ಶೃಂಗೇರಿ: ಕ್ಷೇತ್ರದ ತಡೆಗೋಡೆ ನಿರ್ಮಾಣ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವ ಬಿಜೆಪಿಯ ನಡೆ ಹಾಸ್ಯಾಸ್ಪದವಾಗಿದೆ ಎಂದು ನರಸಿಂಹರಾಜಪುರ ಭೂ ಮತ್ತು ನ್ಯಾಯ ಮಂಡಳಿಯ ನಾಮನಿರ್ದೇಶಿತ ಸದಸ್ಯ ಕಾರ್ತಿಕ್ ಕಾರ್ ಗದ್ದೆ ಆರೋಪಿಸಿದ್ದಾರೆ.
ಕಳೆದ ಎಂಟು ವರ್ಷಗಳಲ್ಲಿ ಟಿ ಡಿ ರಾಜೇಗೌಡರು ಮಾಡಿರುವ ಅಭಿವೃದ್ಧಿ ಕಣ್ಮುಂದೆ ಇದೆ. ಜಯಪುರ ರಸ್ತೆ ಅಗಲೀಕರಣದ ಬಗ್ಗೆ ಮಾತನಾಡಿ,ನಾಡಕಛೇರಿಗಳ ಬಗ್ಗೆ ಮಾತನಾಡಿ ಬಾಳೆಹೊನ್ನೂರು ಬಸ್ ನಿಲ್ದಾಣದ ಬಗ್ಗೆ ಮಾತಾಡಿ, ರಾಜೇಗೌಡರು ಮಾಡಿರುವ ಅಭಿವೃದ್ಧಿಯ ವಿಚಾರದಲ್ಲಿ ಮಾತನಾಡದೆ ಇರುವವರು ಈ ರೀತಿ ತಡೆಗೋಡೆಯ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವುದು ಸಮಂಜಸವಲ್ಲ ಕಳೆದ 15 ವರ್ಷಗಳ ಕಾಲ ಬಿಜೆಪಿ ಶಾಸಕರು ಅಧಿಕಾರದಲ್ಲಿ ಇದ್ದಾಗ ಶೃಂಗೇರಿ ಕ್ಷೇತ್ರದ ಅಭಿವೃದ್ಧಿ ಎಷ್ಟರ ಮಟ್ಟಿಗೆ ಆಗಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ.

ಹಾಗೆ ಶೃಂಗೇರಿ ಕ್ಷೇತ್ರದ ಅಭಿವೃದ್ಧಿಯಲ್ಲಿ ರಾಜಿಯಾಗದೆ ಶಾಸಕರು ಇಂದು ಸೇವೆಯ ಜೊತೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವೈಯಕ್ತಿಕ ನಿಂದನೆಗಳನ್ನು ಬಿಟ್ಟು ಅಭಿವೃದ್ಧಿಗೆ ಕೈ ಜೋಡಿಸಿ. ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಿ ಇಲ್ಲವಾದರೆ ಮುಂದಿನ ಚುನಾವಣೆ ಯಲ್ಲಿ ಜನರೆ ಪಾಠ ಕಲಿಸಲಿದ್ದಾರೆ.
ಇಂದು ಬಿಜೆಪಿಯವರ ವೈಫಲ್ಯಗಳು ದೇಶದ ಜನತೆಗೆ ಗೊತ್ತಾಗಿದೆ. ಬೆಲೆ ಏರಿಕೆ, ನೀಟ್ ಪರೀಕ್ಷೆಗಳ ಹಗರಣಗಳು,ರಸಗೊಬ್ಬರಗಳ ಬೆಲೆ ಏರಿಕೆ, ಬಂಗಾರದ ಬೆಲೆ ಏರಿಕೆಯಾಗಿದ್ದು ಇದರ ಬಗ್ಗೆ ಮಾತಾಡಲಿ ಆ ನಂತರ ಶೃಂಗೇರಿ ಕ್ಷೇತ್ರದ ಅಭಿವೃದ್ಧಿಯ ಕಡೆ ಬೆರಳು ಮಾಡಿ ತೋರಿಸಲಿ ಎಂದಿದ್ದಾರೆ.
