Monday, July 27, 2026
Homeಬ್ರೇಕಿಂಗ್ ನ್ಯೂಸ್Student Free Bus Pass:‌ ವಿದ್ಯಾರ್ಥಿಗಳೇ ಗಮನಿಸಿ, ಉಚಿತ ಬಸ್ ಪಾಸ್ʼಗೆ ಅರ್ಜಿ ಸಲ್ಲಿಕೆಗೆ ಏನೇನು...

Student Free Bus Pass:‌ ವಿದ್ಯಾರ್ಥಿಗಳೇ ಗಮನಿಸಿ, ಉಚಿತ ಬಸ್ ಪಾಸ್ʼಗೆ ಅರ್ಜಿ ಸಲ್ಲಿಕೆಗೆ ಏನೇನು ದಾಖಲೆಗಳು ಬೇಕು ಗೊತ್ತಾ ಇಲ್ಲಿದೆ ಡಿಟೇಲ್ಸ್!

Telegram Group
Join Now

ಡಿಕೆ ಶಿವಕುಮಾರ್ ಅವರು ಬುಧವಾರ ರಾಜ್ಯದ 18ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ರಾಜ್ಯದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದ್ದು, ಎಲ್ಲಾ ಶಾಲಾ, ಕಾಲೇಜ್ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಹೌದು .. ಈ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ  ವ್ಯಾಪ್ತಿಯಲ್ಲಿ ಸದ್ಯ ಪಾಸ್ ಪಡೆಯಲು ಇರುವ ನಿಯಮಗಳು, ಹಾಗೂ ಇನ್ನು ಮುಂದೆ ಉಚಿತ ಪಾಸ್ ಪ್ರಕ್ರಿಯೆ ಹೇಗೆ ನಡೆಯಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿದ್ಯಾರ್ಥಿಗಳು ಯಾವುದೇ ಸೈಬರ್ ಸೆಂಟರ್, ಬೆಂಗಳೂರು ಒನ್ ಕೇಂದ್ರಗಳು ಅಥವಾ ತಮ್ಮ ಮೊಬೈಲ್ ಮೂಲಕ ‘ಸೇವಾಸಿಂಧು’ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಸೈಬರ್ ಸೆಂಟರ್‌ಗಳಲ್ಲಿ ಅರ್ಜಿ ಸಲ್ಲಿಸಲು ಫಾರ್ಮ್‌ಗೆ 10 ರೂ. ಹಾಗೂ ಆನ್‌ಲೈನ್ ಸಲ್ಲಿಕೆಗಾಗಿ 100 ರೂ. ಸೇವಾ ಶುಲ್ಕ ಇರಲಿದೆ.

ವಿದ್ಯಾರ್ಥಿಯ ಆಧಾರ್ ಕಾರ್ಡ್, ಪ್ರಸ್ತುತ ಸಾಲಿನ ಕಾಲೇಜು ಪ್ರವೇಶಾತಿ ರಶೀದಿ (Admission Receipt) ಹಾಗೂ ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು ಇರಬೇಕು.

ಆನ್‌ಲೈನ್ ಅಪ್ಲಿಕೇಶನ್ ಹಾಕಿದ ನಂತರ, ವಿದ್ಯಾರ್ಥಿಯು ತಾನು ಓದುತ್ತಿರುವ ವಿದ್ಯಾಸಂಸ್ಥೆಯ ಮುಖ್ಯಸ್ಥರಿಂದ (ಪ್ರಾಂಶುಪಾಲರು/ಮುಖ್ಯೋಪಾಧ್ಯಾಯರು) ಸಹಿ ಮತ್ತು ಸೀಲು ಹಾಕಿಸಿಕೊಳ್ಳಬೇಕು.

ಈ ಅರ್ಜಿಯನ್ನು ಬಿಎಂಟಿಸಿ ಪಾಸ್ ವಿಭಾಗದವರು ಪರಿಶೀಲಿಸಿ ಅನುಮೋದನೆ ನೀಡುತ್ತಾರೆ. ಅಪ್ರೂವಲ್ ಆದ ತಕ್ಷಣ ವಿದ್ಯಾರ್ಥಿಯ ಮೊಬೈಲ್‌ಗೆ ಸಂದೇಶ (SMS) ಬರುತ್ತದೆ.

ಮೊಬೈಲ್‌ಗೆ ಮೆಸೇಜ್ ಬಂದ ನಂತರ ಮೆಜೆಸ್ಟಿಕ್, ಕೆಂಗೇರಿ, ಶಾಂತಿನಗರ, ಎಲೆಕ್ಟ್ರಾನಿಕ್ ಸಿಟಿ, ಹೊಸಕೋಟೆ ಹಾಗೂ ಆನೇಕಲ್ ಬಸ್ ನಿಲ್ದಾಣಗಳಲ್ಲಿ (TTMC) ಪಾಸ್ ಪಡೆದುಕೊಳ್ಳಬಹುದು. ಆದರೆ, ಇಲ್ಲಿ ಈ ಹಿಂದೆ ನಿಗದಿಪಡಿಸಿದ್ದ ಪಾಸಿನ ಮೊತ್ತವನ್ನು ಪಾವತಿಸುವ ಅಗತ್ಯವಿರುವುದಿಲ್ಲ, ಉಚಿತವಾಗಿ ಪಾಸ್ ನೀಡಲಾಗುತ್ತದೆ.

ಶಕ್ತಿ ಯೋಜನೆ ಅಡಿಯಲ್ಲಿ ಈಗಾಗಲೇ ರಾಜ್ಯದ ಎಲ್ಲಾ ಮಹಿಳಾ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ಇರುವುದರಿಂದ ಅವರು ಪ್ರತ್ಯೇಕವಾಗಿ ಪಾಸ್ ಪಡೆಯುವ ಅಗತ್ಯವಿಲ್ಲ. ಕೇವಲ ವಿದ್ಯಾರ್ಥಿಗಳು (ಗಂಡು ಮಕ್ಕಳು) ಮಾತ್ರ ಮುಖ್ಯಮಂತ್ರಿಗಳು ಘೋಷಿಸಿರುವ ಈ ಉಚಿತ ಬಸ್ ಪಾಸಿಗೆ ಅರ್ಜಿ ಸಲ್ಲಿಸಬೇಕಾಗಿದೆ.

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಈ ಐತಿಹಾಸಿಕ ‘ಉಚಿತ ಬಸ್ ಪಾಸ್‘ ಘೋಷಣೆಯಿಂದಾಗಿ ಇನ್ನು ಮುಂದೆ ವಿದ್ಯಾರ್ಥಿಗಳು ಮೇಲ್ಕಂಡ ಯಾವುದೇ ಶುಲ್ಕವನ್ನು ಭರಿಸಬೇಕಾಗಿಲ್ಲ. ಕೇವಲ ಆನ್‌ಲೈನ್‌ನಲ್ಲಿ ನಿಯಮಾನುಸಾರ ಅರ್ಜಿ ಸಲ್ಲಿಸಿ ಉಚಿತವಾಗಿ ಪಾಸ್ ಪಡೆಯಬಹುದು!

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments