ಕೊಪ್ಪ: ಮೇಗುಂದಾ ಹೋಬಳಿ ಜನತೆಯ ಬಹುದಿನದ ಬೇಡಿಕೆಯಾದ ಆಧಾರ್ ಕೇಂದ್ರಕ್ಕೆ ಮಾನ್ಯ ಸಂಸದರಾದ ಕೋಟಾ ಶ್ರೀನಿವಾಸ್ ಪೂಜಾರಿಯವರ ಮಾರ್ಗದರ್ಶನದಂತೆ ಇಂದು ಜಯಪುರದ ಬಿಎಸ್ಎನ್ಎಲ್ ಕೇಂದ್ರಕ್ಕೆ ಭೇಟಿ ನೀಡಿ ಸ್ಥಳಾವಕಾಶವನ್ನು ಬಿಎಸ್ಎನ್ಎಲ್ ನ ಎಜಿಎಮ್ ರಾದ ಗೋಪಾಲಕೃಷ್ಣ ರವರೊಂದಿಗೆ ಪರಿಶೀಲಿಸಲಾಯಿತು ಎಂದು ಜಿಲ್ಲಾ ದಿಶಾ ಸಮಿತಿ ಸದಸ್ಯರಾದ ಮಣಿಕಂಠನ್ ಕಂದಸ್ವಾಮಿ ಪತ್ರಿಕೆ ತಿಳಿಸಿದರು

ಆಧಾರ್ ಕೇಂದ್ರ ಪ್ರಕ್ರಿಯೆ ಟೆಂಡರ್ ಹಂತದಲ್ಲಿದ್ದು ಕನಿಷ್ಠ ಕಾಲಮಿತಿಯೊಳಗೆ ಜಯಪುರದಲ್ಲಿ ಆಧಾರ್ ಕೇಂದ್ರ ಉದ್ಘಾಟನೆಯಾಗಿ ಸಾರ್ವಜನಿಕ ಅನುಕೂಲಕ್ಕೆ ಚಾಲನೆ ದೊರಯಲಿದೆ ಎಂದರು .ಪ್ರಧಾನಿ ಮೋದಿಯವರ ಕನಸಿನ ಯೋಜನೆಯಾದ 4g ಸಚುರೇಶನ್ ಪ್ರೋಜೆಕ್ಟ್ ಅನುಷ್ಠಾನದ ಜೊತೆಗೆ ಈಗಾಗಲೇ ಸ್ಥಾಪಿತ ಬಿಎಸ್ಎನ್ಎಲ್ ಟವರ್ ಗಳ ವ್ಯವಸ್ಥಿತ ಸುಧಾರಿತ ಸಂಪರ್ಕಕ್ಕೆ ನಿರಂತರವಾಗಿ ಶ್ರಮಿಸುತ್ತಿರುವ ಸಂಸದರಾದ ಕೋಟ ಶ್ರಿನಿವಾಸ ಪೂಜಾರಿಯವರ ಮಾರ್ಗದರ್ಶನದಂತೆ ಸ್ಥಾಪಿತ ಹಾಗೂ ನೂತನ ಟವರ್ ಗಳ ಸ್ಥಾಪನೆ ಗೆ ಜಾಗಗಳ ಪರಿಶೀಲನೆ ಮಾಡಲಾಯಿತು ಎಂದರು .

ತಾಲ್ಲೂಕ್ ವ್ಯಾಪ್ತಿಯಲ್ಲಿ ಅನೇಕ ನೂತನ ಬಿಎಸ್ಎನ್ಎಲ್ ಟವರ್ ಗಳ ಸ್ಥಾಪನೆಯ ನಿಟ್ಟಿನಲ್ಲಿ ಜಾಗಗಳ ಗುರುತಿಸುವ ಸಲುವಾಗಿ ಜಲದುರ್ಗಾ , ಮೇಗುಂದಾ , ಯಡಗುಂದಾ , ಗುಡ್ಡೇತೋಟ , ಕಲ್ಲುಗುಡ್ಡೆ , ಹುಲುಗರಡಿ , ಹೊಸೂರು , ಕಾಳನಾಯಕಕಟ್ಟೆ ಮತ್ತು ಅಂದಗಾರು ಮುಂತಾದ ಜಾಗಗಳ ಪರಿಶೀಲನೆ ಮಾಡಲಾಗಿದೆ ಶೀಘ್ರ ಕಾರ್ಯಗಳನ್ನು ಅನುಷ್ಠಾನಗೊಳಿಸಲಾಗುದೆಂದು ಬಿಎಸ್ಎನ್ಎಲ್ ಎಜಿಎಮ್ ಗೋಪಾಲಕೃಷ್ಣ ಹೇಳಿದರು.

ಸಂದರ್ಭದಲ್ಲಿ ಮಾಜಿ ಸದಸ್ಯರುಗಳಾದ ಪ್ರವೀಣ್ ಕುಮಾರ್ , ಜಯಮುರುಗೇಶ್ , ಶ್ರೀನಿವಾಸ್ ಕಟ್ಟೇಮನೆ , ಮಂಜುನಾಥ್ ಅಣ್ಣು , ಪಧ್ಮನಾಭ ಮೇಗೂರು , ಶ್ರೀನಾಥ , ಪಬನಜಯ್ಯ , ನವೀನ್ ಕಲ್ಲುಗುಡ್ಡೆ , ಶಿವು ಹಾಗೂ ಇತರಿದ್ದರು.

ವರದಿ: ಶಶಿ ಬೆತ್ತದಕೊಳಲು
