Wednesday, July 15, 2026
Homeಕ್ರೈಮ್ಚಿಕ್ಕಮಗಳೂರು: ನೇಣು ಬಿಗಿದುಕೊಂಡು ಅವಿವಾಹಿತ ಯುವಕ ಆತ್ಮಹತ್ಯೆ: ಕಾರಣ ನಿಗೂಢ!

ಚಿಕ್ಕಮಗಳೂರು: ನೇಣು ಬಿಗಿದುಕೊಂಡು ಅವಿವಾಹಿತ ಯುವಕ ಆತ್ಮಹತ್ಯೆ: ಕಾರಣ ನಿಗೂಢ!

Telegram Group
Join Now

ಚಿಕ್ಕಮಗಳೂರು: ನಗರದ ಶಂಕರಪುರ ಬಡಾವಣೆಯಲ್ಲಿ 25 ವರ್ಷದ ಅವಿವಾಹಿತ ಯುವಕನೊಬ್ಬ ತನ್ನ ಮನೆಯಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಗನ ಸಾವಿನ ಹಿಂದೆ ತೀವ್ರ ಅನುಮಾನವಿದೆ ಎಂದು ಯುವಕನ ತಾಯಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮೃತ ಯುವಕನನ್ನು ಮೂರ್ತಿ ಎಲ್. (25) ಎಂದು ಗುರುತಿಸಲಾಗಿದೆ. ಈತ ಬಾರ್ ಬೆಂಡಿಂಗ್ ಕೆಲಸ ಮಾಡಿಕೊಂಡಿದ್ದನು. ಆತನ ಮನೆಯ ಸಮೀಪದ ವಿವಾಹಿತ ಮಹಿಳೆಯೊಂದಿಗೆ ಕಳೆದ ಒಂದು ವರ್ಷದಿಂದ ಕಳ್ಳಸಂಬಂಧವಿತ್ತು ಎನ್ನಲಾಗಿದೆ. ಈ ಸಂಬಂಧದ ಬಗ್ಗೆ ತಾಯಿ ಹಾಗೂ ಸಂಬಂಧಿಕರು ಇಬ್ಬರಿಗೂ ಬುದ್ಧಿವಾದ ಹೇಳಿದ್ದರು.

ಅಲ್ಲದೆ ಈ ಹಿಂದೆ ಮಹಿಳಾ ಪೊಲೀಸ್ ಠಾಣೆಗೂ ದೂರು ನೀಡಿ ಪೊಲೀಸರಿಂದಲೂ ಎಚ್ಚರಿಕೆ ಕೊಡಿಸಲಾಗಿತ್ತು. ಆದರೂ ಸಹಾ ಆಕೆ ಬೇರೆ ಬೇರೆ ಮೊಬೈಲ್ ನಂಬ‌ರ್ಗಳಿಂದ ಕರೆ ಮಾಡಿ ತನ್ನ ಮನೆಗೆ ಕರೆಸಿಕೊಳ್ಳುತ್ತಿದ್ದಳು. ಇದರಿಂದಾಗಿ ಮೂರ್ತಿ ಆಕೆಯ ವ್ಯಾಮೋಹಕ್ಕೆ ಬಿದ್ದಿದ್ದನು.

ಏಕಾಏಕಿ ಬೇಸರಗೊಂಡು ಬುಧವಾರ ರಾತ್ರಿ ಮನೆಯ ಚಿಲಕ ಹಾಕಿಕೊಂಡು ಮೂರ್ತಿ ಆತ್ಮಹತ್ಯೆ ಮಾಡಿಕೊಂಡಿದ್ದು. ತಾಯಿ ಮನೆಗೆ ಬಂದು ಬಾಗಿಲಿನ ಸಂದಿನಿಂದ ಇಣುಕಿ ನೋಡಿದಾಗ ಮೂರ್ತಿಯ ಕಾಲುಗಳು ನೇತಾಡುತ್ತಿರುವುದು ಕಂಡಿದೆ. ತಕ್ಷಣವೇ ಅಕ್ಕನ ಮಕ್ಕಳ ಸಹಾಯದಿಂದ ಬಾಗಿಲು ಒಡೆದು ಸೀರೆಯನ್ನು ಕೊಯ್ದು ಆಸ್ಪತ್ರೆಗೆ ಕರೆದೊಯ್ದರೂ, ವೈದ್ಯರು ಆತ ಈಗಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಮಗನ ಆತ್ಮಹತ್ಯೆಯ ನಿಖರ ಕಾರಣ ತಿಳಿಯದ ಹಿನ್ನೆಲೆಯಲ್ಲಿ ತಾಯಿ ಗುರಮ್ಮ ನೀಡಿದ ದೂರಿನ ಮೇರೆಗೆ ನಗರ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments