ಚಿಕ್ಕಮಗಳೂರು : ಜಿಲ್ಲೆಯ ಅಜ್ಜಂಪುರ ಪಟ್ಟಣ ಪಂಚಾಯಿತಿಯಲ್ಲಿ ಉಪಾಧ್ಯಕ್ಷೆ ಬದಲಿಗೆ ಆಕೆಯ ಪತಿ ಅಧಿಕಾರ ಚಲಾಯಿಸಿದ ಆರೋಪ ಕೇಳಿ ಬಂದಿದೆ. ಉಪಾಧ್ಯಕ್ಷೆ ಶೋಭಾರ ಪತಿ ಸಂತೋಷ್ ಸಭೆ ನಡೆಸಿ, ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ವಿಡಿಯೋ ವೈರಲ್ ಆಗಿದ್ದು, ಪತ್ನಿಯ ಪವರ್ನ್ನ ಗಂಡ ಟೇಕ್ ಓವರ್ ಮಾಡಿದ್ದಾರೆ ಅಂತಾ ಹೇಳಲಾಗ್ತಿದೆ.
ಪತ್ನಿ ಶೋಭಾ ಪಕ್ಕದಲ್ಲೇ ಕುಳಿತಿದ್ದ ಪತಿ ಸಂತೋಷ್ ಕೆಲ ವಿಚಾರಗಳ ಬಗ್ಗೆ ಅಧಿಕಾರಿಗಳನ್ನ ಪ್ರಶ್ನಿಸಿದ್ದಾರೆ ನಂತರ ಏರು ಧ್ವನಿಯಲ್ಲಿ ʻನಾನೇ ಉಪಾಧ್ಯಕ್ಷʼ ಅನ್ನೋ ರೀತಿ ತರಾಟೆ ತೆಗೆದುಕೊಂಡಿದ್ದಾರೆ. ಚುನಾಯಿತ ಪ್ರತಿನಿಧಿಯಾಗಿರುವ ಉಪಾಧ್ಯಕ್ಷೆಯ ಬದಲಿಗೆ ಅಧಿಕಾರ ಚಲಾಯಿಸಿರೋ ಸಂತೋಷ್ ನಡೆಗೆ ಆಕ್ಷೇಪ ವ್ಯಕ್ತಪವಾಗಿದೆ.
ಉಪಾಧ್ಯಕ್ಷೆ ಪತಿ ಯಾವ ಅಧಿಕಾರದ ಆಧಾರದ ಮೇಲೆ ಅಧಿಕಾರಿಗಳ ಸಭೆ ನಡೆಸಿದ್ದಾರೆ ಅನ್ನೋದನ್ನ ಸ್ಪಷ್ಟಪಡಿಸಿ ಅಂತಾ ವಿಪಕ್ಷ ಒತ್ತಾಯಿಸಿದೆ. ಒಟ್ನಲ್ಲಿ ಅಜ್ಜಂಪುರ ಪಟ್ಟಣ ಪಂಚಾಯಿತಿಯ ಉಪಾಧ್ಯಕ್ಷೆಯ ಪತಿಯ ನಡೆ ಚರ್ಚೆಗೆ ಗ್ರಾಸವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಏನ್ ಕ್ರಮ ಕೈಗೊಳ್ತಾರೆ ಕಾದು ನೋಡಬೇಕಿದೆ.
