ಮೂಡಿಗೆರೆ: ರೈತ ಉತ್ಪಾದಕ ಸಂಸ್ಥೆಗಳು ದೇಶದ ಕೃಷಿ ಚಿತ್ರಣವನ್ನೇ ಬದಲಿಸಲಿದೆ ಎಂದು ಸಂಸ್ಥೆಯ ಅದ್ಯಕ್ಷೆ ಶೋಭಾ ನಾರಾಯಣ್ ತಿಳಿಸಿದರು. ಅವರು ,ಇಲ್ಲಿನ ಎಪಿಎಂಸಿ ಸಭಾಂಗಣದಲ್ಲಿ ನಡೆದ ಮಹಿಳಾ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಮತ್ತು ಟೆರ್ರಾ ಈಕೊ ಪ್ರೇನೇರ್ಸ್ ಎಲ್ಪಿಪಿ ಇವರ ಇವರ ಸಹಭಾಗಿತ್ವದಲ್ಲಿ ರೈತ ಉತ್ಪಾದಕ ಸಂಸ್ಥೆಯ ನಿರ್ವಹಣೆ ಮತ್ತು ಬೆಳವಣಿಗೆ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿ. ಮಹಿಳಾ ಉತ್ಪಾದಕ ಸಂಸ್ಥೆಗಳು ದೇಶದಲ್ಲೇ ಸಂಘಟಿತವಾಗುತ್ತಿದ್ದು. ರೈತೋತ್ಪದಕ ಸಂಸ್ಥೆಗಳಾಗಿ ಹೊರಹೊಮ್ಮುತಿವೆ. ಇವು ಸದಸ್ಯರಿಗೆ ಕೃಷಿಯಲ್ಲಿ ಸಮಗ್ರ ಆಧುನಿಕ ಮತ್ತು ತಾಂತ್ರಿಕ ಕೌಶಲ್ಯವನ್ನು ತಿಳಿಸಿ ಕೊಡುತ್ತಿದೆ. ಹಲವು ರೈತರು ಒಗ್ಗೂಡಿ ಬೆಳೆ ಬೆಳೆಯುವಲ್ಲಿಂದ ಕಟಾವು ಮಾಡಿ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುವ ಸಾಹಸ ತಿಳಿಸಿಕೊಡುತ್ತಿದೆ. ರೈತರಿಗೆ ಭೂಮಿ ಮತ್ತು ಬೆಳೆ ಬಗ್ಗೆ ವೈಜ್ಞಾನಿಕ ಶಿಕ್ಷಣ ದೊರೆತದಲ್ಲಿ ಯಾವುದೇ ಕಾರ್ಪೊರೇಟ್ ಕಂಪನಿ ಗಿಂತ ಹೆಚ್ಚು ಆದಾಯವನ್ನು ಭೂಮಿಯಿಂದ ಪಡೆಯಬಹುದು. ಈ ನಿಟ್ಟಿನಲ್ಲಿ ಸಂಸ್ಥೆಯ ಸದಸ್ಯರುಗಳ ಪಾತ್ರವು ಮಹತ್ವದಾಗಿದೆ. ರೈತರು ಖುಷಿಯ ಬೆನ್ನೆಲುಬಾಗಿ ಕಾರ್ಯನಿರ್ವಹಿಸಿದ್ದಲ್ಲಿ ಇದು ದೇಶ ಕಟ್ಟುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು.
ಮುಖ್ಯ ಅತಿಥಿ ರಾಂಪುರ ಸಿಇಒ ಶಿವರುದ್ರಪ್ಪ. ನಿರ್ದೇಶಕರು ಮತ್ತು ಸದಸ್ಯರಿಗೆ ಎಪ್ ಅರ್ಪಿ ಮ್ಯಾನೇಜ್ಮೆಂಟ್ ,ಹಣಕಾಸು ನಿರ್ವಹಣೆ ಮತ್ತು ಕಾನೂನು ಅನುಸರಣೆಗಳ ಬಗ್ಗೆ ತಿಳಿಸಿಕೊಟ್ಟರು. ಹಾಗೆ ಕಾಫಿ ಬೋರ್ಡ್ ನ ಸಂಪರ್ಕ ಅಧಿಕಾರಿಯದ ಮಂಜುನಾಥ್ ಎಪ್ಪಿಒ ಮತ್ತು ಕಾಫಿ ಪ್ಲಾಂಟರ್ ಗಳಿಗೆ ಕಾಫಿ ಬೋರ್ಡ್ ಇಂದ ಸಿಗುವ ಸಬ್ಸಿಡಿ ಸೌಲಭ್ಯದ ಮಾಹಿತಿ ನೀಡಿದರು.. ಶಾಲಿನಿ ಮಾತನಾಡಿ ಎನ್ ಅರ್ ಎಲ್ ಎಂ ಸಂಜೀವಿನಿ ಒಕ್ಕೂಟದ ಅಡಿಯಲ್ಲಿ ಸಿಗುವ ಹಲವಾರು ಸ್ಕೀಮ್ ಗಳ ಬಗ್ಗೆ ತಿಳಿಸಿದರು ..ಮೂಡಿಗೆರೆ . ಸಭೆಯಲ್ಲಿ ಟೆರ್ರಾ ಈಕೋಪ್ರೇನೇರ್ಸ್ ನ ಅವಿನಾಶ್ . ಉಪಾಧ್ಯಕ್ಷರಾದ ಸರೋಜ ಸುರೇಂದ್ರ ,ಕಾರ್ಯದರ್ಶಿ ಕೀರ್ತಿ ಕಿರಣ್ ,ಖಜಾಂಚಿ ಸುಚಿತ ಗಣೇಶ್, ನಿರ್ದೇಶಕರಾದ ಸುಜಾತ ಪ್ರಸನ್ನ ,ಮಧುರ ಜಯಂತ್, ಕೌಶಲ್ಯಾಆಶೋಕ್,ಸ್ವರೂಪ ಪ್ರಶಾಂತ್, ದೀಪ್ತಿ ಸುಬ್ರಾಯ್ ಮತ್ತು ಸದಸ್ಯರು ಉಪಸ್ಥಿತರಿದ್ದರು.
