Friday, July 17, 2026
Homeಜಿಲ್ಲಾಸುದ್ದಿಜಯಪುರ: ಅಮೃತ ಮಹೋತ್ಸವ ಮುಗಿಸಿದ ಶಾಲೆಯಲ್ಲೀಗ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ

ಜಯಪುರ: ಅಮೃತ ಮಹೋತ್ಸವ ಮುಗಿಸಿದ ಶಾಲೆಯಲ್ಲೀಗ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ

Telegram Group
Join Now

ಜಯಪುರ: ಸರ್ಕಾರದ ಸುತ್ತೋಲೆಯಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಶಾಂತಿಗ್ರಾಮದಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕಮವನ್ನು ನಡೆಸಲಾಯಿತು.

ಪೋಷಕರ ಮತ್ತು ಶಿಕ್ಷಕರ ಮಹಾಸಭೆಯನ್ನು ಮಾಡಿದ ನಂತರ ದಾಖಲಾತಿ ಹೊಂದಿದ ಮಕ್ಕಳಿಗೆ ಸ್ವಾಗತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮಕ್ಕಳ ಶೈಕ್ಷಣಿಕ ಪ್ರಗತಿ ಹೊಸ ಸೌಲಭ್ಯಗಳ ಪರಿಚಯದ ಜೊತೆಗೆ ವರ್ಷದಲ್ಲಿ ನೀಡಬೇಕಾದ ಸಮವಸ್ತ್ರ ಉಚಿತ ನೋಟ್ ಪುಸ್ತಕಗಳ ವಿತರಣೆ ಮಾಡಲಾಯಿತು.
ಪೋಷಕರಿಗೆ ಆರ್ಥಿಕವಾಗಿ ಹೊರೆ ಇಲ್ಲದ ಯೋಜನೆಗಳು ಉಚಿತ ಶಿಕ್ಷಣ ಇನ್ನಿತರ ಸೌಲಭ್ಯಗಳ ಕುರಿತಾಗಿ ಚರ್ಚಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸತೀಶ್ ಶೆಟ್ಟಿ ಅವರು ಇತ್ತೀಚೆಗಷ್ಟೇ ಶಾಲೆಯೂ ಅಮೃತ ಮಹೊತ್ಸವಕ್ಕೆ ಸಾಕ್ಷಿಯಾಗಿತ್ತು.
ಶಾಲೆಯಲ್ಲಿ ಎಲ್ಲಾ ಸೌಲಭ್ಯಗಳು ಇದ್ದು ಶಾಲೆಯ ಅಭಿವೃದ್ಧಿಯಾಗಿದೆ ಇನ್ನಷ್ಟು ಅಭಿವೃದ್ಧಿಗೂ ಹಳೆಯ ವಿದ್ಯಾರ್ಥಿಗಳ ಶ್ರಮಿಸಲಿದ್ದು ಇನ್ನಷ್ಟು ಸೌಲಭ್ಯಗಳನ್ನು ಬಲಪಡಿಸುವಲ್ಲಿ ಪೋಷಕರು ಮತ್ತು ಗ್ರಾಮದ ಎಲ್ಲರೂ ಸಹಕಾರ ನೀಡಿದಲ್ಲಿ ಶಾಲೆಯು ಒಂದು ಉತ್ತಮ ರೀತಿಯಲ್ಲಿ ತಲುಪುತ್ತದೆ ಎಂದರು.

ಈ ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಸದಸ್ಯರಾದ ಶ್ರೀಯುತ ಕಿಟ್ಟಯ್ಯ, ಅಮೃತ ಮಹೋತ್ಸವ ಆಚರಣೆ ಸಮಿತಿ ಅಧ್ಯಕ್ಷರಾದ ಶ್ರೇಣಿಕ್ ಜೈನ್, ದಾನಿಗಳಾದ ಶ್ರೀಯುತ ಕಾಳಪ್ಪ, ಮುಖ್ಯ ಶಿಕ್ಷಕರಾದ ಶ್ರೀ ಶ್ರೀನಿವಾಸ ನಾಯಕ್, ಅಂಗನವಾಡಿ ಕಾರ್ಯಕರ್ತೆಯಾದ ಶ್ರೀಮತಿ ಅಶ್ವಿನಿ, ಆಶಾ ಕಾರ್ಯಕರ್ತೆ ಶ್ರೀಮತಿ ಪ್ರೇಮ ಹಾಗೂ ಸಮಿತಿಯ ಎಲ್ಲಾ ಸದಸ್ಯರು ಪೋಷಕರು ಶಿಕ್ಷಕ ವೃಂದದವರು ಇದ್ದರು.

ವರದಿ: ಶಶಿ ಬೆತ್ತದಕೊಳಲು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments