Saturday, May 16, 2026
Homeಜಿಲ್ಲಾಸುದ್ದಿಎನ್.ಆರ್.ಪುರ: ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ರೇಷನ್ ಕಿಟ್ ವಿತರಣಾ ಕಾರ್ಯಕ್ರಮ!

ಎನ್.ಆರ್.ಪುರ: ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ರೇಷನ್ ಕಿಟ್ ವಿತರಣಾ ಕಾರ್ಯಕ್ರಮ!

ಚಿಕ್ಕಮಗಳೂರು ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ನರಸಿಂಹರಾಜುರಪುರ ತಾಲೂಕು ಮತ್ತಿಮರದ ಬಳಿ ಇರುವ ದಿವ್ಯ ಕಾರುಣ್ಯ ಆನಂದಾಶ್ರಮದಲ್ಲಿ ರೇಷನ್ ಕಿಟ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಹೌದು .. ಬುಧವಾರ ದಿವ್ಯ ಕಾರುಣ್ಯ ಆನಂದಾಶ್ರಮದಲ್ಲಿ ರೇಷನ್ ಕಿಟ್ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ವೇಳೆ ಮಾತನಾಡಿದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಜಿತ್ ಗೌಡ ದಂಡಿನಮಕ್ಕಿ ಅವರು, ಪ್ರತಿ ವರ್ಷದಂತೆ ಈ ವರ್ಷವೂ ಸಹ ನಮ್ಮ ನಾಯಕರು ಕೆಪಿಸಿಸಿ ಅಧ್ಯಕ್ಷರು ಹಾಗೂ ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರ ಹುಟ್ಟು ಹಬ್ಬವನ್ನು ಇಂದು ಆಶ್ರಮಕ್ಕೆ ರೇಷನ್ ಕಿಟ್ ಕೊಡುವುದರ ಮೂಲಕ ಆಚರಿಸುತ್ತಿದ್ದು, ಸನ್ಮಾನ್ಯ ಡಿ ಕೆ ಶಿವಕುಮಾರ್ ಅವರು ಹುಟ್ಟು ಸಂಘಟಕರಾಗಿ ಬೆಳೆದು ಬಂದು ಇಂದು ಉಪಮುಖ್ಯಮಂತ್ರಿಗಳಾಗಿದ್ದಾರೆ, ರಾಜ್ಯದಲ್ಲಿ ಪಕ್ಷವನ್ನು ಯಶಸ್ಸಿನತ್ತ ಮುನ್ನಡೆಸುತ್ತಿದ್ದು ರಾಜ್ಯದಲ್ಲಿ ಸರ್ಕಾರ ಬರಲು ಪ್ರಮುಖ ಕಾರಣಕರ್ತರಾಗಿದ್ದಾರೆ ಯುವಕರನ್ನು ಪಕ್ಷದ ಪಕ್ಷದಲ್ಲಿ ಬೆಳೆಸುವ ಗುಣ ಹೊಂದಿರುವ ನಮ್ಮ ನಾಯಕರದ ಡಿಕೆ ಶಿವಕುಮಾರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ತಿಳಿಸುತ್ತೇನೆ ಎಂದರು.


ಕೆಡಿಪಿ ಸದಸ್ಯರಾದ ಕೆ ವಿ ಸಾಜು ಅವರು ಮಾತನಾಡಿ ಯುವ ಕಾಂಗ್ರೆಸ್ ನಿಂದ ಇಂತಹ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿರುವುದು ನಿಜಕ್ಕೂ ಸಂತೋಷದ ವಿಷಯ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಂತಹ ಎಲ್ಲ ಯುವ ಕಾಂಗ್ರೆಸ್ನ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಧನ್ಯವಾದಗಳು ಎಂದು ತಿಳಿಸಿದರು.


ತಾಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಬಿನು ಜೋಸೆಫ್ ಅವರು ಮಾತನಾಡಿ ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಜೊತೆ ಜೋಡೆತ್ತಾಗಿ ಕೆಲಸ ಮಾಡುತ್ತಿದ್ದು ಅವರು ಸರ್ಕಾರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಅದರ ಜೊತೆ ಕೆಪಿಸಿಸಿ ಅಧ್ಯಕ್ಷರಾಗಿ ಉತ್ತಮ ಸಂಘಟನೆಯನ್ನು ಕೂಡ ಮಾಡುತ್ತಿದ್ದು ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಮಾತನಾಡಿದರು..

ಬಾಳೆಹೊನ್ನೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ರತನ್ ಗೌಡ ಅರಗಿ ಅವರು ಮಾತನಾಡಿ ಸನ್ಮಾನ್ಯ ಉಪಮುಖ್ಯಮಂತ್ರಿಗಳ ಹುಟ್ಟುಹಬ್ಬವನ್ನು ಪ್ರತಿವರ್ಷದಂತೆ ಈ ವರ್ಷದ ಸಹ ವಿಭಿನ್ನವಾಗಿ ಆಚರಿಸಿದ ಯಾವುದೇ ರೀತಿಯ ಫ್ಲೆಕ್ಸ್ ಹಾಕದೆ ದುಂದು ವೆಚ್ಚ ಮಾಡದೆ ಹಸಿದವರಿಗೆ ಹಾಗೂ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಅವರ ಅವರಿಗೆ ಒಂದು ತುತ್ತು ಅನ್ನವನ್ನು ನೀಡುವ ದೃಷ್ಟಿಯಿಂದ ನಮ್ಮ ಕೈಲಾದ ಈ ಚಿಕ್ಕ ಸಹಾಯವನ್ನು ಮಾಡುತ್ತಿದ್ದು ಇದರಂತೆ ಎಲ್ಲರೂ ಕೂಡ ತಮ್ಮ ಹುಟ್ಟುಹಬ್ಬವನ್ನು ದುಂದು ವೆಚ್ಚ ಮಾಡಿ ವ್ಯರ್ಥ ಮಾಡದೆ ಇದೇ ರೀತಿಯಲ್ಲಿ ಅನಾಥರಿಗೆ ಬಡವರಿಗೆ ಸಹಾಯ ಮಾಡಬೇಕೆಂದು ನನ್ನ ಕಳಕಳಿಯ ಮನವಿ ಎಂದು ಮಾತನಾಡಿದರು.


ಈ ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಮೊಹಮ್ಮದ್ ತಯೀಬ್, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಮಂಜೇಶ್ ಬೀಳುವ ಮತ್ತು ಅಭಿಲಾಶ್ ಎಂಪಿ, ತಾಲೂಕು ಕಾಂಗ್ರೆಸ್ ಕೊಪ್ಪ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷರಾದ ವಿಜಯಾನಂದ, ಪಕ್ಷದ ಉಪಾಧ್ಯಕ್ಷರಾದ ಬೆನ್ನಿ, ಯುವ ಕಾಂಗ್ರೆಸ್ ನರಾಪುರ ಪಟ್ಟಣ ಘಟಕದ ಅಧ್ಯಕ್ಷರಾದ ವಿಜಯ್, ಗ್ಯಾರೆಂಟಿ ಸಮತಿ ಸದಸ್ಯರಾದ ರಘು ಇಂದಿರಾನಗರ, ತಾಲೂಕು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಮೀನು ಕ್ಯಾಂಪ್ ಶಿವು, ಯುವ ಕಾಂಗ್ರೆಸ್ ಮುಖಂಡರಾದ ಮನು ಕೊಗೊಳ್ಳಿ ದಾವಣ ಸುಧಾಕರ್, ಹಾಗೂ ಹಲವಾರು ಯುವ ಕಾಂಗ್ರೆಸ್ ನ ಸ್ನೇಹಿತರು ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!