ಎನ್.ಆರ್.ಪುರ: ಆಸ್ಪತ್ರೆಯ ಬೆಡ್ ಮೇಲೆಯೇ ಮಲಗಿ ನರ್ಸ್‌ಗಳು ಮೊಬೈಲ್‌ನಲ್ಲಿ ರೀಲ್ಸ್ ನೋಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಆರೋಗ್ಯ ಇಲಾಖೆಯ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿವೆ. ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್.ಪುರ ತಾಲೂಕಿನ ಬಾಳೆಹೊನ್ನೂರು ಪ್ರಾಥಮಿಕ ಕೇಂದ್ರದಲ್ಲಿ ನಡೆದಿದೆ. ರೋಗಿಯೊಬ್ಬರು ರಹಸ್ಯವಾಗಿ ಚಿತ್ರೀಕರಿಸಿದ ಈ ದೃಶ್ಯಗಳು ಸರ್ಕಾರಿ ಆಸ್ಪತ್ರೆಗಳ ಕಾರ್ಯವೈಖರಿಯ ಬಗ್ಗೆ ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿವೆ.

ಹೌದು .. ಮಧ್ಯಾಹ್ನದ ವೇಳೆ ವೈದ್ಯರು ಊಟಕ್ಕೆ ತೆರಳಿ ಸಮಯಕ್ಕೆ ಸರಿಯಾಗಿ ವಾಪಸ್ ಬಾರದಿರುವ ಸಂದರ್ಭದಲ್ಲಿ, ರೋಗಿಗಳ ಆರೈಕೆ ಮಾಡಬೇಕಾದ ನರ್ಸ್‌ಗಳು ತಮ್ಮ ಕರ್ತವ್ಯ ಮರೆತು ರೀಲ್ಸ್ ವೀಕ್ಷಣೆಯಲ್ಲಿ ಮಗ್ನರಾಗಿದ್ದಾರೆ. ಚಿಕಿತ್ಸೆಗಾಗಿ ಬಂದ ರೋಗಿಗಳಿಗೆ “ಡಾಕ್ಟರ್ ಬರ್ತಾರೆ ಕಾಯಿರಿ” ಎಂದು ಹೇಳಿ ಗಂಟೆಗಟ್ಟಲೆ ಕಾಯಿಸುವ ಸಿಬ್ಬಂದಿ, ಸಹಾಯ ಕೇಳಲು ಹೋದರೆ “ಬೇರೆ ನರ್ಸ್ ಬಳಿ ಹೋಗಿ” ಎಂದು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಆರೋಗ್ಯ ಸೇವೆಯಂತಹ ಅತ್ಯಂತ ತುರ್ತು ಮತ್ತು ಜವಾಬ್ದಾರಿಯುತ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳ ಈ ನಿರ್ಲಕ್ಷ್ಯದಿಂದಾಗಿ ರೋಗಿಗಳು ಮತ್ತು ಅವರ ಕುಟುಂಬದವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾರ್ವಜನಿಕ ಆಸ್ಪತ್ರೆಗಳಲ್ಲಿ ರೋಗಿಗಳ ಭದ್ರತೆ ಮತ್ತು ಸೇವೆಯ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ನೆಟ್ಟಿಗರು, ನಿರ್ಲಕ್ಷ್ಯ ತೋರಿದ ನರ್ಸ್‌ಗಳು ಮತ್ತು ಸಮಯ ಪಾಲಿಸದ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
