Tuesday, April 21, 2026
Homeಜಿಲ್ಲಾಸುದ್ದಿಕೊಟ್ಟಿಗೆಹಾರದ ದೇವನ ಗುಲ್ ಗ್ರಾಮದ ಶ್ರೀವರ ಪಿಯುಸಿಯಲ್ಲಿ ಡಿಸ್ಟಿಂಕ್ಷನ್

ಕೊಟ್ಟಿಗೆಹಾರದ ದೇವನ ಗುಲ್ ಗ್ರಾಮದ ಶ್ರೀವರ ಪಿಯುಸಿಯಲ್ಲಿ ಡಿಸ್ಟಿಂಕ್ಷನ್

ಕೊಟ್ಟಿಗೆಹಾರ : ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಸಮೀಪದ ದೇವನ ಗುಲ್ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿ ಶ್ರೀ ವರ ಅವರು ಇತ್ತೀಚೆಗೆ ಪ್ರಕಟವಾದ ಪರೀಕ್ಷಾ ಫಲಿತಾಂಶದಲ್ಲಿ 600 ಅಂಕಗಳಲ್ಲಿ 585 ಅಂಕಗಳನ್ನು ಗಳಿಸಿ ಡಿಸ್ಟಿಂಕ್ಷನ್‌ ಸಾಧನೆ ಮಾಡಿದ್ದಾರೆ.

ಶ್ರೀ ವರ ಅವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಬಣಕಲ್ ರಿವರ್ ವ್ಯೂ ಶಾಲೆಯಲ್ಲಿ ಪೂರ್ಣಗೊಳಿಸಿ, ಪ್ರೌಢ ವಿದ್ಯಾಭ್ಯಾಸವನ್ನು ಬಣಕಲ್ ಪ್ರೌಢ ಶಾಲೆಯಲ್ಲಿ ಅಭ್ಯಾಸ ಮಾಡಿದ್ದಾರೆ. ನಂತರ ಕಾರ್ಕಳದ ಭುವನೇಂದ್ರ ಪಿಯು ಕಾಲೇಜಿನಲ್ಲಿ ಮುಂದುವರಿದ ವಿದ್ಯಾಭ್ಯಾಸ ಮಾಡುತ್ತಾ ಈ ಸಾಧನೆ ಮಾಡಿದ್ದಾರೆ.
ಸೌಮ್ಯ ಮತ್ತು ದೇವನಗುಲು ನಾರಾಯಣಗೌಡ ಅವರ ಪುತ್ರರಾದ ಅವರು ತಮ್ಮ ಪರಿಶ್ರಮ ಮತ್ತು ಶಿಸ್ತಿನ ಮೂಲಕ ಈ ಸಾಧನೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿಯ ಈ ಸಾಧನೆಗೆ ಬಣಕಲ್ ಪ್ರೌಢಶಾಲೆಯ ಹಾಗೂ ರಿವರ್ ವ್ಯೂ ಶಾಲೆಯ ಆಡಳಿತ ವರ್ಗ, ಶಿಕ್ಷಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಅಭಿನಂದನೆಗಳನ್ನು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!