Wednesday, July 15, 2026
Homeಜಿಲ್ಲಾಸುದ್ದಿCongress Cold War: ಮೂಡಿಗೆರೆಯಲ್ಲಿ ಕಾಂಗ್ರೆಸ್ ಶೀತಲ ಸಮರ: ಸಿ.ಬಿ.ಶಂಕರ್ ಔಟ್ ಆಗಿ ನಾಟೌಟ್ ಆದ...

Congress Cold War: ಮೂಡಿಗೆರೆಯಲ್ಲಿ ಕಾಂಗ್ರೆಸ್ ಶೀತಲ ಸಮರ: ಸಿ.ಬಿ.ಶಂಕರ್ ಔಟ್ ಆಗಿ ನಾಟೌಟ್ ಆದ ರೋಚಕತೆ

Telegram Group
Join Now

ಮೊದಲಿಗೆ ನಯನಾ ವಿರೋಧಿಗಳಿಗೆ (ತಾಲೂಕು ಅಧ್ಯಕ್ಷ&ಟೀಂ) ಗೆಲುವು ಎಂದು ಘೋಷಣೆ.. ಥರ್ಡ್ ಅಂಪೈರ್( ಅಂಶುಮಂತ್ , ಜಿಲ್ಲಾಧ್ಯಕ್ಷರು) ಎಂಟ್ರಿ, ಫಲಿತಾಂಶ(ಆದೇಶ) ತಡೆಹಿಡಿಯುವಂತೆ ಸೂಚನೆ.. ಮತ್ತೆ ನಯನಾ ಪರ ಅಭಿಮಾನಿಗಳಲ್ಲಿ(ಬೆಂಬಲಿಗರು, ಕಾರ್ಯಕರ್ತರು-ಮುಖಂಡರು) ಗರಿಗೆದರಿದ ಹರ್ಷ..!

ಯೆಸ್.. ಮೂಡಿಗೆರೆ ಕಾಂಗ್ರೆಸ್‌ನ ಬೆಳವಣಿಗೆ ದಿನೇದಿನೇ ಸಖತ್ ರೋಚಕತೆಯನ್ನ ಮೂಡಿಸ್ತಿದೆ.. ಎ ಟೀಂ ಸಿಕ್ಸರ್ ಹೊಡೀತಾ ಸಂಭ್ರಮಿಸ್ತಾ ಪೋಸ್ ಕೊಡ್ತಿದ್ರೆ.. ಬಿ ಟೀಂ ನಾವೇನೂ ಕಡಿಮೆಯಿಲ್ಲ ಅಂತಾ ನೋಬಾಲ್’ಗೆ ಸಿಕ್ಸರ್ ಹೊಡೆದು, ಹೇಂಗೆ ನಾವು ಅಂತಾ ಠಕ್ಕರ್ ಕೊಡ್ತಾ ಇದೆ..!

ಜುಲೈ 14, 2026ರಂದು ನಡೆದ ವಿಚಾರಕ್ಕೆ ಬರೋಣ.. ಕಾಂಗ್ರೆಸ್ ಪಕ್ಷದ ಕಸಬಾ ಹೋಬಳಿ ಅಧ್ಯಕ್ಷರಾದ ಸಿ.ಬಿ ಶಂಕರ್ ಅವರನ್ನ ಆ ಸ್ಥಾನದಿಂದ ವಜಾ ಮಾಡಿದ್ದೇವೆ ಅಂತಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಜಿ ಸುರೇಂದ್ರ ಅವರು ಆದೇಶ ಹೊರಡಿಸ್ತಾರೆ.. ಇದು, ನಯನಾ ಬೆಂಬಲಿಗರಾಗಿರೋ ಶಂಕರ್ ಅವರಿಗೆ ಆದ ಮುಖಭಂಗ ಮಾತ್ರವಲ್ಲ ಬದಲಾಗಿ ಶಾಸಕಿ ನಯನಾ ಅವರಿಗೂ ಆದ ತೀವ್ರ ಹಿನ್ನೆಡೆ ಅನ್ನೋದ್ರಲ್ಲಿ ನೋ ಡೌಟ್.!

ಇದರಿಂದ ಎಚ್ಚೆತ್ತ ನಯನಾ ಮೋಟಮ್ಮ ಟೀಂ, ಈ ಆದೇಶವನ್ನ ಕೆಲವೇ ಗಂಟೆಗಳಲ್ಲಿ ವಜಾ ಮಾಡಿಸುವಲ್ಲಿ ಯಶಸ್ವಿ ಆಗಿದೆ.. ಯೆಸ್, ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರರವರು, ಶಂಕರ್ ಅವರನ್ನ ವಜಾ ಮಾಡಿರೋ ಆದೇಶವನ್ನೇ ವಜಾ ಮಾಡ್ತಾರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿರೋ ಅಂಶುಮಂತ್ ರವರು.. ಅಲ್ಲಿಗೆ ನಯನಾ ಟೀಂನಲ್ಲಿ ಹರ್ಷೋದ್ಗಾರ ಮನೆ ಮಾಡುತ್ತೆ..!

#ಒಂದೇ #ವಾರದಲ್ಲಿ #ಎರಡು #ಮಾಸ್ಟರ್ #ಸ್ಟ್ರೋಕ್ #ಕೊಟ್ಟ #ಶಾಸಕಿ #ನಯನಾ..!

ಹೌದು, ಕಳೆದ ಒಂದು ವಾರದ ಹಿಂದೆ ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಜಿ ಸುರೇಂದ್ರ ಸೇರಿದಂತೆ ಮಾಜಿ ಸಚಿವರಾದ #ಬಿಬಿ #ನಿಂಗಯ್ಯ, ಮಾಜಿ ಶಾಸಕರಾದ ಎಂ.ಪಿ ಕುಮಾರಸ್ವಾಮಿ, ಕೈ ಮುಖಂಡರಾದ ಜಯರಾಂಗೌಡ, #ಹಾಲಪ್ಪಗೌಡ ಸೇರಿದಂತೆ ಒಂದಷ್ಟು ಮಂದಿ ನಯನಾ ಮೋಟಮ್ಮ ವಿರುದ್ಧ ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ ಹರಿಪ್ರಸಾದ್ ಅವರಲ್ಲಿ ದೂರು ನೀಡಿದ್ರು. ನಯನಾ ಮೋಟಮ್ಮ, ಬಿಜೆಪಿ/RSS ಜೊತೆ ಸಖ್ಯ ಇಟ್ಟುಕೊಂಡಿದ್ದಾರೆ ಅನ್ನೋದ್ರ ಜೊತೆಗೆ ನಮ್ಮ ಮಾತುಗಳಿಗೆ ಪಕ್ಷದಲ್ಲಿ #ಕಾವಡೆ ಕಾಸಿನ #ಕಿಮ್ಮತ್ತಿಲ್ಲ ಅಂತಾ ಅವಲತ್ತುಕೊಂಡಿದ್ರು.. ಹಾಗಾಗೀ ಶಾಸಕಿ ನಯನಾ ಮೋಟಮ್ಮ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತಾ ದೂರು ಸಲ್ಲಿಸಿದ್ರು..!

ಯಾವಾಗ ನಮ್ಮ ಮೇಲೆ ವಿರೋಧಿ ಟೀಂ ಮಸಲತ್ತು ಮಾಡ್ತಿದೆ ಅನ್ನೋದು ಗೊತ್ತಾಯ್ತೋ ಆಗ ನಯನಾ ಮೋಟಮ್ಮ ಟೀಂ, ಯಾಕೆ ಆ ಟೀಂ ಶಾಸಕಿಯನ್ನ ವಿರೋಧ ಮಾಡ್ತಿದೆ ಅಂತಾ ಬಿ.ಕೆ ಹರಿಪ್ರಸಾದ್ ಅವರಿಗೆ ಸ್ಪಷ್ಟನೆ ಕೊಟ್ಟಿತ್ತು.! #400ಕ್ಕೂ ಹೆಚ್ಚು ಮಂದಿ ಬೆಂಗಳೂರಿಗೆ ತೆರಳಿ, ನಯನಾ ಮೋಟಮ್ಮ ಉತ್ತಮ ಕೆಲಸ ಮಾಡ್ತಿದ್ದಾರೆ ಅಂತಾ ರಿಪೋರ್ಟ್ ಕಾರ್ಡನ್ನ ಕೆಪಿಸಿಸಿ ಅಧ್ಯಕ್ಷರು ಹಾಗೂ ಸಿಎಂ ಡಿಕೆಶಿ ಅವರಿಗೆ ಕೊಟ್ಟು ಬಂದಿತ್ತು.. ಜೊತೆಗೆ ಮಹಿಳಾ ಕೋಟಾದಲ್ಲಿ ನಯನಾ ಮೋಟಮ್ಮನವರಿಗೆ ಮಂತ್ರಿ ಸ್ಥಾನ ಕೊಡಬೇಕು ಅನ್ನೋ ಬೇಡಿಕೆಯನ್ನ ಇಟ್ಟು ಬಂದಿತ್ತು.!

ಈ ಬೆಳವಣಿಗೆಯಿಂದ ಕಂಗೆಟ್ಟ ಹೆಚ್.ಜಿ ಸುರೇಂದ್ರ&ಟೀಂ , ಇವರಿಗೆ ಸ್ಥಳೀಯ ಮಟ್ಟದಲ್ಲೇ ಟಾಂಗ್ ಕೊಡಬೇಕು ಅಂತಾ ಸಿ.ಬಿ ಶಂಕರ್ ಅವರನ್ನ ಕಸಬಾ ಹೋಬಳಿ ಸ್ಥಾನದಿಂದ ಕೆಳಗಿಸಬೇಕು ಅಂತಾ ನಿರ್ಧರಿಸಿತ್ತು.! ಹೇಗಿದ್ರೂ ಹೋಬಳಿ ಅಧ್ಯಕ್ಷ ಸ್ಥಾನ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ವ್ಯಾಪ್ತಿಯಲ್ಲಿ(ಅಡಿಯಲ್ಲಿ) ಬರುತ್ತೆ ಅಂತಾ ನಿರ್ಧರಿಸಿ, ನಯನಾ ಮೋಟಮ್ಮ ಬೆಂಬಲಿಗನನ್ನ ಖೆಡ್ಡಾಕ್ಕೆ ಬೀಳಿಸಬೇಕು ಅಂತಾ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಿತ್ತು.. ಸೇರಿಗೆ ಸವ್ವಾ ಸೇರು ಎಂಬಂತೆ , ಹಂಗಾ ಮ್ಯಾಟ್ರು.🤔 ಹೋಬಳಿ ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ವ್ಯಾಪ್ತಿಯಲ್ಲಿ ಬರೋದಾದ್ರೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಜಿಲ್ಲಾ ಅಧ್ಯಕ್ಷರ ಅಡಿಯಲ್ಲಿ ಬರಬೇಕಲ್ವಾ ಅಂತಾ ಯೋಚಿಸಿದ ನಯನಾ ಟೀಂ, ಜಿಲ್ಲಾಧ್ಯಕ್ಷ ಅಂಶುಮಂತ್ ಗಮನಕ್ಕೆ ಸಿ.ಬಿ ಶಂಕರ್ ಕಸಬಾ ಹೋಬಳಿ ಅಧ್ಯಕ್ಷ ಸ್ಥಾನದಿಂದ ವಜಾ ಆಗಿರೋ ವಿಚಾರವನ್ನ ತಂದು, ಸಿ.ಬಿ ಶಂಕರ್ ಅವರನ್ನ ‘ಔಟ್’ ಮಾಡದಂತೆ ವಿನಂತಿಸಿತು .. ಸದ್ಯ ಫೀಲ್ಡ್ ಅಂಪೈರ್(ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು) ನೀಡಿರೋ ‘ತೀರ್ಪು’ ಸರಿಯಿಲ್ಲ ಅಂತಾ ಜಿಲ್ಲಾಧ್ಯಕ್ಷ ಅಂಶುಮಂತ್ , ಥರ್ಡ್ ಅಂಪೈರ್ ರೀತಿಯಲ್ಲಿ ಎಂಟ್ರಿ ಕೊಟ್ಟು #ವಜಾ ಮಾಡಿರೋ ಆದೇಶವನ್ನೇ #ವಜಾ ಮಾಡಿದ್ದಾರೆ..!

ಹೀಗೆ ಏಟಿನ ಮೇಲೆ ಏಟು ಕೊಟ್ಟು ತನ್ನ ವಿರೋಧಿಗಳಿಗೆ ಸರಿಯಾಗಿಯೇ ಠಕ್ಕರ್ ಕೊಟ್ಟಿದ್ದಾರೆ ನಯನಾ ಮೋಟಮ್ಮ.! ಈ ಮೂಲಕ ನಯನಾ ಟೀಂ, ಒಂದೇ ವಾರದಲ್ಲಿ ಎರಡೆರಡು ಮಾಸ್ಟರ್ ಸ್ಟ್ರೋಕನ್ನ ಎದುರಾಳಿ ಗುಂಪಿಗೆ ಕೊಟ್ಟಂತಾಗಿದೆ..!

ಸದ್ಯಕ್ಕೆ ನಯನಾ ಟೀಂ ‘ಕೈ’ ಮೇಲಾಗಿದೆ.. ಹಾಗಂತ.. ಇಷ್ಟಕ್ಕೆ ಸೈಲೆಂಟಾಗುತ್ತಾ ಬ್ಲಾಕ್ ಕಾಂಗ್ರೆಸ್ ಟೀಂ..? ಎದ್ದೇಳೋ ಪ್ರಯತ್ನ ಮಾಡಿದ್ರೆ ಮತ್ತೆ ಚಾಟಿ ಬೀಸುತ್ತ ನಯನಾ ಟೀಂ..! ಯಾವುದಕ್ಕೂ ಈ ಪೇಜ್ ಮೇಲೇ ಆಗಾಗ ಒಮ್ಮೊಮ್ಮೆ ಕಣ್ಣಾಡಿಸ್ತಾ ಇರಿ..! ಅಪ್ಡೇಟ್ ಕೊಡ್ತಾ ಇರ್ತೀನಿ..! ನಮಸ್ಕಾರ..!

 ಬರವಣಿಗೆ: ಪ್ರಶಾಂತ್ ಮೂಡಿಗೆರೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments