ಮೂಡಿಗೆರೆ:ಜನಪ್ರಿಯ ಶಾಸಕಿ ನಯನಾ ಮೋಟಮ್ಮ ಅವರ ಆಪ್ತ ಹಾಗೂ ಕಾಂಗ್ರೆಸ್ ಪಕ್ಷದ ಕಸಬಾ ಹೋಬಳಿ ಅಧ್ಯಕ್ಷ ಸಿ, ಬಿ, ಶಂಕರ್ ಅವರ ಸ್ಥಾನವನ್ನು ವಜಗೋಳಿಸಿದ್ದ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ನಿರ್ಧಾರವನ್ನು ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಶ್ನಿಸಿದೆ.

ಹೌದು ಕಸಬಾ ಹೋಬಳಿ ಅಧ್ಯಕ್ಷ ರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಿ. ಬಿ. ಶಂಕರ್ ಅವರ ಪರ ಬ್ಯಾಟ್ ಬಿಸಿದ ಸಮಿತಿಯು ಒಬ್ಬ ಅಧ್ಯಕ್ಷ ನನ್ನು ಜಿಲ್ಲಾ ಸಮಿತಿಗೂ ತಿಳಿಸದೇ ಯಾವುದೇ ಚರ್ಚೆ ಮಾಡದೆ ಏಕಾಎಕಿ ವಜಾ ಗೊಳಿಸುವುದು ಸರಿಯಲ್ಲ, ಪಕ್ಷದ ಕೆಲಸ ಮಾಡುತ್ತಿಲ್ಲ ಎಂಬ ಆರೋಪ ಮಾಡಿದ್ದೂ ದಿಡೀರ್ ನಿರ್ಧಾರ ಸರಿಯಲ್ಲ ತತ್ಕ್ಷಣ ಈ ನಿರ್ಧಾರ ತಡೆ ಹಿಡಿಯುವಂತೆ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಂಶುಮಂತ್ ಅವರು ಪತ್ರದ ಮೂಲಕ ಆದೇಶಿಸಿದ್ದಾರೆ .

ಈ ಒಂದು ಘಟನೆ ಮೂಡಿಗೆರೆ ರಾಜಕೀಯ ವಲಯದಲ್ಲಿ ಶಾಸಕಿ ಆಪ್ತ ರನ್ನು ರಾಜಕೀಯ ಕ್ಷೇತ್ರದಲ್ಲಿ ಮುಗಿಸುವ ಹುನ್ನಾರವೇ ಅಥವಾ ಶಾಸಕಿ ಮೇಲಿನ ರಾಜಕೀಯ ದ್ವೇಷವೇ ಎಂಬ ಹಲವು ಚರ್ಚೆಗೆ ಕಾರಣವಾಗಿರುವುದು ಸತ್ಯವಾಗಿದೆ.
