Friday, September 11, 2026
Homeಕ್ರೈಮ್Mudigere: ಹಿರಿಯರ ನಡುವಿನ ವೈಯಕ್ತಿಕ ದ್ವೇಷ: ಬಾಲಕನಿಗೆ ಸೈಕಲ್‌ನಿಂದ ಡಿಕ್ಕಿ ಹೊಡೆಸಿ ಗಾಯ: ಪೊಲೀಸ್...

Mudigere: ಹಿರಿಯರ ನಡುವಿನ ವೈಯಕ್ತಿಕ ದ್ವೇಷ: ಬಾಲಕನಿಗೆ ಸೈಕಲ್‌ನಿಂದ ಡಿಕ್ಕಿ ಹೊಡೆಸಿ ಗಾಯ: ಪೊಲೀಸ್ ಠಾಣೆಗೆ ದೂರು

Telegram Group
Join Now

ಮೂಡಿಗೆರೆ:  ಅಕ್ಕ ಪಕ್ಕದ ಮನೆಯವರ ಕಲಹಕ್ಕೆ ಚಿಕ್ಕ ಹುಡುಗನ ಮೇಲೆ ಸೈಕಲ್ ನಿಂದ ಗುದ್ದಿಸಿ ಗಾಯಗೊಳಿಸಿದ ಘಟನೆ ಗೋಣಿಬೀಡು ಠಾಣಾ ವ್ಯಾಪ್ತಿಯ ಗಾಡಿಚೌಕದಲ್ಲಿ ನಡೆದಿದೆ

ಹೌದು… ಹಿರಿಯರ ನಡುವಿನ ವೈಯಕ್ತಿಕ ದ್ವೇಷ ಅಥವಾ ಕಲಹಕ್ಕೆ ಅಮಾಯಕ ಮಕ್ಕಳನ್ನು ಗುರಿಯಾಗಿಸುವುದು ಕಾನೂನುಬಾಹಿರ ಮತ್ತು ಅತ್ಯಂತ ಖಂಡನೀಯ ಅಪರಾಧವಾಗಿದೆ. ಸೈಕಲ್‌ನಿಂದ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆಸಿ ಮಗುವಿಗೆ ಗಾಯಗೊಳಿಸಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು  ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ

ಆರ್ಯನ್ ಎಂಬ ಬಾಲಕ ಗಾಡಿಚೌಕ ಗ್ರಾಮದಿಂದ ಗೋಣಿಬೀಡು ಶಾಲೆಗೆ ತೆರಳುವಾಗ ಮನೆಯ ಸ್ವಲ್ಪ ದೂರದಲ್ಲಿ ರೂಪರಾಜು ಎಂಬುವರ ಮನೆ ಬಳಿ ಶಾಲೆಗೆಂದು ನಡೆದುಕೊಂಡು ಹೋಗುವಾಗ ಪಕ್ಕದ ಮನೆಯ ಸುರೇಶ್ ಎಂಬುವರ ಮಗ ಹಿಂಬದಿಯಿಂದ ಸೈಕಲ್ ನಿಂದ ಗುದ್ದಿ ಗಾಯಗೊಳಿಸಿದ್ದು ಹಲವಾರು ಬಾರಿ ಇಂತಹ ಕೃತ್ಯ ಎಸಗಿದ್ದು ಸುರೇಶ್ ಹಾಗೂ ಅವರ ಮಗನನ್ನು ಠಾಣೆಗೆ ಕರೆಸಿ ಬುದ್ದಿವಾದ ಹೇಳುವಂತೆ ಗೋಣಿಬೀಡು ಠಾಣೆಯಲ್ಲಿ ದೂರು ನೀಡಿದ್ದಾರೆ.

ಈ ಕುರಿತು ಸುದ್ಧಿಗಾರರೊಂದಿಗೆ ಮಾತನಾಡಿದ ಆರ್ಯನ್ ತಾಯಿ ಸುಶೀಲ ಅವರು ಚಿಕ್ಕ ವಯಸಿನಲ್ಲಿ ಇಂತಹ ಮನಸ್ಥಿತಿ ಹೊಂದಿರುವ ಬಾಲಕನ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದ್ದು ಮಗನ ಮೇಲಿನ ಹಲ್ಲೆ ತೀವ್ರ ಖಂಡಿಸಿದ್ದಾರೆ. ಬಾಲಕನನ್ನು ಪೊಲೀಸ್ ಠಾಣೆಗೆ ಕರೆಸುವ ಮನಸ್ಥಿತಿ ನಮ್ಮದಲ್ಲ ಸಣ್ಣ ವಯಸ್ಸಿಗೆ ಇಂತಹ ಮನಸ್ಥಿತಿ ಕಂಡು ಬಂದರೆ ಮುಂದೆ ಏನಾದರು ಸಮಸ್ಯೆ ಮಾಡುವ ಭಯದಲ್ಲಿ ನಾವು ಸೂಕ್ತ ಕ್ರಮ ಕೈಗೊಳ್ಳಲಿ ಎಂಬುದಾಗಿ ಠಾಣಾಧಿಕಾರಿಗೆ ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!