Tuesday, April 21, 2026
Homeಕ್ರೈಮ್ಚಿಕ್ಕಮಗಳೂರು: ಅಯ್ಯನಕೆರೆಯಲ್ಲಿ ಈಜಲು ತೆರಳಿದ್ದ ಬಾಲಕ ನೀರುಪಾಲು!

ಚಿಕ್ಕಮಗಳೂರು: ಅಯ್ಯನಕೆರೆಯಲ್ಲಿ ಈಜಲು ತೆರಳಿದ್ದ ಬಾಲಕ ನೀರುಪಾಲು!

ಚಿಕ್ಕಮಗಳೂರು: ಬೇಸಿಗೆ ರಜೆ ಎಂದು ಈಜಲು ತೆರಳಿದ್ದ ನಾಲ್ವರು ಬಾಲಕರಲ್ಲಿ ಓರ್ವ ನೀರುಪಾಲಾಗಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಇತಿಹಾಸ ಪ್ರಸಿದ್ದ ಅಯ್ಯನಕೆರೆಯಲ್ಲಿ ನಡೆದಿದೆ.

https://www.instagram.com/reel/DXZXOWWCbGx/?igsh=MWM4YXgyaXBpOWkwZQ==

ಹೌದು .. ವಿಜಯ್‌ ಹಾಗೂ ಅಶ್ವಿನಿ ದಂಪತಿಯ ಪುತ್ರ ಪೃಥ್ವಿರಾಜ್‌ ಮೃತ ದುರ್ದೈವಿ. 7ನೇ ತರಗತಿ ಓದುತ್ತಿದ್ದ ಬಾಲಕ ರಜೆ ಇದ್ದಿದ್ದರಿಂದ ಸ್ನೇಹಿತರ ಜೊತೆ ಈಜಲು ಹೋಗಿದ್ದ ವೇಳೆ ಈ ಅವಘಡ ಸಂಭವಿಸಿದೆ.

ಎದೆಯೆತ್ತರಕ್ಕೆ ಬೆಳೆದಿದ್ದ ಮಗನ ಸಾವನ್ನು ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ತಮ್ಮ ನ್ನಿಂದ ಶಾಶ್ವತವಾಗಿ ದೂವಾಗಿದ್ದಾನೆಂದು ತಿಳಿದು ಅಕ್ಕನ ಗೋಳಾಟ ಕಂಡು ಮನ ಕಲಕುವಂತಿತ್ತು.

ಬಾಲಕನಿಗಾಗಿ ಸ್ಥಳೀಯರು ಹಾಗೂ ಅಗ್ನಿ ಶಾಮಕ ದಳದವರು ಕಾರ್ಯಾಚರಣೆ ನಡೆಸಿದ ಬಳಿಕ ಮೃತ ಬಾಲಕನ ಶವ ಸಿಕ್ಕಿದೆ. ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.

ಒಟ್ಟಿನಲ್ಲಿ ಬೇಸಿಗೆ ರಜೆ ಪೋಷಕರ ಪಾಲಿಗೆ ಸಜೆಯಾಗಿ ಬದಲಾಗಿದ್ದು, ಮಕ್ಕಳನ್ನು ಕಾಯುವುದೇ ದೊಡ್ಡ ಕೆಲಸವಾಗಿದೆ. 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!