Tuesday, July 14, 2026
Homeಜಿಲ್ಲಾಸುದ್ದಿಮೂಡಿಗೆರೆ: ಮಲೆನಾಡ ಸುಗ್ಗಿ ಉತ್ಸವ: 35ಕ್ಕೂ ಅಧಿಕ ವಯೋವೃದ್ಧರಿಂದ ಫ್ಯಾಷನ್‌ ಶೋ!

ಮೂಡಿಗೆರೆ: ಮಲೆನಾಡ ಸುಗ್ಗಿ ಉತ್ಸವ: 35ಕ್ಕೂ ಅಧಿಕ ವಯೋವೃದ್ಧರಿಂದ ಫ್ಯಾಷನ್‌ ಶೋ!

Telegram Group
Join Now

ಮೂಡಿಗೆರೆ: ಅರೆ, ಫ್ಯಾಷನ್​​ ಶೋ ಅಂದ್ರೆ ಅಂದಚಂದದ ಚಂದುಳ್ಳಿ ಚಲುವೆಯರು ಮಾತ್ರ ಇರ್ತಾರೆ ಅಲ್ವಾ? ನೀವು ವಯಸ್ಸಾಗಿರೋರು ನಡೆಯೋದೇ ಕಷ್ಟ, ಅಂಥದ್ರಲ್ಲಿ ಫ್ಯಾಷನ್ ಶೋ ಮಾಡ್ತೀವಿ ಅಂತಿದ್ದೀರಲ್ಲ ಆದರೆ, ವಯಸ್ಸಾದವರು ಫ್ಯಾಷನ್ ಮಾಡ್ತೀವಿ ಅಂದ್ರೆ ಯುವಕ-ಯುವತಿಯರು ಸಾಮಾನ್ಯವಾಗಿ ಈ ರೀತಿ ತಮಾಷೆ ಮಾಡುವುದುಂಟು. ಆದರೆ, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ನಡೆದ ಮಲೆನಾಡ ಸುಗ್ಗಿಯಲ್ಲಿ ಹಿರಿಯರ ಫ್ಯಾಷನ್​​​​​ ಶೋ ವಿಶೇಷವಾಗಿ ಗಮನ ನಡೆಯಿತು.  

ಹೌದು .. ಮೂಡಿಗೆರೆ ತಾಲೂಕಿನಲ್ಲಿ ಮಲೆನಾಡ ಮಹಿಳೆಯರು ಒಟ್ಟು ಸೇರಿ ಮಲೆನಾಡ ಸುಗ್ಗಿ ಉತ್ಸವ ಎಂಬ ವಿಶಿಷ್ಟ ಕಾರ್ಯಕ್ರಮ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಹಿರಿಯರಿಗಾಗಿ ಫ್ಯಾಷನ್ ಶೋ ನಡೆಸಲಾಯಿತು.

ಹಿರಿ ಜೀವಗಳು ಕ್ಯಾಟ್​ವಾಕ್ ಮಾಡುವ ಮೂಲಕ ನೆರೆದಿದ್ದವರ ಹುಬ್ಬೇರಿಸುವಂತೆ ಮಾಡಿದರು. ಸುಮಾರು 35ಕ್ಕೂ ಅಧಿಕ ವಯೋವೃದ್ಧರು ಶೋದಲ್ಲಿ ಭಾಗವಹಿಸಿದ್ದು, ಎಲ್ಲರೂ ಕೂಡ ತಮ್ಮ ಯೌವ್ವನದ ಜೀವನವನ್ನು ನೆನಪಿಸಿಕೊಂಡು ಖುಷಿಪಟ್ಟರು. 

ಕೆಲವು ಜೋಡಿಗಳು ಪಂಚೆ, ಸೀರೆ ತೊಟ್ಟು ಸಾಂಪ್ರದಾಯಿಕ ಉಡುಗೆಯಲ್ಲಿ ಬಂದರು. ಇನ್ನು ಕೆಲವರು ತಮಗೇನು ಕಮ್ಮಿ ಎಂಬಂತೆ ಆಧುನಿಕ ಅಲಂಕಾರದಲ್ಲಿ ಬಂದು ಸಂಭ್ರಮಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments