ಮೂಡಿಗೆರೆ: ತಾಲೂಕಿನ ಹಾಂದಿ ಸಮೀಪ ಕಡೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಮನೆಯಲ್ಲಿ ಸಾಂಬರ್ ಮಾಡಿಲ್ಲ ಎಂಬ ಕಾರಣಕ್ಕೆ ಕುಟುಂಬ ಕಲಹ ತಾರಕಕ್ಕೇರಿದ ಘಟನೆ ಹಾಂದಿ ಗ್ರಾಮದಲ್ಲಿ ನಡೆದಿದೆ.

ಚಿತ್ರದುರ್ಗ ಮೂಲದ ಕೂಲಿ ಕಾರ್ಮಿಕ ಕುಟುಂಬದಲ್ಲಿ ಘಟನೆ ಸಂಭವಿಸಿದ್ದು ಕಿಡಿಗೇಡಿ ನಾಗರಾಜ್ ಎಂಬಾತ ಮದ್ಯಪಾನ ಮಾಡಿ ಹೆದ್ದಾರಿಯಲ್ಲಿ ರಂಪಾಟ ಮಾಡಿದ ಭೂಪ ಎಂಬುದಾಗಿ ತಿಳಿದು ಬಂದಿದೆ.
ಸಹೋದರಿ ಅಂಜಲಿ ಎಂಬುವರ ಮನೆಗೆ ಬಂದು ಅಕ್ಕನ ಮಗಳು ಮೌಲ್ಯ ಮತ್ತು ಸಹೋದರಿ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.
ಕುಟುಂಬದ ಜಗಳ ಮನೆಯಿಂದ ಹೊರಬಂದು ನೇರವಾಗಿ ರಾಷ್ಟ್ರೀಯ ಹೆದ್ದಾರಿಯ ಮಧ್ಯೆ ಮುಂದುವರಿದಿದ್ದು, ನಾಗರಾಜ್ ದೊಣ್ಣೆ ಹಿಡಿದು ಇಬ್ಬರಿಗೂ ಬೆದರಿಕೆ ಹಾಕಿದ್ದಾನೆ. ಸುಮಾರು ಅರ್ಧ ಗಂಟೆಗಳ ಕಾಲ ಹೆದ್ದಾರಿಯಲ್ಲಿ ಹೈಡ್ರಾಮ ನಡೆದ ಪರಿಣಾಮ ವಾಹನ ಸವಾರರು ಹಾಗೂ ಸ್ಥಳೀಯರು ಬೆಚ್ಚಿಬಿದ್ದರು.
ಕಲಹ ಬಿಡಿಸಲು ಮುಂದಾದ ಸ್ಥಳೀಯರ ಮೇಲೂ ನಾಗರಾಜ್ ಹಲ್ಲೆಗೆ ಮುಂದಾಗಿದ್ದಾನೆ ಎಂದು ತಿಳಿದುಬಂದಿದೆ. ಘಟನೆ ಕುರಿತು ಸ್ಥಳೀಯರು ಆಲ್ದೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ನಾಗರಾಜ್‌ನನ್ನು ವಶಕ್ಕೆ ಪಡೆದಿದ್ದಾರೆ.
ಘಟನೆಯಿಂದಾಗಿ ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆಗೆ ಕಾರಣವಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿತು.
ಮನೆಯಲ್ಲಿ ಸಾಂಬಾರು ಮಾಡದಿದ್ದಕ್ಕೆ ಹೆದ್ದಾರಿಯಲ್ಲಿ ದೊಣ್ಣೆ ಹಿಡಿದು ಬೀದಿ ರಂಪಾಟ ಮಾಡಿದ ಭೂಪ!
ಮೂಡಿಗೆರೆ-ತಾಲೂಕಿನ ಹಾಂದಿ ಸಮೀಪ ಕಡೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಮನೆಯಲ್ಲಿ ಸಾಂಬರ್ ಮಾಡಿಲ್ಲ ಎಂಬ ಕಾರಣಕ್ಕೆ ಕುಟುಂಬ ಕಲಹ ತಾರಕಕ್ಕೇರಿದ ಘಟನೆ ಹಾಂದಿ ಗ್ರಾಮದಲ್ಲಿ ನಡೆದಿದೆ.
ಚಿತ್ರದುರ್ಗ ಮೂಲದ ಕೂಲಿ ಕಾರ್ಮಿಕ ಕುಟುಂಬದಲ್ಲಿ ಘಟನೆ ಸಂಭಾವಿಸಿದ್ದು ಕಿಡಿಗೇಡಿ ನಾಗರಾಜ್ ಎಂಬಾತ ಮದ್ಯಪಾನ ಮಾಡಿ ಹೆದ್ದಾರಿಯಲ್ಲಿ ರಂಪಾಟ ಮಾಡಿದ ಭೂಪ ಎಂಬುದಾಗಿ ತಿಳಿದು ಬಂದಿದೆ.