Saturday, July 18, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ಪ್ರಕೃತಿ ಪ್ರಿಯರ ಹಾಟ್‌ ಸ್ಪಾಟ್‌ ಕುದುರೆಮುಖ ಟ್ರೆಕ್ಕಿಂಗ್ʼಗೆ ಸಿಕ್ಕಿದೆ ಅನುಮತಿ: ಆನ್‌ಲೈನ್ ಬುಕ್ಕಿಂಗ್...

ಚಿಕ್ಕಮಗಳೂರು: ಪ್ರಕೃತಿ ಪ್ರಿಯರ ಹಾಟ್‌ ಸ್ಪಾಟ್‌ ಕುದುರೆಮುಖ ಟ್ರೆಕ್ಕಿಂಗ್ʼಗೆ ಸಿಕ್ಕಿದೆ ಅನುಮತಿ: ಆನ್‌ಲೈನ್ ಬುಕ್ಕಿಂಗ್ ಕಡ್ಡಾಯ!

Telegram Group
Join Now

ಚಿಕ್ಕಮಗಳೂರು: ಪಶ್ಚಿಮ ಘಟ್ಟಗಳ ಸೊಬಗನ್ನು ಸವಿಯಲು ಕಾತರದಿಂದ ಕಾಯುತ್ತಿದ್ದ ಚಾರಣ ಆಸಕ್ತರಿಗೆ ಸಂತಸದ ಸುದ್ದಿ. ಕುದುರೆಮುಖ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿರುವ ರಾಜ್ಯದ ಪ್ರಸಿದ್ಧ ಚಾರಣ ತಾಣ ಕುದುರೆಮುಖ ಟ್ರೆಕ್ಕಿಂಗ್ ಪಾಯಿಂಟ್‌ಗೆ ಚಾರಣಕ್ಕೆ ಅನುಮತಿ ನೀಡಲಾಗಿದೆ. ಹೌದು, ಚಾರಣಿಗರಿಗೆ ಸಂತಸದ ಸುದ್ದಿಯಿದು. ಅರಣ್ಯ ಇಲಾಖೆಯು ಕುದುರೆಮುಖ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿರುವ ಕುದುರೆಮುಖ ಶಿಖರ ಚಾರಣಕ್ಕೆ ಮುಕ್ತವಾಗಲಿದೆ. ಕಾಡ್ಗಿಚ್ಚು ಹತ್ತುವ ಸಾಧ್ಯತೆಯ ಕಾರಣ ಅರಣ್ಯ ಇಲಾಖೆ 3 ತಿಂಗಳು ಚಾರಣವನ್ನು ನಿರ್ಬಂಧಿಸಿತ್ತು, ಆದರೆ ಈಗ ಕುದುರೆಮುಖ ಮತ್ತು ನೇತ್ರಾವತಿ ಶಿಖರಗಳು ಚಾರಣಕೆ ಬೆಟ್ಟಗಳ ಅಧಿಕೃತವಾಗಿ ಅನುಮತಿ ನೀಡಿದೆ

ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳಲ್ಲಿರುವ ಕುದುರೆಮುಖ ಚಾರಣ ಪ್ರಕೃತಿ ಪ್ರಿಯರ ಹಾಟ್‌ ಸ್ಪಾಟ್‌. ಸುಮಾರು 22 ಕಿ.ಮೀ ದೂರದ ದಾರಿ ಕ್ರಮಿಸಲು 7ರಿಂದ 8 ಗಂಟೆಗಳ ಕಾಲ ನಡೆಯಬೇಕಾಗುತ್ತದೆ. ಹಚ್ಚ ಹಸಿರಿನ ಹುಲ್ಲುಗಾವಲುಗಳು, ಜಲಪಾತಗಳು ಮತ್ತು ದಟ್ಟವಾದ ಅರಣ್ಯ ಕ್ರಮಿಸುವಾಗ ಚಾರಣಿಗರಿಗೆ ದಣಿವಿನ ಪರಿವೆಯೂ ಇರದು. ಬೆಂಗಳೂರಿನಿಂದ 330 ಕಿ.ಮೀ , ಚಿಕ್ಕಮಗಳೂರಿನಿಂದ 94 ಕಿ.ಮೀ ದೂರದಲ್ಲಿದೆ ಈ ಚಾರಣಿಗರ ಸ್ವರ್ಗ.

ಅರಣ್ಯ ಇಲಾಖೆಯ ಅಧಿಕೃತ ಪೋರ್ಟಲ್ ಅರಣ್ಯ ವಿಹಾರʼಗೆ ಭೇಟಿ ನೀಡಿ. ಲಭ್ಯವಿರುವ ದಿನಾಂಕ ಮತ್ತು ಸಮಯವನ್ನು ಆಯ್ಕೆಮಾಡಿ. ನಿಮ್ಮ ಗುರುತಿನ ಚೀಟಿ ವಿವರಗಳನ್ನು ನೀಡಿ, ನಿಗದಿತ ಶುಲ್ಕವನ್ನು ಪಾವತಿಸಿ. ಚಾರಣದ ಅವಧಿಗಿಂತ ಹತಿಪ್ಪತ್ತು ನಿಮಿಷ ಮುನ್ನವೇ ಬೇಸ್‌ ಕ್ಯಾಂಪ್‌ ತಲುಪಲು ಮರೆಯದಿರಿ.ಅರಣ್ಯ ಇಲಾಖೆಯ ಅಧಿಕೃತ ವೆಬ್ಸೈಟ್‌ https://aranyavihaara.karnataka.gov.in/ ಭೇಟಿ ನೀಡುವ ಮೂಲಕ ಬುಕಿಂಗ್‌ ಕಾಯ್ದಿರಿಸಬಹುದಾಗಿದೆ. ಮುಂಗಡ ಬುಕ್ಕಿಂಗ್‌ ಕಡ್ಡಾಯವಾಗಿದ್ದು, ಆಫ್‌ಲೈನ್‌ ಅಥವಾ ಸ್ಥಳದಲ್ಲಿ ಟಿಕೆಟ್‌ ಪಡೆಯಲು ಅವಕಾಶಗಳಿರುವುದಿಲ್ಲ ಎಂದು ಇಲಾಖೆ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments