Friday, September 11, 2026
Homeಕ್ರೈಮ್ಎನ್.ಆರ್.ಪುರ: ಕಾಂಗ್ರೆಸ್‌ ಕಾರ್ಯಕರ್ತನಿಂದ ಕೆಫೆ ಹುಡುಗನ ಮೇಲೆ ಮನಸೋ ಇಚ್ಛೆ ಹಲ್ಲೆ!

ಎನ್.ಆರ್.ಪುರ: ಕಾಂಗ್ರೆಸ್‌ ಕಾರ್ಯಕರ್ತನಿಂದ ಕೆಫೆ ಹುಡುಗನ ಮೇಲೆ ಮನಸೋ ಇಚ್ಛೆ ಹಲ್ಲೆ!

Telegram Group
Join Now

ಎನ್.ಆರ್.ಪುರ: ಕರೆದ ಕೂಡಲೇ ಬರಲಿಲ್ಲ ಎಂದು ಕೈ ಕಾರ್ಯಕರ್ತನಿಂದ ಕೆಫೆ ಹುಡುಗ ಮೇಲೆ ಮನಸೋ ಇಚ್ಛೇ ಹಲ್ಲೆ ನಡೆಸಿದ ಘಟನೆ ಚಿಕ್ಕಮಗಳೂರಿನ ಎನ್.ಆರ್.ಪುರ ಪಟ್ಣಣದ ಸಿಂಸೆ ಗ್ರಾಮದಲ್ಲಿ ನಡೆದಿದೆ.

ಹೌದು ..ಕರೆದ ಕೂಡಲೇ ಬರಲಿಲ್ಲ ಅಂತ ಸಿಟ್ಟಿಗೆದ್ದ ಕಾಂಗ್ರೆಸ್‌ ಕಾರ್ಯಕರ್ತ ಹರ್ಷ ಹಾಗೂ ಆತನ ಸ್ನೇಹಿತ ಶಶಿ ಕೆಫೆ ಹುಡುಗ ಮೇಲೆ ಮನಸೋ ಇಚ್ಛೇ ಹಲ್ಲೆ ನಡೆಸಿದ್ದಾರೆ.

ಬುಧವಾರ ರಾತ್ರಿ ಹರ್ಷ ಹಾಗೂ ಶಶಿ ಕಾರು ನಿಲ್ಲಿಸಿ ಕೆಫೆ ಹುಡುಗ ನ ಪಾಳದ ಬಾಬುರಾಮ್‌ನ ಕರೆದಿದ್ದಾರೆ. ಆದ್ರೆ, ಆತ ಬರೋದು ಲೇಟಾಗಿದೆ. ಇಷ್ಟಕ್ಕೆ ಸಿಟ್ಟಾದ ಇವರು ಓಡಿಸಿಕೊಂಡು ಹೋಗಿ ಕೆಫೆ ಒಳಗೆ ಚೇರ್‌ ಎತ್ತಿ, ಹಿಗ್ಗಾಮುಗ್ಗಾ ಹೊಡೆದಿದ್ದಾರೆ. ಆ ಸಮಯದಲ್ಲಿ ಕೆಫೆ ಓನರ್‌ ಬಿಡಿಸಲು ಬಂದಿದ್ದಾರೆ. ನಂತರ 112ಗೆ ಫೋನ್ ಮಾಡಿದ ಓನರ್‌ಗೆ ಎಫ್.ಐ.ಆರ್. ಮಾಡ್ಸು ಒಂದು ಕೈ ನೋಡ್ಕಂತೀನಿ ಎಂದು ಆವಾಜ್ ಕೂಡ ಬಿಟ್ಟಿದ್ದಾರೆ.

ಹಲ್ಲೆಗೊಳಗಾದ ಬಾಬುರಾಮ್ ಕೈ, ಕಾಲಿನಲ್ಲಿ ರಕ್ತಸ್ರಾವವಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!