Friday, July 31, 2026
Homeಕ್ರೈಮ್ಬಣಕಲ್:‌ ಅಕ್ರಮ ಗೋ ಸಾಗಾಟ: ಗೋವುಗಳ ರಕ್ಷಣೆ ಮಾಡಿದ ಪವನ್ ಬಿನ್ನಡಿ ತಂಡ

ಬಣಕಲ್:‌ ಅಕ್ರಮ ಗೋ ಸಾಗಾಟ: ಗೋವುಗಳ ರಕ್ಷಣೆ ಮಾಡಿದ ಪವನ್ ಬಿನ್ನಡಿ ತಂಡ

Telegram Group
Join Now

ಬಣಕಲ್:ಪಿಕಪ್ ವಾಹನದಲ್ಲಿ ಜಾನುವಾರುಗಳನ್ನು ಅಕ್ರಮವಾಗಿ, ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆ ಮಾಡಿರುವ ಪವನ್ ಬಿನ್ನಡಿ ಹಾಗೂ ಅವರ ತಂಡ 4 ಗೋವುಗಳನ್ನು ರಕ್ಷಿಸಿದ್ದಾರೆ.

ಬಣಕಲ್ ಹಳ್ಳಿ ಪ್ರದೇಶಗಳಿಂದ ದನ ತುಂಬಿಸಿಕೊಂಡು ವೇಗವಾಗಿ ಬರುತ್ತಿದ್ದ ಪಿಕಪ್ ವಾಹನ ಕಂಡು ಅನುಮಾನ ಗೊಂಡ ಯುವಕರು ವಾಹನ ಅಡ್ಡಗಟ್ಟಿ ವಿಚಾರಿಸಿದಾಗ ಅಕ್ರಮ ಗೋ ಸಾಗಣಿಕೆ ಘಟನೆ ಬೆಳಕಿಗೆ ಬಂದಿದೆ.

ಗೋ ಸಾಗಣಿಕೆಗೆ ಬೇಕಾದ ಕೆಲವು ದಾಖಲಾತಿಗಳು ಇಲ್ಲದ ಕಾರಣ ಗೋವು ಗಳನ್ನು ವಾರಸುದಾರರ ಮನೆಗೆ ಬಿಟ್ಟು ತಿಳಿ ಹೇಳಲಾಗಿದೆ

ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಯುವಕರು ಕಡೂರು -ಮಂಗಳೂರು ಹೆದ್ದಾರಿಯಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಪಿಕಪ್ ತಡೆದು ನಿಲ್ಲಿಸಿ ತಪಾಸಣೆ ನಡೆಸಿದ್ದಾರೆ.

ಪಿಕಪ್ ನಲ್ಲಿ ಚಾಲಕನನ್ನು ಬಣಕಲ್ ಪೊಲೀಸ್ ಠಾಣೆಗೆ ಕರೆದೋಯ್ಯಲಾಗಿದ್ಫು,‌ಗೋವುಗಳನ್ನು ಮಾಂಸ ಮಾಡಿ ಪೂರೈಕೆ ಮಾಡಲು ಯೋಜನೆ ರೂಪಿಸಿದ್ದರು ಎಂದು ಅನುಮಾನ ಗೊಂಡು ಯುವಕರ ತಂಡ ಗೋ ರಕ್ಷಣೆಗೆ ಮುಂದಾಗಿದ್ದು ಎಂಬುದಾಗಿ ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಕರ್ನಾಟಕ ಗೋ ಹತ್ಯೆ ತಡೆ– ಗೋವು ಸಂರಕ್ಷಣಾ ಕಾಯ್ದೆ, ಕಲಂ 11ರ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಗೋ ಪ್ರೇಮಿಗಳ ಒತ್ತಾಯವಾಗಿದೆ

ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments