ಕೊಟ್ಟಿಗೆಹಾರ ಸಮೀಪದ ದೇವನಗುಲ್ ಗುಡ್ಡದ ರವಿ ಎಂಬವರ ಮನೆ ಬಳಿ ಒಂಟಿ ಸಲಗ ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ಸೃಷ್ಠಿಯಾಗಿದೆ.
ಹೌದು .. ದೇವನಗುಲ್ ಗುಡ್ಡ, ಮಲಯ ಮಾರುತ ಮತ್ತಿತರ ಪ್ರದೇಶದಲ್ಲಿ ಈ ಕಾಡಾನೆ ಆಗಾಗ ಪ್ರತ್ಯಕ್ಷವಾಗುತ್ತಿದ್ದು ಕಾಡಾನೆಯ ಸಂಚಾರದಿಂದ ಕೆಲವು ರೈತರ ತೋಟದಲ್ಲಿನ ಕಾಫಿ, ಮೆಣಸು, ಬಾಳೆ ಮತ್ತಿತರ ಬೆಳೆಗಳು ಹಾನಿಯಾಗುತ್ತಿದ್ದು ಅಪಾರ ನಷ್ಟ ಉಂಟಾಗಿದೆ.

ಗ್ರಾಮದ ಅಮಿತ್, ರಿಚರ್ಡ್, ರವಿ, ರಮೇಶ್ ಅವರ ಮನೆಯ ಸಮೀಪವೇ ಈ ಕಾಡಾನೆ ಹಲವು ಬಾರಿ ಕಾಣಿಸಿಕೊಂಡು ಜನರನ್ನು ಭಯಭೀತಗೊಳಿಸುತ್ತಿದೆ.ಅರಣ್ಯ ಇಲಾಖೆ ಗಮನಕ್ಕೆ ಬಂದರೆ ಪಟಾಕಿ ಸಿಡಿಸಿ ಸದ್ಯದ ಆನೆ ಓಡಿಸುವ ಕಾರ್ಯಾಚರಣೆ ನಡೆಯುತ್ತಿದೆ.ಆದರೆ ದೇವನಗುಲ್ ಗುಡ್ಡದ ಆಸುಪಾಸಿನ ಜನರು ದಿನ ಪಡಿತರ ಮತ್ತಿತರ ಸಾಮಾಗ್ರಿಗಳನ್ನು ತರಲು ಕೊಟ್ಟಿಗೆಹಾರ ಪೇಟೆಗೆ ಹೋಗಬೇಕಾಗುತ್ತದೆ. ಆದರೆ ಕಾಡಾನೆ ಈ ಭಾಗದಲ್ಲಿ ಯಾವಾಗ ಸಂಚರಿಸುತ್ತಿದೆ ಎಂಬುದೇ ಗೊತ್ತಾಗದೇ ಜನರು ಪೇಟೆಗೆ ಹೋಗುವುದೇ ದುಸ್ತರವಾಗಿದೆ.
ಕಾಡಾನೆಯನ್ನು ಕಾಡಿಗೆ ಖಾಯಂ ಆಗಿ ಓಡಿಸಿ ಪ್ರಾಣ ಹಾನಿ ಬೆಳೆ ಹಾನಿ ತಡೆಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
