ಕೊಪ್ಪ: ಅಧಿಕಾರ ಹಸ್ತಾಂತರ ಮತ್ತು ಸಿಎಂ ಬದಲಾವಣೆ ವಿಚಾರವಾಗಿ ಹಲವು ತಿಂಗಳುಗಳಿಂದ ಚರ್ಚೆಗಳು ನಡೆಯುತ್ತಿರುವಾಗ ಬಿಜೆಪಿಯಾ ಹಲವು ಮುಖಂಡರುಗಳ ಆಸೆ ಏನಾಗಿತ್ತು ಅಂದರೆ ಸಿದ್ದರಾಮಯ್ಯ ನವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದರೆ ಕಾಂಗ್ರೆಸ್ ಎರಡು ಭಾಗವಾಗುತ್ತೆ ಸರ್ಕಾರನೂ ಬಿದ್ದು ಹೋಗುತ್ತೆ ಎಂಬ ಆಸೆಗಣ್ಣಿನಿಂದ ನೋಡುತ್ತಾ ಕುಳಿತವರು ಒಂದೆಡೆ , ಮತ್ತೊಂದು ಕಡೆ ಡಿ ಕೆ ಶಿವಕುಮಾರ್ ರವರಿಗೆ ಮುಖ್ಯಮಂತ್ರಿ ಸ್ಥಾನ ಸಿಗದೇ ಇದ್ದರೆ ಬೆಂಬಲಿಗರೊಂದಿಗೆ ಪಕ್ಷ ಬಿಟ್ಟು ಕಾಂಗ್ರೆಸ್ ನುಚ್ಚು ನೂರು ಆಗುತ್ತೆ ಎಂಬ ನಂಬಿಕೆಯಾ ಎಲ್ಲಾ ಆಸೆಗಳಿಗೂ ತಣ್ಣೀರು ಎರಚಿದಂತಾಗಿದೆ ಯಾಕೆಂದರೆ ಹಿಂದೆ ಎಂದೂ ನಡೆಯದ ರೀತಿಯಲ್ಲಿ ಇವತ್ತು ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಮತ್ತು ರಾಜ್ಯ ಕಾಂಗ್ರೆಸ್ ಮುಖಂಡರು ಮಾಧ್ಯಮದ ಎದುರು ತುಂಬಾ ಗೌರವಯುತವಾಗಿ ಒಗ್ಗಟ್ಟನ್ನು ಪ್ರದರ್ಶಿಸಿ ಮಾದರಿಯಾದರು.
ಸಿದ್ದರಾಮಯ್ಯ ಈ ರಾಜ್ಯದ ಒಬ್ಬ ಹಿರಿಯ ಮುತ್ಸದ್ದಿ ರಾಜಕಾರಣಿ ವಿಧಾನ ಸಭೆಯಲ್ಲಿ ಕಳೆದ ಹಲವು ವರ್ಷಗಳಿಂದ ಬಹಳ ಉತ್ತಮವಾಗಿ ಮಾತನಾಡಬಲ್ಲ ತಿಳುವಳಿಕೆ ಇದ್ದ ನಾಯಕರೆಂದರೆ ಸಿದ್ದರಾಮಯ್ಯ ಮಾತ್ರ ಎಂಬುದರಲ್ಲಿ ಸಂದೇಹವಿಲ್ಲ
ಬಡ ಕುಟುಂಬದಿಂದ ಬಂದ ಸಿದ್ದರಾಮಯ್ಯ ರಾಜ್ಯ ರಾಜಕಾರದಲ್ಲಿ ಈ ಮಟ್ಟಕ್ಕೆ ಬೆಳೆದದ್ದು ಬಾರಿ ದೊಡ್ಡ ಸಾಹಸವೇ ಸರಿ,
8 ವರ್ಷ ಮುಖ್ಯಮಂತ್ರಿಯಾಗಿ ದಾಖಲೆ , 17 ಬಾರಿ ಬಜೆಟ್ ದಾಖಲೆ , ಎರಡು ಬಾರಿ ವಿರೋಧಪಕ್ಷದ ನಾಯಕ ಎಲ್ಲವೂ ಕಾಂಗ್ರೆಸ್ ನೀಡಿದೆ ಜೊತೆಗೆ ಅವರ ವರ್ಚಸ್ಸು, ಹೋರಾಟ, ತಿಳುವಳಿಕೆ ಸಹ ಕಾಂಗ್ರೆಸ್ಗೆ ಸಹಕಾರಿಯಾಗಿದೆ ಈಗ ಮುಖ್ಯ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬೇರೆಯವರಿಗೆ ಅವಕಾಶ ಮಾಡಿ ಕೊಡುವುದು ಸರಿಯಾದ ನಿರ್ಧಾರವೇ ಆಗಿದೆ ರಾಷ್ಟ್ರ ರಾಜಕಾರಣದಲ್ಲಿ ರಾಜ್ಯದ ಧ್ವನಿಯಾಗಲಿ ಎಂಬುವುದು ನಮ್ಮೆಲ್ಲರ ಬಯಕೆ
ಕಾಂಗ್ರೆಸ್ ಬಹಳ ಹೀನಾಯ ಸ್ಥಿತಿಯಲ್ಲಿ ಇದ್ದಾಗ ಡಿ ಕೆ ಶಿವಕುಮಾರ್ ರವರು ಕೆ ಪಿ ಸಿ ಸಿ ಅಧ್ಯಕ್ಷಗಿರಿ ವಹಿಸಿಕೊಂಡು ಬಹಳ ಶ್ರಮ ಪಟ್ಟು ಪಕ್ಷ ಕಟ್ಟಿ ಬೆಳೆಸಿದ್ದಾರೆ ಎಂತಹ ಸಂಧಿಗ್ದ ಪರಿಸ್ಥಿಯಲ್ಲೂ ಪಕ್ಷ ಬಿಡದೆ ಪಕ್ಷಕ್ಕಾಗಿ ದುಡಿದಿದ್ದಾರೆ ಹಾಗಾಗಿ ಅವರು ಸಿ ಎಂ ಸ್ಥಾನ ಕೇಳುವುದರಲ್ಲಿ… ಆಗುವುದರಲ್ಲಿ.. ತಪ್ಪೇನಿಲ್ಲ ಆಗಲೇ ಬೇಕು ಆದರೆ ಬಹಳ ಅನುಭವ ಇರುವ ಸಿದ್ದರಾಮಯ್ಯ ನವರ ಮಾರ್ಗದರ್ಶನ ಪಡೆದು ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರವನ್ನು ಮುನ್ನಡೆಸಿದರೆ ಪಕ್ಷಕ್ಕೂ, ಸರ್ಕಾರಕ್ಕೂ, ರಾಜ್ಯದ ಅಭಿರುದ್ದಿಗೂ ಒಳ್ಳೆಯದು ಮತ್ತು ಡಿ ಕೆ ಶಿವಕುಮಾರ್ ರವರ ವರ್ಚಸ್ಸಿಗೂ ಇನ್ನಷ್ಟು ಮೆರಗು ಕೊಡುವುದರಲ್ಲಿ ಸಂದೇಹವಿಲ್ಲ ಕಾಂಗ್ರೆಸ್ ನ ಎಲ್ಲಾ ಮುಖಂಡರು ಇವತ್ತು ಮುಂಜಾನೆಯಿಂದ ತುಂಬಾ ಎತ್ತರದಲ್ಲಿ ನಡೆದುಕೊಂಡಿದ್ದೀರಿ ಮುಂದೆಯೂ ಹೀಗೆ ನಡೆದು ಕೊಂಡರೆ ವಿರೋಧಪಕ್ಷಗಳನ್ನು ಎದುರಿಸಲು ಬಾರಿ ದೊಡ್ಡ ಶಕ್ತಿ ಕಾಂಗ್ರೆಸ್ ಗೆ ಬರುತ್ತದೆ
