Friday, July 31, 2026
Homeಜಿಲ್ಲಾಸುದ್ದಿಜಯಪುರ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವದ ಆಹ್ವಾನ ಪತ್ರಿಕೆ ಬಿಡುಗಡೆ

ಜಯಪುರ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವದ ಆಹ್ವಾನ ಪತ್ರಿಕೆ ಬಿಡುಗಡೆ

Telegram Group
Join Now

ಜಯಪುರ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಂತಿಗ್ರಾಮದಲ್ಲಿ ಏಪ್ರಿಲ್ 28 ಮಂಗಳವಾರ ಹಾಗೂ ಏಪ್ರಿಲ್ 29 ಬುಧವಾರ ನಡೆಯಲಿರುವ ಅಮೃತ ಮಹೋತ್ಸವದ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸತೀಶ್ ಶೆಟ್ಟಿ ಮಾತನಾಡಿ ಆಹ್ವಾನ ಪತ್ರಿಕೆ ಹಂಚುವ ಕುರಿತು ಮಾಹಿತಿ ನೀಡಿದರು, ಆಹ್ವಾನ ಪತ್ರಿಕೆಯನ್ನು ನಿಮ್ಮ ಮನೆಯ ಅಥವಾ ಮದುವೆಯ ಪತ್ರಿಕೆಯನ್ನು ಹೇಗೆ ಹಂಚುತ್ತಿರೋ ಅಷ್ಟೇ ಗೌರವ ಮತ್ತು ಪ್ರೀತಿಯಿಂದ ಹಂಚುವ ಮೂಲಕ ಎಲ್ಲರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಿ ಎಂದು ಕರೆಕೊಟ್ಟರು.

ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಲು ಎಲ್ಲರ ಸಹಕಾರ ಅಗತ್ಯ ಹೀಗಾಗಿ ಎಲ್ಲರೂ ಕೈ ಜೋಡಿಸುವ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಪಾತ್ರರಾಗಬೇಕೆಂದು ಹೇಳಿದರು. ಸುತ್ತಮುತ್ತಲಿನ ಗ್ರಾಮದ ಯಾವ ಮನೆಯನ್ನು ಬಿಡದೆ ಆಹ್ವಾನ ಪತ್ರಿಕೆ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ ಹೀಗಾಗಿ ನಮ್ಮ ತಂಡವು ಶ್ರಮ ವಹಿಸುತ್ತಿದೆ ಎಂದರು.

ಸಭೆಯಲ್ಲಿ ಎಲ್ಲಾ ಸಮಿತಿಯವರ ಕಾರ್ಯಗಳ ರೂಪರೇಷೆಗಳ ಬಗ್ಗೆ ಚರ್ಚಿಸಲಾಯಿತು..

ಈ ಸಂಧರ್ಭದಲ್ಲಿ ಕೊಪ್ಪ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಹರ್ಷ, ಗುಡ್ಡೆತೋಟ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರುಗಳಾದ ಪ್ರಶಾಂತ್ ಜಾಳ್ಮರ ಮತ್ತು ಕೀರ್ತಿಸುಂದರರಾಜ್, ಕೃಷಿಕರಾದ ಬೆಂಡೆಹಕ್ಲು ನಾರಾಯಣ್, ಪ್ರವೀಣ್ ಜಾಳ್ಮರ, ಗುಡ್ಡೆತೋಟ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ರವಿ ಎನ್, ಖಾದರ್, ಮಂಜುನಾಥ್ ಕೆ ಜೆ, ಸುರೇಶ್, ಎಸ್ ಡಿ ಎಂ ಸಿ ಅಧ್ಯಕ್ಷರಾದ ಕಿಟ್ಟಯ್ಯ, ಶಾಲಾ ಶಿಕ್ಷಕರಾದ ಶ್ರೀನಿವಾಸ ಮತ್ತು ಆನಂದ್ ಹಾಗೂ ಮತ್ತಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments