Thursday, April 23, 2026
Homeಕ್ರೈಮ್ಚಿಕ್ಕಮಗಳೂರು-ಬಾಳೆಹೊನ್ನೂರು ಮಾರ್ಗದ ಮಧ್ಯೆ ಮತ್ತೆ ಒಂಟಿ ಸಲಗ ಪ್ರತ್ಯಕ್ಷ: Video Viral

ಚಿಕ್ಕಮಗಳೂರು-ಬಾಳೆಹೊನ್ನೂರು ಮಾರ್ಗದ ಮಧ್ಯೆ ಮತ್ತೆ ಒಂಟಿ ಸಲಗ ಪ್ರತ್ಯಕ್ಷ: Video Viral

ಚಿಕ್ಕಮಗಳೂರು-ಬಾಳೆಹೊನ್ನೂರು ಮಾರ್ಗದ ಮಧ್ಯೆ ಮತ್ತೆ ಒಂಟಿ ಸಲಗವೊಂದು ಪ್ರತ್ಯಕ್ಷವಾಗಿದ್ದು ಇದರಿಂದ ಜನರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.

ಹೌದು .. ಕಾಡಾನೆಗಳು ಹಗಲಲ್ಲೇ ಸಂಚರಿಸುತ್ತಿರುವುದರಿಂದ ಅಲ್ಲಿರುವ ಜನರಿಗೆ ಸಂಚರಿಸಲು ಮತ್ತು ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಭಯಪಡುತ್ತಿದ್ದಾರೆ.  ಚಿಕ್ಕಮಗಳೂರು-ಬಾಳೆಹೊನ್ನೂರು ಮಾರ್ಗದ ಎಲೆಕಲ್ಲುವಿನಲ್ಲಿ ರಸ್ತೆ ದಾಟಿದ ಗಜರಾಜ ಇದನ್ನು ಅಲ್ಲಿನ ಗ್ರಾಂಸ್ಥರು ಕಣ್ಣಾರೆ ಕಂಡು ಮತ್ತೆ ಇದರ ಕಾಟ ಶುರುವಾಯಿತೆಂದು ಹಿಡಿಶಾಪ ಹಾಕಿದರು.

ಕಳೆದ ಕೆಲವು ತಿಂಗಳುಗಳಲ್ಲಿ ಈ ಭಾಗದಲ್ಲಿ ಆನೆ-ಮಾನವ ಸಂಘರ್ಷ ಮಿತಿಮೀರಿದ್ದು, ಮಲೆನಾಡಿನ ಜನ ಜೀವನದ ಮೇಲೆ ತೀವ್ರ ಪರಿಣಾಮ ಬೀರಿದೆ.




RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!