ಚಿಕ್ಕಮಗಳೂರು : ಕರ್ನಾಟಕದ ಶಾಲಾ ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅನುಮತಿ ನೀಡಲಾಗಿದ್ದು ಇದರ ಕುರಿತು ಕಟ್ಟುನಿಟ್ಟಿನ ಸಾರ್ವಜನಿಕ ಚರ್ಚೆ ಆಗಬೇಕು ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ಎಂಎಲ್.ಸಿ SL ಭೋಜೇಗೌಡ ಆಗ್ರಹ ಪಡಿಸಿದ್ದಾರೆ.
ಹೌದು .. ಅವರು ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡುವಾಗ ಶಾಲಾ – ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಸರ್ಕಾರ ಅನುಮತಿ ನೀಡಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ಎಲ್ಲಾ ವಿದ್ಯಾರ್ಥಿಗಳು ಒಂದೇ ಎಂದು ಕಾಣಲು ಸಮವಸ್ತ್ರ ಇಟ್ಟಿರೋದು ಅದನ್ನ ಬಿಟ್ಟು ಹಿಜಾಬ್ ಧರಿಸಲು ಅನುಮತಿ ನೀಡಿದ್ದು ಖಂಡನೀಯ ಎಂದರು.
ಈ ವಿಷಯವನ್ನು ವಿಧಾನ ಪರಿಷತ್ ನಲ್ಲಿ ಚರ್ಚೆ ಮಾಡುತ್ತೇನೆ, ದೇವಸ್ಥಾನಕ್ಕೆ ಹೋಗುವಾಗ ವಸ್ತ್ರ ಸಂಹಿತೆ ಇದ್ದ ಹಾಗೆ ಶಾಲೆಗಳಲ್ಲೂ ಇರಬೇಕು ಎಂದು ಹೇಳಿದರು.
