Friday, July 17, 2026
Homeಜಿಲ್ಲಾಸುದ್ದಿಮಕ್ಕಳ ಯಶಸ್ಸಿನ ದಾರಿಯಲ್ಲಿ ಶಿಕ್ಷಕರ ಪಾತ್ರ ಮಹತ್ವ, ವಿದ್ಯಾರ್ಥಿಗಳು ಗುರುಗಳನ್ನು ಸದಾ ಸ್ಮರಿಸಬೇಕು :ಎಂ.ಎಸ್ ಅನಂತ್

ಮಕ್ಕಳ ಯಶಸ್ಸಿನ ದಾರಿಯಲ್ಲಿ ಶಿಕ್ಷಕರ ಪಾತ್ರ ಮಹತ್ವ, ವಿದ್ಯಾರ್ಥಿಗಳು ಗುರುಗಳನ್ನು ಸದಾ ಸ್ಮರಿಸಬೇಕು :ಎಂ.ಎಸ್ ಅನಂತ್

Telegram Group
Join Now

ಮೂಡಿಗೆರೆ: ಸರ್ಕಾರಿ ಪದವಿ ಪೂರ್ವ ಕಾಲೇಜು, (ಪ್ರೌಢ ಶಾಲಾ ವಿಭಾಗ) ಶಾಲಾ ಆರಂಭೋತ್ಸವ & ಮಹಾ ಪೋಷಕರ ಸಭೆಯು ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು sdmc ಅಧ್ಯಕ್ಷರಾದ ಶ್ರೀ ಎಂ. ಎಸ್. ಅನಂತ್ ರವರು ವಹಿಸಿ ಮಾತನಾಡಿದರು. ಅವರು ಮಕ್ಕಳ ಯಶಸ್ಸಿನ ದಾರಿಯಲ್ಲಿ ಶಿಕ್ಷಕರು ಬಹಳ ಶ್ರಮ ವಹಿಸುರುತ್ತಾರೆ ಶಿಕ್ಷಣ ಕ್ಷೇತ್ರವು ರಾಷ್ಟ್ರದ ಅಮೂಲ್ಯವಾದ ವೃತ್ತಿಯಲ್ಲಿ ತನ್ನದೇ ಮಹತ್ವ ಪಡೆದಿದೆ ಎಂದರು ಇದೆ ಸಂದರ್ಭದಲ್ಲಿ ಎಲ್ಲಾ ಮಕ್ಕಳಿಗೆ ಹೂಗುಚ್ಚ ನೀಡಿ ಸ್ವಾಗತಿಸಿದರು. ಪ್ರಾಸ್ತಾವಿಕ ನುಡಿಯನ್ನುಉಪಪ್ರಾಂಶುಪಾಲರಾದ ಡಾ. ಜಗದೀಶ ನಾಯ್ಕ. ಎಂ ನುಡಿದರು.

ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ & ಸಮವಸ್ತ್ರವನ್ನು ನೀಡಲಾಯಿತು. ಸಭೆಯಲ್ಲಿ SDMC ಉಪಾಧ್ಯಕ್ಷರಾದ ಶ್ರೀ ಪರಮೇಶ್ ವಿತರಿಸುದರು

ಈ ಸಭೆಯಲ್ಲಿ ಸದಸ್ಯರಾದ ಶ್ರೀಮತಿ ಪ್ರಿಯಾ, ಹಿರಿಯ ಶಿಕ್ಷಕರಾದ ಶ್ರೀಮತಿ ರೂಕ್ಸನ ಪರ್ವೀನ್, ಶ್ರೀಮತಿ ಲತಾ, ಶ್ರೀಮತಿ ರೇಣುಕಾ,ಶ್ರೀ ರವಿಕುಮಾರ್ ಶ್ರೀಮತಿ ಸುಜಾತ, ಶ್ರೀಮತಿ ಸವೀತ ಸೇರಿದಂತೆ ಪೋಷಕರು ಉಪಸ್ಥಿತರಿದ್ದರು

ಕಾರ್ಯಕ್ರಮವನ್ನು ಶ್ರೀಮತಿ ವಿಮಲಾಕ್ಸಿ ನಿರೂಪಿಸಿ, ಶ್ರೀಮತಿ ಮಣಿ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments