Tuesday, July 14, 2026
Homeಜಿಲ್ಲಾಸುದ್ದಿಶಿಕ್ಷಕರ ಸಂಘದ ನೂತನ ಸಾರಥಿಯಾಗಿ ದಾರದಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕ ಮಂಜಪ್ಪ ಹೆಚ್ ಅವಿರೋಧ ಆಯ್ಕೆ

ಶಿಕ್ಷಕರ ಸಂಘದ ನೂತನ ಸಾರಥಿಯಾಗಿ ದಾರದಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕ ಮಂಜಪ್ಪ ಹೆಚ್ ಅವಿರೋಧ ಆಯ್ಕೆ

Telegram Group
Join Now

ಮೂಡಿಗೆರೆ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮೂಡಿಗೆರೆ ತಾಲ್ಲೂಕು ಅಧ್ಯಕ್ಷರಾಗಿ ಶ್ರೀಯುತ ಎಚ್, ಮಂಜಪ್ಪ ಅವರು ಚುಕ್ಕಾಣಿ ಹಿಡಿದಿದ್ದಾರೆ

ಶಿಕ್ಷಕರ ಸಂಘದ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ತಿಂಗಳ ಹಿಂದೆ ಚುನಾವಣೆ ಮೂಲಕ ಆಯ್ಕೆ ಮಾಡಿದ್ದೂ,ಒಟ್ಟು ಏಳು ನಿರ್ದೇಶಕರು ಆಯ್ಕೆಯಾಗಿದ್ದರು.

ಶಿಕ್ಷಕರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಎಚ್, ಮಂಜಪ್ಪ, ಉಪಾಧ್ಯಕ್ಷರ ಸ್ಥಾನಕ್ಕೆ ಹೆಚ್. ಪಿ. ಎಸ್. ಹಳಿಕೆ ಶಾಲೆಯ ಹೆಚ್,ಆರ್, ಮಂಜ ನಾಯಕ್,ಹಾಗೂ ಹೆಚ್, ಪಿ, ಎಸ್, ಅಂಗಡಿ ಶಾಲೆಯ ಶಿಕ್ಷಕ ನಿರಂಜನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಎಲ್, ಪಿ, ಎಸ್, ಮರಬೈಲ್ ಶಾಲೆಯ ಶಿಕ್ಷಕ ಬಿ, ಎಲ್, ಗಂಗಾಧರಪ್ಪ, ಖಜಾಂಚಿ ಸ್ಥಾನಕ್ಕೆ ಎಲ್, ಪಿ, ಎಸ್, ಬಣಕಲ್ ವಿಲೇಜ್ ಶಾಲೆಯ ಶಿಕ್ಷಕ ಎಂ, ಪೂರ್ಣೇಶ್ ಸಂಘಟನಾ ಕಾರ್ಯದರ್ಶಿ ಸ್ಥಾನಕ್ಕೆ ಲೋಕುವಳ್ಳಿ ಶಾಲೆಯ ನವೀನ್ ಬಿ, ಆರ್ ಮತ್ತು ಬಿಳ್ಳೂರು ಶಾಲಾ ಶಿಕ್ಷಕಿ ಶ್ರೀಮತಿ ವೀಣಾ ಅವರು ನಾಮಪತ್ರ ಸಲ್ಲಿಸಿದ್ದು, ಇವರುಗಳ ವಿರುದ್ಧವಾಗಿ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾ ಅಧಿಕಾರಿ ಶ್ರೀಯುತ ರಮೇಶ್ ಅವರು ಜವಾಬ್ದಾರಿ ಘೋಷಿಸಿದ್ದಾರೆ.

ಈ ಕುರಿತು ಪಬ್ಲಿಕ್ ಇಂಪ್ಯಾಕ್ಟ್ ಪ್ರತಿಕ್ರಿಯಿಸಿದ ಶಿಕ್ಷಕರ ಸಂಘದ ನೂತನ ಅಧ್ಯಕ್ಷ ಎಚ್ ಮಂಜಪ್ಪ ಅವರು ಶಿಕ್ಷಣವೂ ರಾಷ್ಟ್ರದ ಭದ್ರ ಬುನಾದಿಯಾಗಿದ್ದು ಇಂತಹ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲು ಹೆಮ್ಮೆ ಪಡುವುದಾಗಿ ತಿಳಿಸುತ್ತ ಮಾತನ್ನು ಆರಂಭಿಸಿದ ಅವರು ಓರ್ವ ಹಿರಿಯ ಶಿಕ್ಷಕನಾಗಿ ತಾಲೂಕಿನ ವಿವಿಧ ಶಾಲೆಗಳಲ್ಲಿ ಕಾರ್ಯ ನಿರ್ವಹಿಸಿದ್ದುಸಂಘಟನೆಯ ನಿರ್ದೇಶಕನಾಗಿಯು ಕಾರ್ಯ ನಿರ್ವಹಿಸಿ ಶಿಕ್ಷಕರ ಕಷ್ಟ ಸುಖಗಳನ್ನು ಆರಿತಿದ್ದು ಅಧಿಕಾರ ಎಂದು ಭಾವಿಸದೆ ಎಲ್ಲಾ ಶಿಕ್ಷಕರ ಸಮಸ್ಸೆಗಳಿಗೆ ಸಂಘದ ಸಾಮಾನ್ಯ ಸದಸ್ಯನ್ನಾಗಿ ಕಾರ್ಯ ನಿರ್ವಹಿಸುವುದಾಗಿ ತಿಳಿಸಿದರು,

ನೂತನ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಸ್ಥಾನಕ್ಕೆ ಎಚ್, ಮಂಜಪ್ಪ, ಉಪಾಧ್ಯಕ್ಷರಾಗಿ ಹೆಚ್,ಆರ್,ಮಂಜನಾಯಕ್,ಹಾಗೂ ಶ್ರೀಮತಿ ನಿರಂಜನ ಪ್ರಧಾನ ಕಾರ್ಯದರ್ಶಿಗಳಾಗಿ ಬಿ, ಎಲ್, ಗಂಗಾಧರಪ್ಪ, ಖಜಾಂಚಿಯಾಗಿ ಎಂ, ಪೂರ್ಣೇಶ್ ಸಂಘಟಾನ ಕಾರ್ಯದರ್ಶಿಗಳಾಗಿ ಶ್ರೀಮತಿ ವೀಣಾ ಹಾಗೂ ನವೀನ್ ಬಿ, ಆರ್ ಇವರುಗಳು ಜವಾಬ್ದಾರಿ ವಹಿಸಿಕೊಂಡಿದ್ದು ಶಿಕ್ಷಕರ ಸಂಘದ ಮುಂದಿನ ಬೆಳವಣಿಗೆ ಇವರುಗಳ ಹೆಗಲಿಗಿದೆ

ವರದಿ:ಪುನೀತ್ ಕಡಿದಾಳು

9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments