ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಬೆಂಗಳೂರಿನ ಬಿಜೆಪಿ ಕಛೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ, ಬರ ಪರಿಹಾರ ನೀಡಿಲ್ಲ ಎಂದು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
Bengaluru;ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಆರ್ ಅಶೋಕ್, ಸಿದ್ದರಾಮಯ್ಯ ಸರ್ಕಾರ ಬರ ಪರಿಹಾರ ಕೇಳಲು ಕೇಂದ್ರಕ್ಕೆ ಹೋಗಿ ಛೀಮಾರಿ ಹಾಕಿಸಿಕೊಂಡು ಬಂದಿದ್ದಾರೆ. ಮುಂಗಾರು ಬರ ಪರಿಹಾರ ಘೋಷಣೆ ಮಾಡಿರುವ ಇವರು ಹಿಂಗಾರು ಬರ ಘೋಷಣೆ ಮಾಡಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದರು.
ಇನ್ನು ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾದರೂ ರಾಜ್ಯದಲ್ಲಿ ಎಜುಕೇಷನ್‌ಗಾಗಿ ಯಾವ ಯೋಜನೆ ತಂದಿಲ್ಲ, ಹಾಗೂ ಇವರೆಗೂ ಸಹ ಯಾವುದೇ ಹೊಸ ಹೆದ್ದಾರಿ ಮಾಡಿಲ್ಲ.ಅರ್ಧಕ್ಕೆ ನಿಂತ ರಸ್ತೆ ಕಾಮಗಾರಿಗೆ ಹಣ ಬಿಡುಗಡೆ ಮಾಡಿಲ್ಲ. ಹೀಗಾಗಿ ಕಾಂಗ್ರೆಸ್ ನಾಯಕರಿಗೆ ಲೋಕ ಸಭೆ ಚುನಾವಣೆಯಲ್ಲಿ ಮತ ಕೇಳುವ ಹಕ್ಕಿಲ್ಲ ಎಂದು ವಿಪಕ್ಷ ನಾಯಕ ಆರ್ ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಮೋದಿ ಆಡಳಿತದಲ್ಲಿ ಯಾಕಾಗಿ ಸಾಲ ಮಾಡಿದ್ದಾರೆ..?
ಕೇಂದ್ರ ಸರ್ಕಾರದ ಪರವಾಗಿ ಮಾತಾನಾಡಿದ ವಿಪಕ್ಷ ನಾಯಕ, ದೇಶದ ಶಿಕ್ಷಣಕ್ಕಾಗಿ, ರಸ್ತೆ ಕಾಮಗಾರಿಗಾಗಿ, ಮೂಲ ಸೌಕರ್ಯ ಹೆಚ್ಚಿಸುವುದಕ್ಕಾಗಿ, ರೈಲ್ವೆ ಯೋಜನೆ ಅಭಿವೃದ್ಧಿ ಪಡಿಸಲು, ರಾಜ್ಯ ಹೆದ್ದಾರಿಗಳನ್ನು ಮಾಡಲು, ಜಲ ಜೀವನ್ ಅಭಿವೃದ್ಧಿಗಾಗಿ ಮೋದಿ ಸಾಲ ಮಾಡಿದ್ದಾರೆಂದು ಕೇಂದ್ರ ಸರ್ಕಾರ ಸಾಲದ ಬಗ್ಗೆ ಆರ್ ಅಶೋಕ್ ಸಮರ್ಥಿಸಿಕೊಂಡರು.
– ಕಾವ್ಯಶ್ರೀ ಕಲ್ಮನೆ