ಮೂಡಿಗೆರೆ: ಪಟ್ಟಣದ ಪ್ರಮುಖ ರಸ್ತೆಗಳ ಅಕ್ಕ ಪಕ್ಕದಲ್ಲಿ ಕಸದ ರಾಶಿ ಹೆಚ್ಚಾಗಿದ್ದು ತೆರವು ಗೊಳಿಸುವಂತೆ ವಿಶ್ವ ಹಿಂದೂ ಪರಿಷತ್ ಭಜರಂಗದಳ ಸಂಘಟನೆಯ ಕಾರ್ಯಕರ್ತರು ತಾಲ್ಲೂಕು ದಂಡಾಧಿಕಾರಿ ಶ್ರೀಮತಿ ಆಶ್ವಿನಿ ಅವರಿಗೆ ಮನವಿ ಸಲ್ಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಅಧ್ಯಕ್ಷ ಸುಧೇವ್ ಗೌಡ ಗುತ್ತಿ ನಗರವನ್ನು ಹೊಂದಿಕೊಂಡಿರುವ ಕೊಲ್ಲಿಬೈಲು, ಹಾಗೂ ಬಿದರಹಳ್ಳಿ ಹಾಗೂ ವಿವಿಧ ಪಂಚಾಯತ್ ಪ್ರಮುಖ ರಸ್ತೆಯ ಎರಡು ಭಾಗಗಳಲ್ಲಿ ಕಸದ ರಾಶಿ ಹೆಚ್ಚಿದ್ದು ದುರ್ವಸನೆ ಬಿರುತ್ತಿದೆ. ಇದರಿಂದ ಪರಿಸರ ಹಾಳು ಆಗುತ್ತಿದ್ದೂ ಜೊತೆಗೆ ಜಾನುವಾರುಗಳು ಪ್ಲಾಸ್ಟಿಕ್ ತ್ಯಾಜ್ಯ ತಿಂದು ಸಾಯುವ ಪರಿಸ್ಥಿತಿ ನಿರ್ಮಾಣವಾಗಿದೆ ವಾಹನ ಸವರಾರು ಮತ್ತು ವಾಯು ವಿಹಾರಕ್ಕೆ ತೆರಳುವ ಸಾರ್ವಜನಿಕ ಬಂದುಗಳು ಮೂಗು ಮುಚ್ಚಿ ತಿರುಗಾಡುವ ಪರಿಸ್ಥಿತಿ ನಿರ್ಮಾಣ ವಾಗಿದ್ದು ಅಧಿಕಾರಿಗಳು ಕಂಡರೂ ಕಾಣದಂತೆ ನಿರ್ಲಕ್ಷ ವಹಿಸುತ್ತಿರುವುದು ಎಷ್ಟು ಸರಿ ಎಂದರು.
ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭವಾಗಲಿದ್ದು ಕೊಳಕು ಕಸ ನದಿಗೆ ಸೇರಿ ಸಾಂಕ್ರಾಮಿಕ ರೋಗಗಳ ಭೀತಿ ಉಂಟಾಗಿದೆ ಕೂಡಲೆ ಅಧಿಕಾರಿಗಳು ಎಚ್ಚೆತ್ತು ಕಸ ವಿಲೇವಾರಿ ಮಾಡುವಂತೆ ಆಗ್ರಹಿಸಿದರು
ಒಂದು ವೇಳೆ ಕಸ ವಿಲೇವಾರಿ ಮಾಡದೆ ಇದ್ದಲ್ಲಿ ಕಸವನ್ನು ಪ್ರತಿ ಪಂಚಾಯಿತಿ ಆವರಣಕ್ಕೆ ತಂದು ಎಸೆಯುವುದರ ಮೂಲಕ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಉಪಾಧ್ಯಕ್ಷ ಅಭಿಲಾಷ್ ಉಗ್ಗೇಹಳ್ಳಿ, ವಿಹಿಂಪ ತಾಲ್ಲೂಕು ಕಾರ್ಯದರ್ಶಿ ಪ್ರಶಾಂತ್ ಹಂಡುಗುಳಿ, ಭಜರಂಗದಳ ತಾಲ್ಲೂಕು ಸಂಯೋಜಕ್ ಸಂತೋಷ್ ಶುಭನಗರ , ರಾಘವೇಂದ್ರ ಜನ್ನಾಪುರ, ಯತೀಶ್ ಮೂಡಿಗೆರೆ, ನಾಗೇಶ್ ಮೇಗಲಪೇಟೆ ಸೇರಿದಂತೆ ಆನೇಕ ಕಾರ್ಯಕರ್ತರು ಇದ್ದರು.
ವರದಿ:ಪುನೀತ್ ಕಡಿದಾಳು
9483811948
