Thursday, June 11, 2026
Homeಜಿಲ್ಲಾಸುದ್ದಿFree Health Camp: ಜೆಸಿಐ ಬಾಳೆಹೊನ್ನೂರು ಕ್ಲಾಸಿಕ್ ವತಿಯಿಂದ ಉಚಿತ ಕಣ್ಣಿನ ತಪಾಸಣೆ & ರಕ್ತದಾನ...

Free Health Camp: ಜೆಸಿಐ ಬಾಳೆಹೊನ್ನೂರು ಕ್ಲಾಸಿಕ್ ವತಿಯಿಂದ ಉಚಿತ ಕಣ್ಣಿನ ತಪಾಸಣೆ & ರಕ್ತದಾನ ಶಿಬಿರ!

ಜೆಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆಯು, ಹೋಲಿಕ್ರಾಸ್ ಆಸ್ಪತ್ರೆ, ಜ್ಯೋತಿನಗರ, ಚಿಕ್ಕಮಗಳೂರು ಮತ್ತು ಹೋಲಿಕ್ರಾಸ್ ಆಸ್ಪತ್ರೆ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ಉಚಿತ ಕಣ್ಣಿನ ತಪಾಸಣೆ ಹಾಗೂ ರಕ್ತದಾನ ಶಿಬಿರವನ್ನು ಆಯೋಜಿಸಿದೆ.

ಭಾನುವಾರ ಅಂದ್ರೆ ಜೂನ್‌ 14ರಂದು ಬಾಳೆಹೊನ್ನೂರಿನ ಜೆಸಿಐನಲ್ಲಿ ಹೋಲಿಕ್ರಾಸ್‌ ಆಸ್ಪತ್ರೆಯ ವೈದ್ಯರಿಂದ ಉಚಿತ ಕಣ್ಣಿನ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದ್ದು ಬೆಳಗ್ಗೆ 9 ಗಂಟೆಗೆ ಶಿಬಿರ ಆರಂಭಗೊಳ್ಳಲಿದೆ.

ಹೆಚ್ಚಿನ ಮಾಹಿತಿಗಾಗಿ 9886693020 ಅಥವಾ 9449412727 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.

ಶಿಬಿರಕ್ಕೆ ಆಗಮಿಸುವ ಆಗುವ ಎಲ್ಲಾ ನಾಗರಿಕರಿಗೆ ಜೆಸಿ ಚೆಕ್‌ ಅಪ್‌ ಕಾರ್ಡ್ ನೀಡಲಾಗುವುದು. ಈ ಕಾರ್ಡ್ ತೋರಿಸುವ  ಎಲ್ಲಾ ಸದಸ್ಯರಿಗೆ ಹಾಸ್ಪಿಟಲ್ ಭೇಟಿಯಾದಾಗ ಆಪರೇಷನ್ ಇದ್ದರೆ 50% ರಿಯಾಯಿತಿ ದೊರೆಯುತ್ತದೆ.

ನಿಮ್ಮ ರಕ್ತದಾನವು ಮತ್ತೊಬ್ಬರ ಜೀವನದಲ್ಲಿ ನಗು ಮೂಡಿಸುತ್ತದೆ ಮತ್ತು ಒಂದು ದಾನದಿಂದ ಅನೇಕ ಜೀವಗಳನ್ನು ಉಳಿಸಬಹುದು” ಎಂಬ ಸಂದೇಶದೊಂದಿಗೆ, ಈ ಮಹತ್ತರ ಕಾರ್ಯಕ್ರಮಕ್ಕೆ ಸಾರ್ವಜನಿಕರನ್ನು ಆತ್ಮೀಯವಾಗಿ ಆಹ್ವಾನಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!