ಕೊಪ್ಪ: ಕಾಫಿನಾಡಿನ ಹಲವೆಡೆ ಅಡಿಕೆ ತೋಟಗಳಲ್ಲಿ ಎಲೆಚುಕ್ಕಿ ಹಾಗೂ ಹಳದಿ ರೋಗ ಎಲ್ಲಡಡೆ ಹರಡುತ್ತಿದ್ದು ಮಲೆನಾಡು ಭಾಗದಲ್ಲಿ ಈ ರೋಗ ಹೆಚ್ಚಾಗುತ್ತಿದ್ದರಿಂದ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಹೌದು ಕೊಪ್ಪದಲ್ಲಿ ಪ್ರತಿಕಾಗೋಷ್ಠಿ ನಡೆಸಿದ ಅವರು, ಅಡಿಕೆಗೆ ಎಲೆಚುಕ್ಕಿ, ಹಳದಿ ರೋಗ ಕಾಣಿಸಿಕೊಳ್ಳುತ್ತಿದ್ದು ಸರ್ಕಾರದಿಂದ ಯಾವುದೇ ಸಮರ್ಪಕ ಕ್ರಮ ಜಾರಿಯಾಗಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಹಾಗೆ ಸರ್ಕಾರದಿಂದ ಯಾವುದೇ ಸಮರ್ಪಕ ಕ್ರಮ ಜಾರಿಯಾಗಿಲ್ಲ ಈ ಮಧ್ಯೆ ಬೆಳೆ ನಷ್ಟ ಅನುಭವಿಸಿದ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಲಿ ಕೃಷಿ ಸಾಲಕ್ಕೆ ಬ್ಯಾಂಕ್ಗಳಲ್ಲಿ ಸಿಬಿಲ್ ಸ್ಕೋರ್ ಆಧಾರಿತ ನಿರ್ಬಂಧಕ್ಕೆ ರೈತರ ಆಕ್ರೋಶ ಹೆಚ್ಚಾಗಿದ್ದು ಹವಾಮಾನ ವೈಪರೀತ್ಯದಿಂದ ರೈತರಿಗೆ ಸಕಾಲಕ್ಕೆ ಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ ರೈತರಿಗೆ ಸಿಬಿಲ್ ಸ್ಕೋರ್ ನಿಯಮ ರದ್ದುಪಡಿಸುವಂತೆ ಆಗ್ರಹಿಸಿದರು.
ಸಾಲ ವಸೂಲಾತಿಗೆ ಜಾರಿಯಲ್ಲಿರುವ ಸರ್ಫೇಸಿ ಕಾಯ್ದೆ ತಕ್ಷಣ ರದ್ದುಪಡಿಸಬೇಕು ಹಾಗೆ ರೈತರಿಗೆ ಕೃಷಿ ಭೂಮಿಯ ಹಕ್ಕು ಪತ್ರ ನೀಡುವಂತೆ ಒತ್ತಾಯಿಸಿದರು.
ವರದಿ: ಶಶಿ ಬೆತ್ತದಕೊಳಲು!
