ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಲ್ಲಿ ಪಾಕ್ನ ಗೋಹರ್ ಶಾಹಿ ಅನುಯಾಯಿ ಸಮಾಧಿ ವಿಚಾರ ವಿವಾದ ಎಬ್ಬಿಸಿದೆ. ಗೋಹರ್ ಶಾಹಿ ಬೆಂಬಲಿಗನಾಗಿದ್ದ ರಿಜ್ವಾನ್ ಸಮಾಧಿಗೆ ಹಸಿರು ಬಟ್ಟೆ ಹೊದಿಸಿ, ಕಲ್ಮಾ ತಿದ್ದುಪಡಿ ಮಾಡಿ ಬರಹ ಬರೆಯಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಇದರಿಂದ ಕೆರಳಿ ಕೆಂಡವಾಗಿರೋ ಮುಸ್ಲಿಂ ಸಮುದಾಯ ಕ್ರಮಕ್ಕೆ ಆಗ್ರಹಿಸಿದೆ. ವಿವಾದದ ಕೇಂದ್ರ ಬಿಂದುವಾಗಿರೋ ರಿಜ್ವಾನ್ ಎಂಬಾತನ ಅಂತ್ಯಕ್ರಿಯೆಯನ್ನ ಕಳೆದ ವರ್ಷ ನಗರದ ಇಂದಾವರದ ಖಬರಸ್ಥಾನದಲ್ಲಿ ನೆರವೇರಿಸಲಾಗಿತ್ತು. ಆದ್ರೆ ಈಗ ವರ್ಷದ ಬಳಿಕ ಆತನ ಸಮಾಧಿಗೆ ಹಸಿರು ಬಟ್ಟೆ ಹೊದಿಸಿ ಗೋರಿ ನಿರ್ಮಾಣಕ್ಕೆ ಯತ್ನಿಸಲಾಗಿದೆಯಂತೆ.
ಇದು ಮುಸ್ಲಿಂ ಸಮುದಾಯಕ್ಕೆ ಮಾಡಿದ ಅವಮಾನ ಅಂತಾ ಸ್ಥಳದಲ್ಲಿ ಜಮಾಯಿಸಿದ ಮುಖಂಡರು ಆಕ್ರೋಶ ಹೊರ ಹಾಕಿದ್ದಾರೆ. ಈ ವೇಳೆ ಮೃತ ರಿಜ್ವಾನ್ ಸಹೋದರ ಡಿಎಆರ್. ಪೊಲೀಸ್ ಬರ್ಕತ್ ಹಾಗೂ ಮುಸ್ಲಿಂ ಲೀಡರ್ಸ್ ಮಧ್ಯೆ ಮಾತಿನ ಚಕಮಕಿಯೂ ನಡೆದಿದೆ.
ಸದ್ಯ ಸಮಾಧಿ ಬಳಿಯಿರುವ ಆಕ್ಷೇಪಾರ್ಹ ಬರಹ, ಹಸಿರು ಬಟ್ಟೆ ತೆರವುಗೊಳಿಸುವಂತೆ ಮುಸ್ಲಿಂ ಮುಖಂಡರು, ಎಸ್ಪಿಗೆ ನೀಡಿದ್ದು, ವಿವಾದ ಮತ್ತೆ ಯಾವ ಹಂತ ತಲುಪುತ್ತೋ ಗೊತ್ತಿಲ್ಲ ಕಾದುನೋಡಬೇಕು ಅಷ್ಟೇ.
