ಚಿಕ್ಕಮಗಳೂರು : ರಾಜ್ಯ ಸರ್ಕಾರ ಶಾಲಾ-ಕಾಲೇಜಿನಲ್ಲಿ ಹಿಜಾಬ್ಗೆ ಅನುಮತಿ ಕೊಟ್ಟಿದ್ದಕ್ಕೆ ಪ್ರಮೋದ್ ಮುತಾಲಿಕ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹೌದು .. ಚಿಕ್ಕಮಗಳೂರು ನಗರದಲ್ಲಿ ಮಾತನಾಡಿದ ಅವರು, ಹಿಜಾಬ್ ಧಾರ್ಮಿಕ ಭಾಗ ಅಲ್ಲ ಅಂತ ಹೈಕೋರ್ಟ್ ಸ್ಪಷ್ಟವಾಗಿ ಹೇಳಿತ್ತು. ಕುರಾನ್ ನಲ್ಲಿ ಎಲ್ಲೂ ಉಲ್ಲೇಖ ಇಲ್ಲ, ಎಲ್ಲಿ ಬೇಕಾದ್ರು ಹಾಕಿ, ಶಾಲಾ-ಕಾಲೇಜಿನಲ್ಲಿ ಯೂನಿಫಾರಂ ಪಾಲಿಸಿ ಎಂದಿದೆ. ಅದರ ವಿರುದ್ಧ ಸುಪ್ರೀಂಕೋರ್ಟ್ ಗೆ ಹೋಗಿದ್ದಾರೆ, ಸುಪ್ರೀಂ ಕೋರ್ಟಿನಲ್ಲಿ ತೀರ್ಪು ಬಂದಿಲ್ಲ ಈ ಮಹಾಶಯ ಮಧು ಬಂಗಾರಪ್ಪ, ಹಿಜಾಬ್ ಹಾಕಬಹುದು ಅಂತಾರೆ ಎಂದು ಕಿಡಿಕಾರಿದ್ದಾರೆ.
ದಾವಣಗೆರೆ ಎಲೆಕ್ಷನ್ ಬಳಿಕ ರಾಜ್ಯದಲ್ಲಿ ಮುಸ್ಲಿಮರು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಅದನ್ನ ತಣ್ಣಗಾಗಿಸಲು ಈ ರೀತಿಯ ಒಂದೊಂದು ಕೆಲಸ ಮಾಡ್ತಿದ್ದಾರೆ, ಆಳಂದ ಕೇಸ್ ಕೂಡ ಅದೇ ರೀತಿ 600 ಕೋಟಿ ಮುಸ್ಲಿಂ ಅಭಿವೃದ್ಧಿಗೆ ಹಣ ಇಟ್ಟದ್ದು, ಹಿಜಬ್ ಕೂಡ ಇದರ ಭಾಗವೇ ನಿಮಗೆ ಮಾನ-ಮರ್ಯಾದೆ ಇದೆಯಾ, ಯೂನಿಫಾರಂ ಅಂದ್ರೆ ಸಮವಸ್ತ್ರ, ಸಮಾನತೆ ಏಕತೆ ಇಲ್ಲಿ ಬೇಧ-ಭಾವ-ಮೇಲು-ಕೀಳು-ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಇಲ್ಲ ಉಚ್ಛ-ನೀಚ ಯಾವುದೂ ಇಲ್ಲ, ಸಮವಸ್ತ್ರ ಪದದ ಅರ್ಥ ಅರ್ಥವಾಗ್ತಿಲ್ವಾ
ಶಿವದಾರ-ಜನಿವಾರ-ರುದ್ರಾಕ್ಷಿ ಹಾಕಬಹುದು ಅಂತೀರಾ ನೀವು ಯಾರು ಹೇಳೋಕೆ, ಸಾವಿರಾರು ವರ್ಷಗಳಿಂದ ಶಾಸ್ತ್ರ ಬದ್ಧ ಸಂಪ್ರದಾಯವಿದೆ ಇದು ದಾರ ಅಲ್ಲ, ಧಾರ್ಮಿಕ-ಶಾಸ್ತ್ರದ ವಿಧಿ-ವಿಧಾನ ಆಗುತ್ತೆ, ಹೊರಗೆ ಕಾಣಲ್ಲ ಹೊರಗೆ ಕಾಣುವ ಹಿಜಾಬ್ ಈಕೆ ಮುಸ್ಲಿಂ ಅಂತ ಗೊತ್ತಾಗುತ್ತೆಇದು ಗಲಾಭೆಗೆ ಕಾರಣವಾಗುತ್ತೆ, ಜೂನ್ 1 ರಿಂದ ಎಲ್ಲಾ ಶಾಲಾ-ಕಾಲೇಜಿನಲ್ಲಿ ಕೇಸರಿ ಶಾಲು ಹಂಚಲು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.
