ್ದಾಗ ಅಪಘಾತ ನಡೆದಿದೆ.ಮೃತರು ಚಿಕ್ಕಮಗಳೂರು ಜಿಲ್ಲೆಯ ತರಿಕೇರಿ ಮೂಲದವರಾಗಿದ್ದು, ಇವರ ಮುದುವೆ ಆಗಿ ಕೇವಲ ಆರು ತಿಂಗಳಾಗಿತ್ತು.
ಪ್ರಕರಣ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
