Wednesday, July 15, 2026
Homeಜಿಲ್ಲಾಸುದ್ದಿಮೂಡಿಗೆರೆ: ತಾಲೂಕು ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಸಂತೋಷ್ ಅತ್ತಿಗೆರೆ ಆಯ್ಕೆ

ಮೂಡಿಗೆರೆ: ತಾಲೂಕು ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಸಂತೋಷ್ ಅತ್ತಿಗೆರೆ ಆಯ್ಕೆ

Telegram Group
Join Now

ಮೂಡಿಗೆರೆ: ತಾಲೂಕು ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಸಂತೋಷ್ ಅತ್ತಿಗೆರೆ ಆಯ್ಕೆಯಾಗಿದ್ದಾರೆ.

ಹೌದು .. ಪಟ್ಟಣದ ಪತ್ರಕರ್ತರ ಕಚೇರಿಯಲ್ಲಿ ಶನಿವಾರ ನಡೆದ ಚುನಾವಣೆಯಲ್ಲಿ ಸಂಘದ ಸದಸ್ಯರು ಉತ್ಸಾಹದಿಂದ ಪಾಲ್ಗೊಂಡು ಮತ ಚಲಾಯಿಸಿದರು. ಮತ ಎಣಿಕೆಯ ಬಳಿಕ ಪ್ರಕಟವಾದ ಫಲಿತಾಂಶದಲ್ಲಿ ವಿಜಯ ಕರ್ಣಾಟಕ ಪತ್ರಿಕೆ ಬಣಕಲ್‌ ವರದಿಗಾರ ಸಂತೋಷ್ ಅತ್ತಿಗೆರೆ ಅವರು ಬಹುಮತದೊಂದಿಗೆ ಗೆಲುವು ಸಾಧಿಸಿದ್ದಾರೆ.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಂತೋಷ್ ಅತ್ತಿಗೆರೆ ಅವರಿಗೆ ಸಂಘದ ಸದಸ್ಯರು ಅಭಿನಂದನೆ ಸಲ್ಲಿಸಿದರು. ಸಂಘದ ಹಿತಾಸಕ್ತಿಗೆ ಆದ್ಯತೆ ನೀಡುವ ಮೂಲಕ ಕಾರ್ಯನಿರ್ವಹಿಸುವ ನಿರೀಕ್ಷೆ ವ್ಯಕ್ತವಾಗಿದೆ.

ಈ ವೇಳೆ ನಿಕಟಪೂರ್ವ ಅಧ್ಯಕ್ಷರಾದ ಪ್ರಸನ್ನಕುಮಾರ್,‌ ಮಾಜಿ ಅಧ್ಯಕ್ಷರುಗಳಾದ ಪ್ರಸನ್ನ ಗೌಡಳ್ಳಿ, ನಯನ ತಳವಾರ, ಎಂ.ಎಚ್‌ ಅಮರ್‌ ನಾಥ್‌, ಎಂ.ಆರ್.‌ ಉದಯಶಂಕರ್‌, ಆನಂದ ಕಣಚೂರು , ಸದಸ್ಯರಾದ ಗಣೇಶ್‌ ಮಗ್ಗಲಮಕ್ಕಿ, ಪ್ರಕಾಶ್‌ ಬಕ್ಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments